ಎಸ್.ಪಿ.ಬಾಲಸುಬ್ರಹ್ಮಣ್ಯಂ
From Wikipedia
ಭಾರತೀಯ ಚಿತ್ರರಂಗದಲ್ಲಿ ಅದರಲ್ಲೂ ದಕ್ಷಿಣ ಭಾರತ ಚಿತ್ರರಂಗದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಬಹಳ ಪ್ರಸಿದ್ಧ ಹಿನ್ನೆಲೆ ಗಾಯಕರು(ಪೂರ್ಣ ಹೆಸರು "ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ"). ಕನ್ನಡ, ತಮಿಳು, ತೆಲುಗು, ಮಳಯಾಳಂ, ಹಿಂದಿ, ಒರಿಯಾ, ಅಸ್ಸಾಮಿ, ಪಂಜಾಬಿ, ಬೆಂಗಾಲಿ ಮತ್ತು ತುಳು ಹೀಗೆ ಹಲವಾರು ಭಾಷೆಗಳಲ್ಲಿ ಹಾಡಿರುವ ಇವರು ಸುಮಾರು ೩೬,೦೦೦ ಕ್ಕೊ ಹೆಚ್ಚು ಹಾಡುಗಳನ್ನು ಹಾಡಿ ಜಗತ್ತಿನಲ್ಲೇ ಅತಿ ಹೆಚ್ಚು ಹಾಡುಗಳನ್ನು ಹಾಡಿರುವ ಗಿನ್ನಿಸ್ ದಾಖಲೆ ಮಾಡಿದ್ದಾರೆ.(ಅತಿ ಹೆಚ್ಚು ಗೀತೆಗಳನ್ನು ಹಾಡಿದ ಗಾಯಕಿ ಎಂಬ ಖ್ಯಾತಿ ಲತಾ ಮಂಗೇಶ್ಕರ್ ಅವರಿಗೆ ಸಲ್ಲುತ್ತದೆ).ಹಿಂದಿ ಭಾಷೆಯನ್ನು ನಿರರ್ಗಳವಾಗಿ ಮಾತನಾಡಲಾರರಾದರೂ, ಅವರ ಗಾಯನದಲ್ಲಿರುವ ಭಾವಪೂರ್ಣತೆ ಹಿಂದಿಯಲ್ಲಿಯೂ ಅವರನ್ನು ಜನಪ್ರಿಯ ಗಾಯಕರನ್ನಾಗಿ ಮಾಡಿದೆ. ಗಾಯನದಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆಯನ್ನು ಸ್ವಾಗತಿಸುವ ಎಸ್‍ಪಿ, ಇದರಿಂದ ಫಲಿತಾಂಶ ಮತ್ತು ವೇಗ ಹೆಚ್ಚುತ್ತದೆಯೆನ್ನುತ್ತಾರೆ.
೧೯೪೬ ಜೂನ್ ೪ ರಂದು ಆಂಧ್ರ ಪ್ರದೇಶದ ಕೊಣೆನಂಪೇಟ್ (ಈಗ ಇದು ತಮಿಳುನಾಡಿಗೆ ಸೇರಿದೆ) ಎಂಬಲ್ಲಿ ಜನಿಸಿದರು. ಇವರ ತಂದೆ ಎಸ್.ಪಿ.ಸಾಂಬಮೂರ್ತಿಯರು [[ಸಂಗೀತ] ಮತ್ತು ಹರಿಕತೆ ಗಳಲ್ಲಿ ಖ್ಯಾತಿ ಪದೆದಿದ್ದರು. ಶಾಸ್ತ್ರೀಯ ಸಂಗೀತವನ್ನು ಗುರುಮುಖೇನ ಅಭ್ಯಾಸ ಮಾಡದಿದ್ದರೂ ಎಳೆ ವಯಸ್ಸಿನಲ್ಲೇ ಹಾಡುಗಾರಿಕೆ ಇವರಿಗೆ ಅಚ್ಚುಮೆಚ್ಚಾಗಿತ್ತು. ಎಸ್‍ಪಿಬಿ ತಮ್ಮ ತಂದೆಯಿಂದ ಸಂಗೀತದ ಪ್ರಾಥಮಿಕ ಪಾಠಗಳನ್ನು ಪಡೆದು ಕೊಳಲು ಮತ್ತು ಹಾರ್ಮೋನಿಯಮ್ ಗಳನ್ನು ಕಲಿತರು. ಅವರ ಧ್ವನಿಯ ಶ್ರೀಮಂತಿಕೆ ಮತ್ತು ವ್ಯಾಪ್ತಿ ಅವರ ಗಾಯನ ಜನಪ್ರಿಯವಾಗುವಂತೆ ಮಾಡಿವೆ. ೧೯೬೬ ರಲ್ಲಿ ತೆರೆಕಂಡ ತೆಲುಗಿನ "ಶ್ರೀ ಶ್ರೀ ಮರ್ಯಾದಾ ರಾಮಣ್ಣ" ಎಂಬ ಚಿತ್ರದಲ್ಲಿ ಹಾಡುವುದರೊಂದಿಗೆ ಚಲನಚಿತ್ರ ರಂಗಕ್ಕೆ ಪಾದರ್ಪಣೆ ಮಾಡಿದರು. ಕನ್ನಡದಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ಬಹುತೇಕ ಎಲ್ಲ ನಟರಿಗೂ, ಎಲ್ಲ ಸಂಗೀತ ನಿರ್ದೇಶಕರಿಗೂ ಹಾಡಿರುವ ಎಸ್.ಪಿ.ಬಿ.ಯವರು ಮುದ್ದಿನ ಮಾವ, ಕಲ್ಯಾಣೋತ್ಸವ, ಮಾಂಗಲ್ಯಂ ತಂತುನಾನೇನ ಮೊದಲಾದ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಈ-ಟಿವಿ ಕಿರುತೆರೆ ವಾಹಿನಿಯಲ್ಲಿ ಎದೆ ತುಂಬಿ ಹಾಡುವೆನು ಎಂಬ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ.
ಪರಿವಿಡಿ |
[ಬದಲಾಯಿಸಿ] ಪ್ರಶಸ್ತಿಗಳು
- ೧೯೯೯ ರಲ್ಲಿ ಆಂಧ್ರದ ಪೊಟ್ಟಿ ಶ್ರೀರಾಮುಲು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್
- ೨೦೦೧ ರಲ್ಲಿ ಪದ್ಮಶ್ರೀ ಪ್ರಶಸ್ತಿ
- ೧೯೯೫ ರಲ್ಲಿ ಕನ್ನಡದ "ಗಾನಯೋಗಿ ಪಂಚಾಕ್ಷರಿ ಗವಾಯಿ" ಸೇರಿದಂತೆ ಒಟ್ಟು ೬ ಬಾರಿ ರಾಷ್ಟ್ರಪ್ರಶಸ್ತಿ
- ಕರ್ನಾಟಕ, ತಮಿಳುನಾಡು, ಆಂಧ್ರ ಸರ್ಕಾರಗಳಿಂದ ರಾಜ್ಯ ಪ್ರಶಸ್ತಿಗಳು
[ಬದಲಾಯಿಸಿ] ಇತರೆ ವಿಕಿಮೀಡಿಯ ಯೋಜನೆಗಳಲ್ಲಿ ಎಸ್.ಪಿ.ಬಾಲಸುಬ್ರಮಣ್ಯಂ
[ಬದಲಾಯಿಸಿ] ಬಾಹ್ಯ ಸಂಪರ್ಕಗಳು
[ಬದಲಾಯಿಸಿ] ಕನ್ನಡ ಚಿತ್ರರಂಗದ ಹಿನ್ನೆಲೆ ಗಾಯಕರು
ಜಿ.ಕೃಷ್ಣಸ್ವಾಮಿ ಅಯ್ಯಂಗಾರ್ | ಸುಬ್ಬಯ್ಯ ನಾಯ್ಡು | ಆರ್.ನಾಗೇಂದ್ರರಾಯ | ಹೊನ್ನಪ್ಪ ಭಾಗವತರ್ | ಪಿ. ಕಾಳಿಂಗರಾವ್ | ಚೆಂಬಯ್ ವೈದ್ಯನಾಥ ಭಾಗವತರ್ | ಪಿ.ಬಿ.ಶ್ರೀನಿವಾಸ್ | ಘಂಟಸಾಲ | ಜಿ.ಕೆ.ವೆಂಕಟೇಶ್ | ಡಾ. ರಾಜ್‌ಕುಮಾರ್ | ಎಸ್.ಪಿ.ಬಾಲಸುಬ್ರಹ್ಮಣ್ಯಂ | ಕೆ.ಜೆ.ಯೇಸುದಾಸ್ | ರಾಜೇಶ್ ಕೃಷ್ಣನ್ | ಶಿವರಾಜ್‍ಕುಮಾರ್ | ಉಪೇಂದ್ರ | ಹರಿಹರನ್ | ಹೇಮಂತ್ | ಶಂಕರ್ ಮಹಾದೇವನ್ | ಪ್ರೇಂ | ಚೇತನ್ ಸಾಸ್ಕ | ಅನೂಪ್ | ಫಯಾಜ್ ಖಾನ್ | ಕಾಶೀನಾಥ್ | ಪುನೀತ್ ರಾಜ್‍ಕುಮಾರ್ | ರಾಘವೇಂದ್ರ ರಾಜ್‍ಕುಮಾರ್ | ಭೀಮಸೇನ್ ಜೋಷಿ | ಬಾಲಮುರಳಿ ಕೃಷ್ಣ | ಜಗ್ಗೇಶ್ | ಗುರುಕಿರಣ್ | ರಾಮ್ ಪ್ರಸಾದ್ |