ಕಣಗಾಲ್ ಪ್ರಭಾಕರ ಶಾಸ್ತ್ರಿ
From Wikipedia
ಕಣಗಾಲ್ ಪ್ರಭಾಕರ ಶಾಸ್ತ್ರಿ (೧೯೨೯ - ೧೯೮೯) - ಕನ್ನಡ ಚಿತ್ರರಂಗದ ಹೆಸರಾಂತ ಗೀತರಚನೆಕಾರರಲ್ಲೊಬ್ಬರು. ಇವರು ಕೆಲವು ಚಿತ್ರಗಳಿಗೆ ನಿರ್ದೇಶನ ಕೂಡ ಮಾಡಿದ್ದು, ಒಂದು ಚಿತ್ರವನ್ನು ನಿರ್ಮಿಸಿದ್ದಾರೆ. ಪ್ರಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಇವರ ಸಹೋದರರು.
ಪರಿವಿಡಿ |
[ಬದಲಾಯಿಸಿ] ಬಾಲ್ಯ
ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಸಮೀಪದ ಕಣಗಾಲು ಗ್ರಾಮದ ರಾಜನ ಬಿಲುಗುಳಿಯಲ್ಲಿ ೧೯೨೯ರ ನವೆಂಬರ್ ೧೧ರಂದು ಜನಿಸಿದ ಪ್ರಭಾಕರ ಶಾಸ್ತ್ರಿ ಬಾಲ್ಯದಿಂದಲೇ ತಾತನ ತೊಡೆಯೇರಿ, ಸಾಹಿತ್ಯದ ಪರಿಚಯ ಮಾಡಿಕೊಂಡರೆಂದು ಹೇಳಲಾಗುತ್ತದೆ. ಕಡು ಬಡತನದಿಂದ ಸಿ.ಬಿ.ಮಲ್ಲಪ್ಪನವರ ನಾಟಕ ಕಂಪನಿಗೆ ಏಳನೇ ವಯಸ್ಸಿನಲ್ಲೇ ಸೇರಿಕೊಂಡ ಇವರು ತಮ್ಮ ೧೧ನೇ ವಯಸ್ಸಿನಲ್ಲೇ ರಾಜಾಸ್ಯಾಂಡೊ ಅವರ ಬಳಿ ಸಂಕಲನ ಸಹಾಯಕರಾಗಿ ಸೇರಿಕೊಂಡರು. ಈ ನಡುವೆ ಹತ್ತಾರು ಪೌರಾಣಿಕ ನಾಟಕ ಗಳನ್ನೂ ಬರೆದರು.
[ಬದಲಾಯಿಸಿ] ಚಿತ್ರರಂಗ
ನಿರ್ದೇಶಕ ಶಂಕರ್ ಸಿಂಗ್ ಅವರ ಕೃಷ್ಣಲೀಲಾ ಚಿತ್ರಕ್ಕೆ ಮೊದಲ ಬಾರಿ ಹಾಡುಗಳನ್ನು ರಚಿಸಿದ ಪ್ರಭಾಕರ ಶಾಸ್ತ್ರಿ ಭಾಗ್ಯೋದಯ ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ-ಗೀತೆಗಳನ್ನು ರಚಿಸುವ ಮೂಲಕ ಪೂರ್ಣ ಪ್ರಮಾಣದ ಚಿತ್ರಸಾಹಿತಿಯಾದರು.
ಬಿ.ಆರ್.ಪಂತುಲು ಅವರ ಪದ್ಮಿನಿ ಪಿಕ್ಚರ್ಸ್ ಸಂಸ್ಥೆಯ ಖಾಯಂ ಬರಹಗಾರರಾಗಿ ಶ್ರೀಕೃಷ್ಣದೇವರಾಯ ಚಿತ್ರದವರೆಗೂ ಸೇವೆ ಸಲ್ಲಿಸಿದರು. ಹಲವು ಅತ್ಯುತ್ತಮ ಚಿತ್ರಗಳಿಗೆ ಕಾರಣೀಭೂತರಾದರು.
ಭಲೇ ಭಟ್ಟ, ಸುಭದ್ರಾ ಕಲ್ಯಾಣ ಎಂಬ ಎರಡು ಚಿತ್ರಗಳನ್ನು ನಿರ್ದೇಶಿಸಿದರು. ೧೯೬೩ರಲ್ಲಿ ತಾವೇ ಸತಿಶಕ್ತಿ ಚಿತ್ರ ನಿರ್ಮಿಸಿ ನಿರ್ದೇಶಿಸಿದರು. ವಾಸ್ತವವಾಗಿ ಈ ಚಿತ್ರವನ್ನು ದೇವಿಫಿಲಂಸ್ ಸಂಸ್ಥೆ ನಿರ್ಮಿಸಬೇಕಿತ್ತು. ಕಾರಣಾಂತರಗಳಿಂದ ಕೊನೆ ಕ್ಷಣದಲ್ಲಿ ಹಿಂದೆಗೆಯಿತು. ಇದನ್ನು ತಮ್ಮ ಸ್ವಾಭಿಮಾನದ ಪ್ರಶ್ನೆ ಎಂದು ಭಾವಿಸಿದ ಶಾಸ್ತ್ರಿಗಳು ನಿರ್ಮಾಣಕ್ಕೂ ತೊಡಗಿದರೆಂದು ಹೇಳಲಾಗುತ್ತದೆ. ದಕ್ಷಿಣ ಭಾರತದ ಅಂದಿನ ಖ್ಯಾತ ನಟಿ ಸಾಹುಕಾರ್ ಜಾನಕಿ ನಾಯಕಿಯಾಗಿದ್ದ ಈ ಚಿತ್ರದಲ್ಲಿ ರಾಜಕುಮಾರ್ ನಾಯಕ ಮತ್ತು ಖಳನಾಯಕನ ಪಾತ್ರ ಮಾಡಿದ್ದರು. ರಾಜಕುಮಾರ್ ಅವರ ಮಾಂತ್ರಿಕನ ಮೇಕಪ್, ಶ್ಯಾಮಲಾದಂಡಕವನ್ನು ಒಂದು ತಂತ್ರವಾಗಿ ಬಳಸಿಕೊಂಡ ಕ್ರಮ, ಹಾಗೂ ಜನಪ್ರಿಯ ಗೀತೆಗಳು ಚಿತ್ರದ ಯಶಸ್ಸಿಗೆ ಕಾರಣವಾದವು. ಹೀಗಿದ್ದೂ ಶಾಸ್ತ್ರಿಗಳು ಮತ್ತೆ ಚಿತ್ರನಿರ್ಮಾಣದತ್ತ ಆಸಕ್ತಿ ತೋರಲಿಲ್ಲ.
[ಬದಲಾಯಿಸಿ] ಚಿತ್ರಸಾಹಿತ್ಯದಲ್ಲಿ ಪ್ರಯೋಗಗಳು
ಪ್ರಭಾಕರ ಶಾಸ್ತ್ರಿಗಳ ಗೀತೆಗಳಲ್ಲಿ ನೂತನ ರೀತಿಯ ಪ್ರತಿಮೆಗಳನ್ನು ಅಳವಡಿಸಿರುತ್ತಾರೆ. ಇದಕ್ಕೆ ಕೆಲವು ನಿದರ್ಶನಗಳು:
- ಒಲವಿನ ಯಮುನಾ ನದಿ ಹರಿದಿದೆ ರಾಧಾಮಾಧವರು ಅವರ ಅಮರ ಪ್ರೇಮಿಗಳು
- ಮನವೆಲ್ಲ ಮೈಮರೆವ ಬೃಂದಾವನ ಅವರ ಗೀತ ಪರಂಪರೆಯ ಬೆನ್ನೆಲುಬು
- ಚಿತ್ರದಿ ಚಿತ್ರವ ಬರೆದವಳು
- ಸತಿಪತಿಗೊಲಿದ ರತಿಪತಿಗಾನ
- ಗಾಂಧಾರ ಭಾಷೆಯ ಹಕ್ಕಿಗಳಿಂಚರ
ಹಾಗೆಯೇ, ಒಲವು ಪದದ ಹೇರಳ ಬಳಕೆ ಇವರ ಗೀತೆಗಳಲ್ಲಿ ಕಾಣಬಹುದು. ಉದಾಹರಣೆಗೆ ಕೆಳಗಿನ ಕೆಲವು ಗೀತೆಗಳು:
- ಒಲವಿನಾ ಪ್ರಿಯಲತೆ ಅವಳದೇ ಚಿಂತೆ
- ಒಲವೇ ನಮ್ಮ ಒಲಿದಂತೆ
- ಒಲವಿನ ಸವಿಯ ಸವಿಯುವ ಶುಭದಿನ
- ಒಲವಿನ ಪೂಜೆಗೆ ಒಲವೇ ಮಂದಾರ
ಶಾಸ್ತ್ರಿಯವರು ಒಟ್ಟು ಸುಮಾರು ೩೮೦ ಕನ್ನಡ ಚಿತ್ರಗೀತೆಗಳನ್ನು ರಚಿಸಿದ್ದಾರೆ.
[ಬದಲಾಯಿಸಿ] ನಿಧನ
ಪ್ರಭಾಕರ ಶಾಸ್ತ್ರಿಗಳು ೧೯೮೯ರಲ್ಲಿ ನಿಧನ ಹೊಂದಿದರು
[ಬದಲಾಯಿಸಿ] ಆಕರಗಳು
ಕನ್ನಡ ಚಿತ್ರರಂಗದ ಚಿತ್ರಸಾಹಿತಿಗಳು
ಬೆಳ್ಳಾವೆ ನರಹರಿ ಶಾಸ್ತ್ರಿ | ಹುಣಸೂರು ಕೃಷ್ಣಮೂರ್ತಿ | ಚಿ.ಸದಾಶಿವಯ್ಯ | ಸೋರಟ್ ಅಶ್ವಥ್ | ಕು.ರಾ.ಸೀತಾರಾಮಶಾಸ್ತ್ರಿ | ಜಿ.ವಿ.ಅಯ್ಯರ್ | ಕಣಗಾಲ್ ಪ್ರಭಾಕರ ಶಾಸ್ತ್ರಿ | ಚಿ.ಉದಯಶಂಕರ್ | ಆರ್.ಎನ್.ಜಯಗೋಪಾಲ್ | ವಿಜಯ ನಾರಸಿಂಹ | ಕರೀಂಖಾನ್ | ದೊಡ್ಡರಂಗೇಗೌಡ | ಪಿ.ಲಂಕೇಶ್ | ಹಂಸಲೇಖ | ವಿ.ಮನೋಹರ್ | ಕೆ.ಕಲ್ಯಾಣ್ | ವಿ.ನಾಗೇಂದ್ರ ಪ್ರಸಾದ್ | ಕವಿರಾಜ್ | ಎಸ್.ನಾರಾಯಣ್ | ಉಪೇಂದ್ರ | ರವಿಚಂದ್ರನ್ | ಪ್ರೇಂ | ನಾಗತಿಹಳ್ಳಿ ಚಂದ್ರಶೇಖರ್
ಕನ್ನಡ ಚಲನಚಿತ್ರ ನಿರ್ದೇಶಕರು
ವೈ.ವಿ.ರಾವ್ | ಎಂ.ಆರ್.ವಿಠಲ್ | ಹೆಚ್.ಎಲ್.ಎನ್ ಸಿಂಹ | ಡಿ.ಶಂಕರ್ ಸಿಂಗ್ | ಬಿ.ಆರ್.ಪಂತುಲು | ಕಣಗಾಲ್ ಪ್ರಭಾಕರ ಶಾಸ್ತ್ರಿ | ಜಿ.ವಿ.ಅಯ್ಯರ್ | ಆರ್.ನಾಗೇಂದ್ರರಾಯ | ಬಿ.ಎಸ್.ರಂಗಾ | ಆರ್.ಎನ್.ಜಯಗೋಪಾಲ್ | ಗೀತಪ್ರಿಯ | ಹುಣಸೂರು ಕೃಷ್ಣಮೂರ್ತಿ | ಆರೂರು ಪಟ್ಟಾಭಿ | ಸಿದ್ಧಲಿಂಗಯ್ಯ | ಪುಟ್ಟಣ್ಣ ಕಣಗಾಲ್ | ಗಿರೀಶ್ ಕಾರ್ನಾಡ್ | ಎಂ.ಎಸ್.ರಾಜಶೇಖರ್ | ಬಿ ವಿ ಕಾರ೦ತ | ಪ್ರೇಮಾ ಕಾರಂತ | ಗಿರೀಶ್ ಕಾಸರವಳ್ಳಿ | ನಾಗತಿಹಳ್ಳಿ ಚಂದ್ರಶೇಖರ್ | ನಾಗಾಭರಣ | ಟಿ. ಪಟ್ಟಾಭಿರಾಮ ರೆಡ್ಡಿ | ಸುರೇಶ್ ಹೆಬ್ಳಿಕರ್ | ಭಾರ್ಗವ | ರಾಜೇಂದ್ರಸಿಂಗ್ ಬಾಬು | ಡಿ.ರಾಜೇಂದ್ರ ಬಾಬು | ದೊರೈ-ಭಗವಾನ್ | ಎನ್. ಲಕ್ಷ್ಮಿ ನಾರಾಯಣ್ | ಕೆ.ಎಸ್.ಎಲ್.ಸ್ವಾಮಿ(ರವೀ) | ತಿಪಟೂರು ರಘು | ಕೆ.ಬಾಲಚಂದರ್ | ಮಣಿರತ್ನಂ | ಶಂಕರ್ ನಾಗ್ | ಸಿಂಗೀತಂ ಶ್ರೀನಿವಾಸ ರಾವ್ | ಜೋಸೈಮನ್ | ರಮೇಶ್ ಭಟ್ | ರವಿಚಂದ್ರನ್ | ಕಾಶೀನಾಥ್ | ಫಣಿ ರಾಮಚಂದ್ರ | ಪಿ.ಹೆಚ್.ವಿಶ್ವನಾಥ್ | ಎಸ್.ನಾರಾಯಣ್ | ಓಂಪ್ರಕಾಶ್ ರಾವ್ | ಉಪೇಂದ್ರ | ಸುನೀಲ್ ಕುಮಾರ್ ದೇಸಾಯಿ | ಪ್ರೇಂ | ಮಹೇಂದರ್ | ಓಂ ಸಾಯಿಪ್ರಕಾಶ್ | ವಿ.ಮನೋಹರ್ | ಸುದೀಪ್ | ರಮೇಶ್ | ಮಾ.ಕಿಶನ್ | ಕವಿತಾ ಲಂಕೇಶ್| ಪಿ ಲಂಕೇಶ್ | ಇಂದ್ರಜಿತ್ ಲಂಕೇಶ್ | ರವಿ ಶ್ರೀವತ್ಸ | ಜಯಂತಿ | ಆರತಿ | ಲಕ್ಷ್ಮಿ | ಲೋಕೇಶ್ | ಟಿ.ವಿ.ಸಿಂಗ್ ಠಾಕೂರ್