ಬಾಲಕೃಷ್ಣ
From Wikipedia
ಬಾಲಕೃಷ್ಣ - ಕನ್ನಡ ಚಿತ್ರರಂಗದ ಅತ್ಯಂತ ಪ್ರತಿಭಾವಂಥ ನಟರಲ್ಲೊಬ್ಬರು. ಇವರು ಕನ್ನಡದ ಜನತೆಯನ್ನು ಹಲವು ದಶಕಗಳ ಕಾಲ ತಮ್ಮ ತೀಕ್ಷ್ಣ ಹಾಗು ನೈಜ ಅಭಿನಯದಿಂದ ರಂಜಿಸಿದ್ದಾರೆ. ಕನ್ನಡ ಚಿತ್ರರಂಗದ ವಲಯದಲ್ಲಿ, ಹಾಗು ಚಿತ್ರಪ್ರೇಮಿಗಳಲ್ಲಿ ಬಾಲಣ್ಣ ಎಂದೇ ಪರಿಚಿತರಾಗಿದ್ದ ಇವರಿಗೆ ಹುಟ್ಟಿನಿಂದಲೇ ಕಿವಿಯು ಸರಿಯಾಗಿ ಕೇಳಿಸುತ್ತಿರಲಿಲ್ಲ.
[ಬದಲಾಯಿಸಿ] ಕನ್ನಡ ಚಿತ್ರರಂಗದಲ್ಲಿ ಬಾಲಕೃಷ್ಣ
ವರ್ಷ ೧೯೪೩ ರಲ್ಲಿ ರಾಧಾರಮಣ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಇವರು ಸುಮಾರು ೫೧೦ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಇವರ ಕೊಡುಗೆ ಚಿರಸ್ಮರಣೀಯ. ಸಂಪತ್ತಿಗೆ ಸವಾಲ್, ಗಂಧದ ಗುಡಿ, ಭಾಗ್ಯದ ಲಕ್ಷ್ಮಿ ಬಾರಮ್ಮ ಇವರು ಅಭಿನಯಿಸಿದ ಕೆಲವು ಪ್ರಮುಖ ಚಿತ್ರಗಳು.
[ಬದಲಾಯಿಸಿ] ನಿರ್ಮಾಪಕರಾಗಿ ಬಾಲಕೃಷ್ಣ
ಬಾಲಕೃಷ್ಣ ಅವರು ಕೆಲವು ಚಿತ್ರಗಳಿಗೆ ನಿರ್ಮಾಪಕರಾಗಿದ್ದರು.