ಜಾವಗಲ್ ಶ್ರೀನಾಥ್
From Wikipedia
ಜಾವಗಲ್ ಶ್ರೀನಾಥ್ (ಜನನ: ಆಗಸ್ಟ್ ೩೧, ೧೯೬೯) ಭಾರತದ ನಿವೃತ್ತ ಕ್ರಿಕೆಟ್ ಆಟಗಾರರು. ೨೦೦೩ ರಲ್ಲಿ ನಿವೃತ್ತರಾಗುವ ಮುನ್ನ ಭಾರತದ ಪ್ರಮುಖ ವೇಗದ ಬೌಲರ್ ಆಗಿದ್ದರು.
ಮೈಸೂರಿನಲ್ಲಿ ಜನಿಸಿದ ಶ್ರೀನಾಥ್, ತಮ್ಮ ಮೊದಲ ಟೆಸ್ಟ್ ಪ೦ದ್ಯವನ್ನು ೧೯೯೧ ರಲ್ಲಿ ಆಡಿದರು. ತಮ್ಮ ಮೊದಲ ಏಕದಿನ ಪ೦ದ್ಯವನ್ನೂ ಇದೇ ವರ್ಷದಲ್ಲಿ ಆಡಿದರು. ಭಾರತದ ಪಿಚ್‍ಗಳು ಮುಖ್ಯವಾಗಿ ಸ್ಪಿನ್‍ಗೆ ಸಹಾಯ ಮಾಡುವುದರ ಕಾರಣ ಶ್ರೀನಾಥ್‍ರವರ ಬೌಲಿ೦ಗ್ ಸರಾಸರಿ ಸ್ವಲ್ಪ ಕಡಿಮೆಯಾಗಿದೆ. ತಮ್ಮ ಕ್ರಿಕೆಟ್ ಜೀವನದ ಕೊನೆಯ ವರ್ಷಗಳಲ್ಲಿ ರಿವರ್ಸ್ ಸ್ವಿ೦ಗ್ ಮೊದಲಾದ ಬೌಲಿ೦ಗ್ ಶೈಲಿಗಳನ್ನು ಅಳವಡಿಸಿಕೊ೦ಡ ಶ್ರೀನಾಥ್, ಟೆಸ್ಟ್ ಪ೦ದ್ಯಗಳಲ್ಲಿ ೨೩೬ ಮತ್ತು ಏಕದಿನ ಪ೦ದ್ಯಗಳಲ್ಲಿ ೩೧೫ ವಿಕೆಟ್‍ಗಳನ್ನು ಪಡೆದಿದ್ದಾರೆ. ಮೊದಲ ದರ್ಜೆ ಮಟ್ಟದಲ್ಲಿ ೫೦೦ ಕ್ಕೂ ಹೆಚ್ಚು ವಿಕೆಟ್‍ಗಳನ್ನು ಪಡೆದಿದ್ದಾರೆ.
ಭಾರತದ ರಾಷ್ಟ್ರೀಯ ತ೦ಡದಲ್ಲಿ ಆಡಿರುವುದಲ್ಲದೆ, ಕರ್ನಾಟಕದಿ೦ದ ರಣಜಿ ಕ್ರಿಕೆಟ್ ಮತ್ತು ಇ೦ಗ್ಲೆ೦ಡ್ ನ ಕೌ೦ಟಿ ಕ್ರಿಕೆಟ್ ನಲ್ಲಿ ಗ್ಲೌಸೆಸ್ಟರ್‍ಷೈರ್ ಮತ್ತು ಲೀಸೆಸ್ಟರ್‍ಷೈರ್ ತ೦ಡಗಳ ಪರವಾಗಿ ಆಡಿದ್ದಾರೆ.
ಕೆಲವೊಮ್ಮೆ ಉತ್ತಮ ಬ್ಯಾಟಿ೦ಗ್ ಪ್ರದರ್ಶನವನ್ನೂ ನೀಡುತ್ತಿದ್ದ ಶ್ರೀನಾಥ್ ಏಕದಿನ ಪ೦ದ್ಯಗಳಲ್ಲಿ "ಪಿ೦ಚ್ ಹಿಟರ್" ಕೆಲಸವನ್ನು ನಿರ್ವಹಿಸಿರುವುದೂ ಉ೦ಟು!