ಎಂ.ಕೆ.ಇಂದಿರಾ
From Wikipedia
ಎಂ.ಕೆ.ಇಂದಿರಾರವರು ೧೯೧೭,ಜನೆವರಿ ೫ ರಂದು ತೀರ್ಥಹಳ್ಳಿಯಲ್ಲಿ ಜನಿಸಿದರು.ತಂದೆ ತರೀಕೆರೆ ಸೂರ್ಯನಾರಾಯಣರಾವ್; ತಾಯಿ ಬನಶಂಕರಮ್ಮ.ಸುಪ್ರಸಿದ್ಧ ಶಿಶುಸಾಹಿತಿ ಹೊಯಿಸಳ ಇಂದಿರಾರವರ ಸೋದರಮಾವ.ಪ್ರಜಾವಾಣಿಯ ಖ್ಯಾತ ಸಂಪಾದಕರಾಗಿದ್ದ ಟಿ.ಎಸ್.ರಾಮಚಂದ್ರರಾವ್ (ಟಿಎಸ್ಸಾರ್) ಇವರ ತಮ್ಮ.
ಸಾಹಿತಿ ಹಾಗು ಆಕಾಶವಾಣಿಯಲ್ಲಿ ನಿರ್ದೇಶಕರಾಗಿದ್ದ ಎಚ್.ಕೆ.ರಂಗನಾಥ್ ಇವರ ಚಿಕ್ಕಮ್ಮನ ಮಗ.
ಕನ್ನಡ ಮಾಧ್ಯಮಿಕ ಶಾಲೆಯ ೨ ನೆಯ ತರಗತಿಯವರೆಗೆ ಮಾತ್ರ ಇವರ ಶಿಕ್ಷಣ. ೧೨ನೆಯ ವರ್ಷಕ್ಕೆ ಇವರ ಮದುವೆಯಾಯಿತು.
ಇಂದಿರಾರವರು ಬರೆಯಲು ಪ್ರಾರಂಭಿಸಿದ್ದು ೧೯೬೩ರಲ್ಲಿ. ತುಂಗಭದ್ರ ಇವರ ಮೊದಲ ಕೃತಿ. ಕಥೆ, ಕಾದಂಬರಿ, ಪ್ರಹಸನ, ಹರಟೆ,ವ್ಯಕ್ತಿಚಿತ್ರ ಇತ್ಯಾದಿಯಾಗಿ ೬೦ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ.
ಸದಾನಂದ, ಫಣಿಯಮ್ಮಈ ಕಾದಂಬರಿಗಳಿಗೆ ಹಾಗು ನವರತ್ನ ಕಥಾಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿಪ್ರಶಸ್ತಿ ದೊರೆತಿದೆ.೧೯೭೫ರಲ್ಲಿ 'ಶ್ರೇಷ್ಠ ಲೇಖಕಿ' ಹಾಗು 'ಶ್ರೇಷ್ಠ ಚಿತ್ರಕತೆ' ಪ್ರಶಸ್ತಿ ಇವರಿಗೆ ಲಭಿಸಿವೆ. ಇವರ ಅನೇಕ ಕಾದಂಬರಿಗಳು ತೆಲುಗು , ಮಲೆಯಾಳಂ ಹಾಗು ಇಂಗ್ಲಿಷ್ ಭಾಷೆಗಳಿಗೆ ಅನುವಾದಗೊಂಡಿವೆ.