ಆರ್ಕ್ಟಿಕ್ ಮಹಾಸಾಗರ
From Wikipedia
ಭೂಮಿಯ ಐದು ಮಹಾಸಾಗರಗಳು |
---|
|
ಆರ್ಕ್ಟಿಕ್ ಮಹಾಸಾಗರ ಭೂಮಿಯ ಅತ್ಯಂತ ಚಿಕ್ಕ ಮಹಾಸಾಗರ. ಅರ್ಕ್ಟಿಕ್ ಮಹಾಸಾಗರವು ಉತ್ತರಧ್ರುವ ಪ್ರದೇಶವನ್ನು ಸುತ್ತಲೂ ಆವರಿಸಿಕೊಂಡಿದೆ. ಇದು ಜಲಾರಾಶಿಯೇ ಆಗಿದ್ದರೂ ಇದರಲ್ಲಿ ಪ್ರಯಾಣ ಸಾಧ್ಯವಿಲ್ಲವಾದ್ದರಿಂದ ಇದನ್ನು ನಿಜವಾದ ಅರ್ಥದಲ್ಲಿ ಸಾಗರವೆಂದು ಕರೆಯಲಾಗದು. ಚಳಿಗಾಲದಲ್ಲಿ ಸಂಪೂರ್ಣವಾಗಿ ಹೆಪ್ಪುಗಟ್ಟುವ ಈ ಜಲಧಿಯು ವರ್ಷದ ಇತರ ಸಮಯದಲ್ಲಿ ತೇಲುವ ಬೃಹತ್ ಗಾತ್ರದ ಹಿಮಗಡ್ಡೆಗಳಿಂದ ತುಂಬಿರುತ್ತದೆ. ಈ ಕಾರಣಗಳಿಂದ ಈ ಸಾಗರದಲ್ಲಿ ನೌಕಾಯಾನ ಅಸಾಧ್ಯವಾಗಿದೆ. ಇದರ ಒಟ್ಟು ವಿಸ್ತಾರ ೧.೩ ಕೋಟಿ ಚ.ಕಿ.ಮೀ.