ಬೆಳಗೆರೆ ಕೃಷ್ಣಶಾಸ್ತ್ರಿ
From Wikipedia
[ಬದಲಾಯಿಸಿ] ಜೀವನ
ಬೆಳಗೆರೆ ಕೃಷ್ಣಶಾಸ್ತ್ರಿಗಳು ಚಿತ್ರದುರ್ಗದವರು. ಜನನ ೨೨.೫.೧೯೨೦. ತಂದೆ ಆಶುಕವಿಗಳಾಗಿದ್ದ ಚಂದ್ರಶೇಖರ ಶಾಸ್ತ್ರಿಗಳು. ತಾಯಿ ಮೋಕ್ಷಗುಂಡಂ ಅನ್ನಪೂರ್ಣಮ್ಮ.
ಮೊದಲು ಬೆಂಗಳೂರಿನ ವಿಮಾನ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದ್ದರು. ನಂತರ ಅಧ್ಯಾಪಕ ವೃತ್ತ್ತಿಯನ್ನು ಪ್ರಾರಂಭಿಸಿದರು.
ಒಂದೇ ದಿನ ಇಬ್ಬರು ಮಕ್ಕಳು ಮತ್ತು ಹೆಂಡತಿಯನ್ನು ಕಳೆದುಕೊಂಡು ಹಿಮಾಲಯದತ್ತ ಪ್ರಯಾಣ ಬೆಳೆಸಿದರು. ಈ ಸುತ್ತಾಟದಲ್ಲಿಯೇ ಮಹಾತ್ಮ ಗಾಂಧಿ ಯವರ ಭೇಟಿಯಾಯಿತು. ಬಿಡುವಿದ್ದಾಗ ಭಜನೆ, ಜೈಮಿನಿ ಭಾರತ ವಾಚನ ಮಾಡುತ್ತಿದ್ದರು. ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್ , ಡಿ ವಿ ಜಿ, ಎಂ.ಆರ್.ಶ್ರೀ ಮುಂತಾದವರನ್ನು ಕರೆಸಿ, ಜನರಿಗೆ ಆಧ್ಯಾತ್ಮದ ಪರಿಚಯವನ್ನು ಮಾಡಿಸುತ್ತಿದ್ದರು.
[ಬದಲಾಯಿಸಿ] ಕೃತಿಗಳು
- ತುಂಬಿ (ಕವನ ಸಂಕಲನ)
- ಸಾಹಿತಿಗಳ ಸ್ಮೃತಿ ' ಮರೆಯಲಾದೀತೇ? ( ಸಾಹಿತ್ಯಲೋಕದ ದಿಗ್ಗಜರ ಒಡನಾಟದ ನೆನಪುಗಳು)
- ಯೋಗ್ದಾಗೆಲ್ಲ ಐತೆ (ಐದು ಮುದ್ರಣ,ನಾಲ್ಕು ಭಾಷೆಗಳಿಗೆ ಅನುವಾದ)
- ಹಳ್ಳಿಚಿತ್ರ (ನಾಟಕ)
- ಹಳ್ಳಿ ಮೇಷ್ಟ್ರು(ನಾಟಕ)
- ಆಕಸ್ಮಿಕ (ನಾಟಕ)
[ಬದಲಾಯಿಸಿ] ಪ್ರಶಸ್ತಿಗಳು
- ರಾಜ್ಯ ಮತ್ತು ಕೇಂದ್ರದ ಅತ್ಯುತ್ತಮ ಆಧ್ಯಾಪಕ ಪ್ರಶಸ್ತಿ
- ಹಳ್ಳಿ ಚಿತ್ರ ನಾಟಕಕ್ಕೆ ಕೇಂದ್ರ ನಾಟಕ್ ಆಕಾಡೆಮೆ ಪ್ರಶಸ್ತಿ
- ಅಳಸಿಂಗಾಚಾರ್ ಪ್ರಶಸ್ತಿ
- ಆಕಾಶವಾಣಿ ಪುರಸ್ಕಾರ
- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
ಟೆಂಪ್ಲೇಟ್ ದೊಡ್ಡದಾಗಿರುವುದರಿಂದ ಇನ್ನು ಮುಂದೆ ಸಾಹಿತಿಗಳು ಟೆಂಪ್ಲೇಟನ್ನು ಬಳಸಲಾಗುವುದಿಲ್ಲ. ಈ ಟೆಂಪ್ಲೇಟ್ ಲೇಖನವೊಂದರಲ್ಲಿ ನಿಮಗೆ ಕಂಡುಬಂದಲ್ಲಿ ಲೇಖನ ಪುಟದಿಂದ {{ಸಾಹಿತಿಗಳು}}ಎಂಬ ಸೇರ್ಪಡೆಯನ್ನು ತೆಗೆದುಹಾಕಿ.