ಕರ್ಮವೀರ
From Wikipedia
ಸಂಯುಕ್ತ ಕರ್ನಾಟಕ ಬಳಗಕ್ಕೆ ಸೇರಿದ ಕರ್ಮವೀರ ವಾರಪತ್ರಿಕೆಯ ಜನನ ೧೯೨೧ರ ಫೆಬ್ರುವರಿ ೧೫ ರಂದು ಧಾರವಾಡದಲ್ಲಾಯಿತು.ದಿವಾಕರ ರಂಗನಾಥರಾಯರು,ಹುಕ್ಕೇರಿಕರರು ಈ ವಾರಪತ್ರಿಕೆಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.ರಾಷ್ಟ್ರಾಭಿಮಾನಿ ಲೇಖನಗಳಿಂದ ಸರ್ಕಾರದ ಕಾಕದೃಷ್ಟಿಗೆ ಗುರಿಯಾದರೂ,೧೯೪೨ ರವರೆಗೆ ಕುಂಟುತ್ತಾ ಪತ್ರಿಕೆ ನಡೆದುಕೊಂಡು ಬಂತು.ನಂತರದಲ್ಲಿ ಡಿ.ವಿ.ಜಿ., ಕಾರ್ನಾಡ ಸದಾಶಿವರಾವ್ ಮೊದಲಾದವರ ಸಹಕಾರ ಹಾಗು ಸಾರ್ವಜನಿಕರ ದೇಣಿಗೆಯ ಸಹಾಯದಿಂದ ಮುಂದುವರೆದು, ಕರ್ನಾಟಕ ಸ್ಥಾಪನೆಯ ಆಂದೋಲನದ ಪ್ರಸಾರಕ್ಕೆ ಬೆಂಬಲ ನೀಡಿತು.