ವಿಜಯಭಾಸ್ಕರ್
From Wikipedia
ವಿಜಯಭಾಸ್ಕರ್ ಕನ್ನಡ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕರಲ್ಲೊಬ್ಬರು. ಸುಮಾರು ೧೬೫ ಕನ್ನಡ ಚಿತ್ರಗಳಿಗೆ ಸಂಗೀತ ನಿರ್ದೇಶನವನ್ನು ಮಾಡಿರುವ ಇವರು, ತೆಲುಗು, ತಮಿಳು, ಮಲಯಾಳಂ, ಮರಾಠಿ ಭಾಷೆಯ ಹಲವಾರು ಚಿತ್ರಗಳಿಗೆ ಸಂಗೀತವನ್ನು ಒದಗಿಸಿದ್ದಾರೆ. ಕನ್ನಡ ಚಿತ್ರವನ್ನು ಪ್ರವೇಶಿಸುವ ಮುನ್ನ ಇವರು ಹಿಂದಿ ಚಿತ್ರ ಸಂಗೀತ ನಿರ್ದೇಶಕ ನೌಷಾದ್ ಬಳಿ ಸಹಾಯಕ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುತಿದ್ದರು.
ವಿಜಯಭಾಸ್ಕರ್ ಅವರು ಶ್ರೀರಾಮ ಪೂಜ ಚಿತ್ರದಿಂದ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಪಿಯಾನೊ ನುಡಿಸುವುದರಲ್ಲಿ ಪರಿಣತಿ ಹೊಂದಿದ್ದ ಇವರು, ಪ್ರಖ್ಯಾತ ಸಾಹಿತಿಗಳಾದ ದ.ರಾ.ಬೇಂದ್ರೆ, ಕುವೆಂಪು, ಜಿ.ಎಸ್.ಎಸ್, ಅವರ ಕೃತಿಗಳನ್ನು ಚಲನಚಿತ್ರಕ್ಕೆ ಅಳವಡಿಸಿದವರಲ್ಲಿ ಪ್ರಮುಖರು. ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್, ಕೆ.ಎಸ್.ಎಲ್.ಸ್ವಾಮಿ(ರವೀ), ಗೀತಪ್ರಿಯ, ಎನ್. ಲಕ್ಷ್ಮಿ ನಾರಾಯಣ್ ಅವರು ನಿರ್ದೆಶಿಸಿದ ಬಹಳಷ್ಟು ಚಿತ್ರಗಳಿಗೆ ವಿಜಯಭಾಸ್ಕರ್ ಅವರು ಸಂಗೀತ ನಿರ್ದೇಶಿಸಿದ್ದಾರೆ.
ವಿಜಯಭಾಸ್ಕರ್ ಸುರ್ ಸಿಂಗಾರ್ ಪ್ರಶಸ್ತಿಯನ್ನು ಎರಡು ಬಾರಿ ಪಡೆದಿದ್ದಾರೆ. ಕಸ್ತೂರಿ ಶಂಕರ್, ಬಿ.ಆರ್.ಛಾಯ, ಬಿ.ಕೆ.ಸುಮಿತ್ರ ಅವರನ್ನು ಕನ್ನಡ ಚಿತ್ರರಂಗ ಕ್ಕೆ ಪರಿಚಯಿಸಿದ್ದಾರೆ. ನಿರ್ದೇಶಕ ಗೀತಪ್ರಿಯ ಅವರಿಗೆ ಆ ಹೆಸರನ್ನು ವಿಜಯಭಾಸ್ಕರ್ ಅವರೇ ಸೂಚಿಸಿದರು. ನಿರ್ದೇಶಕ ನಾಗಾಭರಣ ನಿರ್ದೇಶಿಸಿದ ನೀಲಾ ಚಿತ್ರ ವಿಜಯಭಾಸ್ಕರ್ ಅವರ ಕೊನೆಯ ಚಿತ್ರ.
[ಬದಲಾಯಿಸಿ] ನಿಧನ
ವಿಜಯಭಾಸ್ಕರ್ ಅವರು ಮಾರ್ಚ್ ೩, ೨೦೦೨ ರಂದು ಬೆಂಗಳೂರಿನಲ್ಲಿ ನಿದನ ಹೊಂದಿದರು.
[ಬದಲಾಯಿಸಿ] ವಿಜಯಭಾಸ್ಕರ್ ಸಂಗೀತ ನೀಡಿರುವ ಕನ್ನಡ ಚಲನಚಿತ್ರಗಳು
[ಬದಲಾಯಿಸಿ] ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕರು
ಪಿ.ಶ್ಯಾಮಣ್ಣ | ಪಿ.ಕಾಳಿಂಗರಾಯ | ಜಿ.ಕೆ.ವೆಂಕಟೇಶ್ | ವಿಜಯಭಾಸ್ಕರ್ | ಟಿ.ಜಿ.ಲಿಂಗಪ್ಪ | ಘಂಟಸಾಲ | ರಾಜನ್-ನಾಗೇಂದ್ರ | ಎಂ.ರಂಗರಾವ್ | ಸತ್ಯಂ | ಸಿಂಗೀತಂ ಶ್ರೀನಿವಾಸರಾವ್ | ಉಪೇಂದ್ರಕುಮಾರ್ | ಇಳಯರಾಜ | ಅಶ್ವಥ್-ವೈದಿ | ಸಿ.ಅಶ್ವಥ್ | ಎಸ್.ಪಿ.ಬಾಲಸುಬ್ರಹ್ಮಣ್ಯಂ | ಎಲ್.ವೈದ್ಯನಾಧನ್ | ಶಂಕರ್-ಗಣೇಶ್ | ಹಂಸಲೇಖ | ವಿ. ಮನೋಹರ್ | ಎಂ.ಎಂ.ಕೀರವಾಣಿ | ರಾಜ್-ಕೋಟಿ | ಸಾಧು ಕೋಕಿಲ | ರಾಜೇಶ್ ರಾಮನಾಥನ್ | ಕೆ.ಕಲ್ಯಾಣ್ | ಎಲ್.ಎನ್.ಶಾಸ್ತ್ರಿ | ಗುರುಕಿರಣ್ | ದೇವಾ | ರವಿಚಂದ್ರನ್ | ಎಸ್.ಎ.ರಾಜಕುಮಾರ್ | ಕಾರ್ತಿಕ್ ರಾಜ | ವೆಂಕಟ್-ನಾರಾಯಣ್ | ಮಣಿ ಶರ್ಮ | ಆರ್. ಪಿ. ಪಟ್ನಾಯಕ್ | ಆಲ್ವಿನ್ | ಅರ್ಜುನ್ | ಎಂ.ಎನ್.ಕೃಪಾಕರ್ | ಭವತಾರಿಣಿ | ಮನೋ ಮೂರ್ತಿ | ರವಿ ದತ್ತಾತ್ರೇಯ | ವಿ.ಹರಿ ಕೃಷ್ಣ | ಎಂ.ವೆಂಕಟರಾಜು