ಶಂಕರ್ ನಾಗ್
From Wikipedia
ಶಂಕರ್ ನಾಗ್ (೧೯೫೪ - ೧೯೯೦) ಕನ್ನಡ ಚಿತ್ರರಂಗದ ಮತ್ತು ರಂಗಭೂಮಿಯ ಪ್ರಮುಖ ನಾಯಕ ನಟ ಮತ್ತು ನಿರ್ದೇಶಕರು. ಮರಾಠಿ ನಾಟಕಗಳ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭ ಮಾಡಿದರು. ಗಿರೀಶ್ ಕಾರ್ನಾಡರ 'ಒಂದಾನೊಂದು ಕಾಲದಲ್ಲಿ' ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ನಂತರದ ೧೨ ವರ್ಷಗಳಲ್ಲಿ ಕನ್ನಡದ ಸುಮಾರು ೯೦ಕ್ಕೊ ಹೆಚ್ಚು ಚಿತ್ರಗಳಲ್ಲಿ ನಟಿಸಿದರು. ತಮ್ಮ ಸಹೋದರ ಅನಂತ ನಾಗ್ ಅವರೊಡನೆ "ಮಿಂಚಿನ ಓಟ", "ಜನ್ಮ ಜನ್ಮದ ಅನುಬಂಧ" ಮತ್ತು "ಗೀತಾ" ಚಿತ್ರಗಳನ್ನು ನಿರ್ಮಿಸಿದರು. ಇದರಲ್ಲಿ "ಜನ್ಮ ಜನ್ಮದ ಅನುಬಂಧ" ಮತ್ತು "ಗೀತಾ" ಚಿತ್ರಗಳು ಇಳಯರಾಜ ಅವರ ಮಧುರ ಸಂಗೀತವನ್ನು ಹೊಂದಿ ಜನಮನ್ನಣೆ ಗಳಿಸಿವೆ.
ನಾಟಕಗಳನ್ನು ಮತ್ತು ರಂಗಭೂಮಿಯನ್ನು ಗೌರವಿಸಿ ಶ್ರೀಮಂತಗೊಳಿಸಿದ ಶಂಕರ್ ಅವರು ಗಿರೀಶ ಕಾರ್ನಾಡ ರ "ಅಂಜು ಮಲ್ಲಿಗೆ", "ನೋಡಿ ಸ್ವಾಮಿ ನಾವಿರೋದು ಹೀಗೆ" ಮತ್ತು ಮುಂತಾದ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಭಾರತೀಯ ದೂರದರ್ಶನದಲ್ಲೇ ದಾಖಲೆ ನಿರ್ಮಿಸಿದ ಅತ್ಯಂತ ಜನಪ್ರಿಯವಾದ ಅರ್.ಕೆ. ನಾರಾಯಣ್ ಅವರ "ಮಾಲ್ಗುಡಿ ಡೇಸ್ ಅಥವಾ ಮಾಲ್ಗುಡಿಯ ದಿನಗಳು" ಮತ್ತು ಸ್ವಾಮಿ ಧಾರವಾಹಿಯನ್ನು ನಿರ್ದೇಶಿಸಿದ್ದಾರೆ.
ಶಂಕರ್ ನಾಗ್ ಅವರ ಪತ್ನಿ ಅರುಂಧತಿ ನಾಗ್. ಮಗಳು ಕಾವ್ಯ.
ಡಾ.ರಾಜ್ ಕುಮಾರ್ ಅಭಿನಯಿಸಿರುವ ಒಂದು ಮುತ್ತಿನ ಕಥೆ ಚಿತ್ರವನ್ನು ಶಂಕರನಾಗ್ ನಿರ್ದೇಶಿಸಿದ್ದರು.
ಸೆಪ್ಟೆಂಬರ್ ೩೦, ೧೯೯೦ ರಂದು ಶಂಕರ್ ನಾಗ್ ರಸ್ತೆ ಅಪಘಾತದಲ್ಲಿ ಮರಣ ಹೊಂದಿದರು. ನಿಗೂಡ ರಹಸ್ಯ ಶಂಕರ್ ನಾಗ್ ಅಭಿನಯದ ಕೊನೆಯ ಚಿತ್ರ.
[ಬದಲಾಯಿಸಿ] ಶಂಕರ್‍ನಾಗ್ ಅಭಿನಯಿಸಿರುವ ಇತರ ಚಿತ್ರಗಳು
- ಸಿ.ಬಿ.ಐ.ಶಂಕರ್
- ಆಟೋ ರಾಜ
- ಮೂಗನ ಸೇಡು
- ಸೀತಾ ರಾಮು
- ಗೆದ್ದ ಮಗ
- ಅಪೂರ್ವ ಸಂಗಮ
- ಐ ಲವ್ ಯೂ
- ನ್ಯಾಯ ಗೆದ್ದಿತು
- ಹೊಸ ಜೀವನ
- ಬೆಂಕಿ ಚೆಂಡು
- ಸಾಂಗ್ಲಿಯಾನ
- ಎಸ್.ಪಿ. ಸಾಂಗ್ಲಿಯಾನ-೨
- ಇಂದಿನ ಭಾರತ
- ರಕ್ತ ತಿಲಕ
- ಕೆರಳಿದ ಹೆಣ್ಣು
- ತಾಳಿಯಭಾಗ್ಯ
- ತಾಯಿಯ ಕನಸು
- ಹೊಸ ತೀರ್ಪು
- ಮಾನವ ದಾನವ
- ಮಕ್ಕಳಿರಲವ್ವ ಮನೆತುಂಬ
- ನ್ಯಾಯ ಎಲ್ಲಿದೆ?
- ಹಣಬಲವೋ ಜನಬಲವೋ
- ಆರದ ಗಾಯ
- ಜೀವಕ್ಕೆ ಜೀವ
- ಸಂಸಾರದ ಗುಟ್ಟು
- ರಸ್ತೆ ರಾಜ
- ಕರಿನಾಗ
- ಈ ಬಂಧ ಅನುಬಂಧ
- ಲಾರಿ ಡ್ರೈವರ್
- ಮುನಿಯನ ಮಾದರಿ
- ಕಾರ್ಮಿಕ ಕಳ್ಳನಲ್ಲ
- ಭಲೇ ಚತುರ
- ಸುಂದರಕಾಂಡ
- ನಗಬೇಕಮ್ಮ ನಗಬೇಕು
- ತರ್ಕ
- ಭರ್ಜರಿ ಬೇಟೆ
- ಬೆದರುಬೊಂಬೆ
- ಮಧುಚಂದ್ರ
- ರುಸ್ತುಂ ಜೋಡಿ
- ಆಟ ಬೊಂಬಾಟ
- ಗಿರೀಶ್ ಕಾರ್ನಾಡ್ ನಿರ್ದೇಶನದ ಉತ್ಸವ್ ಎಂಬ ಹಿಂದಿ ಚಿತ್ರದಲ್ಲಿಯೂ ಶಂಕರ್ ನಾಗ್ ಅಭಿಯಯಿಸಿದ್ದರು.
[ಬದಲಾಯಿಸಿ] ಕನ್ನಡ ಚಲನಚಿತ್ರ ನಾಯಕರು
ಸುಬ್ಬಯ್ಯ ನಾಯ್ಡು | ಉದಯಕುಮಾರ್ | ಕಲ್ಯಾಣಕುಮಾರ್ | ಡಾ. ರಾಜ್‌ಕುಮಾರ್ | ಗಂಗಾಧರ್ | ಡಾ. ವಿಷ್ಣುವರ್ಧನ್ | ರಾಜೇಶ್ | ಅಶೋಕ್ | ಅಂಬರೀಶ್ | ಶ್ರೀನಾಥ್ | ಪ್ರಭಾಕರ್ | ಅನಂತ ನಾಗ್ | ಶಂಕರ್ ನಾಗ್ | ಲೋಕೇಶ್ | ಮಾನು | ಕಾಶೀನಾಥ್ | ಮುರಳಿ(ಪ್ರೇಮಪರ್ವ) | ಚರಣ್ ರಾಜ್ | ವಿನೋದ್ ರಾಜ್ | ಶ್ರೀಧರ್ | ರಾಮಕೃಷ್ಣ | ಅರ್ಜುನ್ ಸರ್ಜಾ |ದೇವರಾಜ್ | ಸಾಯಿಕುಮಾರ್ | ರಾಮ್‍ಕುಮಾರ್ | ಥ್ರಿಲ್ಲರ್ ಮಂಜು | ಎಸ್.ನಾರಾಯಣ್ | ಜಗ್ಗೇಶ್ | ಉಪೇಂದ್ರ | ರವಿಚಂದ್ರನ್ | ಸುನಿಲ್ |ರಮೇಶ್ | ಸುದೀಪ್ | ಶಿವರಾಜ್‍ಕುಮಾರ್ | ಪುನೀತ್ ರಾಜ್‍ಕುಮಾರ್ | ರಾಘವೇಂದ್ರ ರಾಜ್ ಕುಮಾರ್ | ಮುರಳಿ | ವಿಜಯ ರಾಘವೇಂದ್ರ | ದರ್ಶನ್ ತೂಗುದೀಪ್ | ಸುನಿಲ್ ರಾವ್ | ಧ್ಯಾನ್| ಪ್ರೇಂ |ರಜನೀಕಾಂತ್
ಕನ್ನಡ ಚಲನಚಿತ್ರ ನಿರ್ದೇಶಕರು
ವೈ.ವಿ.ರಾವ್ | ಎಂ.ಆರ್.ವಿಠಲ್ | ಹೆಚ್.ಎಲ್.ಎನ್ ಸಿಂಹ | ಡಿ.ಶಂಕರ್ ಸಿಂಗ್ | ಬಿ.ಆರ್.ಪಂತುಲು | ಕಣಗಾಲ್ ಪ್ರಭಾಕರ ಶಾಸ್ತ್ರಿ | ಜಿ.ವಿ.ಅಯ್ಯರ್ | ಆರ್.ನಾಗೇಂದ್ರರಾಯ | ಬಿ.ಎಸ್.ರಂಗಾ | ಆರ್.ಎನ್.ಜಯಗೋಪಾಲ್ | ಗೀತಪ್ರಿಯ | ಹುಣಸೂರು ಕೃಷ್ಣಮೂರ್ತಿ | ಆರೂರು ಪಟ್ಟಾಭಿ | ಸಿದ್ಧಲಿಂಗಯ್ಯ | ಪುಟ್ಟಣ್ಣ ಕಣಗಾಲ್ | ಗಿರೀಶ್ ಕಾರ್ನಾಡ್ | ಎಂ.ಎಸ್.ರಾಜಶೇಖರ್ | ಬಿ ವಿ ಕಾರ೦ತ | ಪ್ರೇಮಾ ಕಾರಂತ | ಗಿರೀಶ್ ಕಾಸರವಳ್ಳಿ | ನಾಗತಿಹಳ್ಳಿ ಚಂದ್ರಶೇಖರ್ | ನಾಗಾಭರಣ | ಟಿ. ಪಟ್ಟಾಭಿರಾಮ ರೆಡ್ಡಿ | ಸುರೇಶ್ ಹೆಬ್ಳಿಕರ್ | ಭಾರ್ಗವ | ರಾಜೇಂದ್ರಸಿಂಗ್ ಬಾಬು | ಡಿ.ರಾಜೇಂದ್ರ ಬಾಬು | ದೊರೈ-ಭಗವಾನ್ | ಎನ್. ಲಕ್ಷ್ಮಿ ನಾರಾಯಣ್ | ಕೆ.ಎಸ್.ಎಲ್.ಸ್ವಾಮಿ(ರವೀ) | ತಿಪಟೂರು ರಘು | ಕೆ.ಬಾಲಚಂದರ್ | ಮಣಿರತ್ನಂ | ಶಂಕರ್ ನಾಗ್ | ಸಿಂಗೀತಂ ಶ್ರೀನಿವಾಸ ರಾವ್ | ಜೋಸೈಮನ್ | ರಮೇಶ್ ಭಟ್ | ರವಿಚಂದ್ರನ್ | ಕಾಶೀನಾಥ್ | ಫಣಿ ರಾಮಚಂದ್ರ | ಪಿ.ಹೆಚ್.ವಿಶ್ವನಾಥ್ | ಎಸ್.ನಾರಾಯಣ್ | ಓಂಪ್ರಕಾಶ್ ರಾವ್ | ಉಪೇಂದ್ರ | ಸುನೀಲ್ ಕುಮಾರ್ ದೇಸಾಯಿ | ಪ್ರೇಂ | ಮಹೇಂದರ್ | ಓಂ ಸಾಯಿಪ್ರಕಾಶ್ | ವಿ.ಮನೋಹರ್ | ಸುದೀಪ್ | ರಮೇಶ್ | ಮಾ.ಕಿಶನ್ | ಕವಿತಾ ಲಂಕೇಶ್| ಪಿ ಲಂಕೇಶ್ | ಇಂದ್ರಜಿತ್ ಲಂಕೇಶ್ | ರವಿ ಶ್ರೀವತ್ಸ | ಜಯಂತಿ | ಆರತಿ | ಲಕ್ಷ್ಮಿ | ಲೋಕೇಶ್ | ಟಿ.ವಿ.ಸಿಂಗ್ ಠಾಕೂರ್