ಎಸ್.ಸಿ.ನಂದೀಮಠ
From Wikipedia
ಡಾ|ಎಸ್.ಸಿ.ನಂದೀಮಠ ಅಂದರೆ ಶಿವಲಿಂಗಯ್ಯ ಚನ್ನಬಸವಯ್ಯ ನಂದೀಮಠ ಇವರು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಚಿಕ್ಕನಂದಿಹಳ್ಳಿ ಗ್ರಾಮದಲ್ಲಿ ೧೯೦೦ ಡಿಶಂಬರ ೧೨ರಂದು ಜನಿಸಿದರು.
ಕನ್ನಡ ಮತ್ತು ಸಂಸ್ಕೃತದಲ್ಲಿ ಎಂ.ಎ. ಪದವೀಧರರಾದ ಇವರು ಅಧ್ಯಾಪಕರಾಗಿ ವೃತ್ತಿ ಜೀವನ ಪ್ರಾರಂಭಿಸಿ, ಕರ್ನಾಟಕ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ನಿವೃತ್ತರಾದರು.
ಇವರು ‘ವೀರಶೈವ’ , ‘ಜ್ಞಾನಪ್ರಸಾರ’ ಪತ್ರಿಕೆಗಳ ಸಂಪಾದಕರಾಗಿಯೂ ದುಡಿದಿದ್ದಾರೆ. ಇವರ ಕೃತಿಗಳು ಇಂತಿವೆ:
- ಕರ್ನಾಟಕ ಧರ್ಮಗಳು
- ಕವಿಕರ್ಣ ರಸಾಯನ
- ಕುವಲಯಾನಂದ
- ಗಿರಿಜಾ ಕಲ್ಯಾಣ
- ಶೂನ್ಯ ಸಂಪಾದನೆ
- ಶೈವ ಸಿದ್ಧಾಂತ
- HandBook of Veerashaivism
ಇವರು ೧೯೫೨ರಲ್ಲಿ ಬೇಲೂರಿನಲ್ಲಿ ಜರುಗಿದ ೩೫ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.