ಐಶ್ವರ್ಯ ರೈ
From Wikipedia
ಐಶ್ವರ್ಯ ರೈ (೧ ನವೆಂಬರ್ ೧೯೭೩) - ಮುಂಬೈ ಚಿತ್ರರಂಗ ಬಾಲಿವುಡ್ ನ ಖ್ಯಾತ ನಟಿ ಮತ್ತು ಮಾಜಿ ವಿಶ್ವಸುಂದರಿ.
ಕರ್ನಾಟಕದ ಮಂಗಳೂರಿನಲ್ಲಿ ಜನಿಸಿದ ಐಶ್ವರ್ಯ, ಚಿಕ್ಕ ವಯಸ್ಸಿನಲ್ಲೇ ದೊಡ್ಡ ಕಂಪನಿಗಳಿಗೆ ರೂಪದರ್ಶಿ ವೃತ್ತಿಯನ್ನು ಪ್ರಾರಂಭಿಸಿದರು. ಇವರ ರೂಪದಿಂದ ಗಾರ್ಡನ್ ಸೀರೆ ಮತ್ತು ಪೆಪ್ಸಿ ಕೋಲಾ ಕಂಪನಿಗಳ ಜಾಹೀರಾತುಗಳು ಮನೆ ಮಾತಾದವು. ೧೯೯೪ರಲ್ಲಿ ಪ್ರಪಂಚ ಸುಂದರಿ (ಮಿಸ್ ವರ್ಲ್ಡ್) ಆಗಿ ಆಯ್ಕೆಯಾದ ನಂತರ ವಿಶ್ವಾದ್ಯಂತ ಪ್ರಸಿಧ್ಧರಾದರು. ವಾಸ್ತು ವಿನ್ಯಾಸ ಶಾಸ್ತ್ರ ವನ್ನು ಅಭ್ಯಾಸ ಮಾಡಿದ ಐಶ್ವರ್ಯ ಒಳ್ಳೆಯ ವಿದ್ಯಾರ್ಥಿ ಎಂದೂ ಪ್ರಶಂಸಿತರಾಗಿದ್ದಾರೆ.
ಐಶ್ವರ್ಯ ಇಂದು ಬಾಲಿವುಡ್ ನ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಾಯಕಿ-ನಟಿ. ಮಣಿರತ್ನಂರ ಇರುವರ್ ಇವರ ಮೊದಲ ಚಿತ್ರ. ಹಂ ದಿಲ್ ದೇ ಚುಕೆ ಸನಂ, ಖಾಕೀ, ದೇವದಾಸ್, ಬ್ರೈಡ್ ಅಂಡ್ ಪ್ರೆಡಿಜೈಸ್, ಚೋಕರ್ ಬಾಲಿ ಮತ್ತು ತಾಲ್ ಇವರ ಪ್ರಮುಖ ಚಿತ್ರಗಳು.