ಎಂ.ವೆಂಕಟಕೃಷ್ಣಯ್ಯ
From Wikipedia
ಎಂ.ವೆಂಕಟಕೃಷ್ಣಯ್ಯನವರು ೧೮೪೪ ಸಪ್ಟಂಬರ ೫ ರಂದು ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕಿನ ಮಗ್ಗೆ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಸುಬ್ಬಯ್ಯ.
ಎಂ.ವೆಂಕಟಕೃಷ್ಣಯ್ಯನವರು ಪತ್ರಿಕಾಪ್ರಪಂಚದ ಭಿಷ್ಮಾಚಾರ್ಯರು. ‘ಮೈಸೂರು ತಾತಯ್ಯ’ ಎಂದೇ ಇವರು ಪ್ರಸಿದ್ಧರಾಗಿದ್ದರು.
ಪರಿವಿಡಿ |
[ಬದಲಾಯಿಸಿ] ಪತ್ರಿಕೋದ್ಯಮ
ಸಾಧ್ವಿ , ಸಂಪದಭ್ಯುದಯ, ವೃತ್ತಾಂತ ಚಿಂತಾಮಣಿ, ಹಿತಬೋಧಿನಿ, ಗ್ರಾಮಜೀವನ, ವಿದ್ಯಾದಾಯಿನಿ, ಪೌರ ಸಾಮಾಜಿಕ ಪತ್ರಿಕೆ ಮೊದಲಾದ ಕನ್ನಡ ಪತ್ರಿಕೆಗಳನ್ನಲ್ಲದೆ, ನೇಚರ್ ಕ್ಯೂರ್, ಮೈಸೋರ್ ಪೇಟ್ರಿಯಾಟ್, ವೆಲ್ಥ ಆಫ್ ಮೈಸೋರ್ ಮುಂತಾದ ಇಂಗ್ಲಿಷ್ ಪತ್ರಿಕೆಗಳನ್ನೂ ಸಹ ಹಲವು ವರ್ಷ ನಡೆಯಿಸುತ್ತಿದ್ದರು.
ಪತ್ರಿಕೋದ್ಯಮವು ವಿಶ್ವವಿದ್ಯಾನಿಲಯದಲ್ಲಿ ಪಠ್ಯಪುಸ್ತಕವಾಗಲೆಂಬ ಉದ್ದೇಶದಿಂದ, ೨೦೦೦ ರೂಪಾಯಿಗಳ ದತ್ತಿಯನ್ನು ಸ್ಥಾಪಿಸಿ, ಪತ್ರಿಕೋದ್ಯಮದ ಶ್ರೇಷ್ಠ ವಿದ್ಯಾರ್ಥಿಗೆ ಬಹುಮಾನ ನೀಡುವ ವ್ಯವಸ್ಥೆ ಮಾಡಿದರು.
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕಾದಂಬರಿ
- ಚೋರಗ್ರಹಣ ತಂತ್ರ
- ಪರಂತಪ ವಿಜಯ
[ಬದಲಾಯಿಸಿ] ವ್ಯಕ್ತಿ ಪರಿಚಯ
- ಬೂಕರ್ ಟಿ.ವಾಷಿಂಗ್ಟನ್ ಚರಿತ್ರೆ
[ಬದಲಾಯಿಸಿ] ಇತರ
- ಆರೋಗ್ಯ ಸಾಧನ ಪ್ರಕಾಶಿಕೆ
- ಹರಿಶ್ಚಂದ್ರ ಚರಿತ್ರೆ
- ಟೆಲಿಮ್ಯಾಕ್ಸನ ಸಾಹಸ ಚರಿತ್ರೆ
- ವಿದ್ಯಾರ್ಥಿ ಕರಭೂಷಣ
- ಧನಾರ್ಜನೆಯ ಕ್ರಮ