ಕೆ.ಜಿ.ಕುಂದಣಗಾರ
From Wikipedia
ಕೆ.ಜಿ.ಕುಂದಣಗಾರರು ೧೮೯೫ ಅಗಸ್ಟ ೧೪ ರಂದು ಬೆಳಗಾವಿ ಜಿಲ್ಲೆಯ ಕೌಜಲಗಿಯಲ್ಲಿ ಜನಿಸಿದರು. ಬಾಲ್ಯದಲ್ಲಿಯೆ ತಂದೆ ತಾಯಿಗಳನ್ನು ಕಳೆದುಕೊಂಡ ಕುಂದಣಗಾರರು ಕಷ್ಟದಿಂದಲೆ ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದರು.
ಪರಿವಿಡಿ |
[ಬದಲಾಯಿಸಿ] ವಿದ್ಯಾಭ್ಯಾಸ
ಧಾರವಾಡದ ವಿದ್ಯಾರಣ್ಯ ಮಾಧ್ಯಮಿಕ ಶಾಲೆಯಿಂದ ೧೯೦೯ರಲ್ಲಿ ಮ್ಯಾಟ್ರಿಕ್ ಪರೀಕ್ಷೆ ಮುಗಿಸಿದರು. ೧೯೧೩ರಲ್ಲಿ ಇಂಟರ್ ಪರೀಕ್ಷೆ ಮುಗಿಸಿ ಹೈಸ್ಕೂಲಿನಲ್ಲಿ ಶಿಕ್ಷಕರಾದರು. ಶಿಕ್ಷಕ ವೃತ್ತಿಯಲ್ಲಿದ್ದುಕೊಂಡೆ ಬಿ.ಎ. ಪದವಿಯನ್ನು ಹಾಗು ೧೯೨೫ರಲ್ಲಿ ಎಮ್.ಎ. ಪದವಿಯನ್ನು ಪಡೆದರು.
[ಬದಲಾಯಿಸಿ] ವೃತ್ತಿ
ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಎರಡು ವರ್ಷ ಸೇವೆ ಸಲ್ಲಿಸಿದ ಬಳಿಕ ಕೊಲ್ಲಾಪುರದ ರಾಜಾರಾಮ ಕಾಲೇಜಿನಲ್ಲಿ ಅಧ್ಯಾಪಕರಾದರು.
[ಬದಲಾಯಿಸಿ] ಸಾಧನೆ
ಕನ್ನಡ ಶಾಸನಗಳನ್ನು, ಪ್ರಾಚ್ಯ ವಸ್ತುಗಳನ್ನು ಸಂಗ್ರಹಿಸಿ ಕರ್ನಾಟಕ ಕಾಲೇಜಿನಲ್ಲಿ ಇಡುವ ವ್ಯವಸ್ಥೆ ಮಾಡಿದರು.
ಕೊಲ್ಲಾಪುರದಲ್ಲಿಯ ಮಹಾಲಕ್ಷ್ಮಿ ದೇವಾಲಯದ ಕುರಿತು ಆಳವಾಗಿ ಅಧ್ಯಯನ ಮಾಡಿ ನೋಟ್ಸ್ ಆನ್ ಮಹಾಲಕ್ಷ್ಮಿ ಟೆಂಪಲ್ ಎನ್ನುವ ಪ್ರಬಂಧ ರಚಿಸಿದರು. ಇನ್ಸ್ಕ್ರಿಪ್ಶನ್ ಇನ್ ನಾರ್ದರ್ನ್ ಕರ್ನಾಟಕ ಎಂಡ್ ಕೊಲ್ಹಾಪುರ ಎನ್ನುವ ಮಹತ್ವದ ಕೃತಿಯನ್ನು ರಚಿಸಿದ್ದಾರೆ.
ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಹೊರಡುತ್ತಿದ್ದ ವಾಗ್ಭೂಷಣ ಪತ್ರಿಕೆಗೆ ಕೆಲಕಾಲ ಸಂಪಾದಕರಾಗಿದ್ದರು. ಕನ್ನಡ ನಿಘಂಟು ಮತ್ತು ಕರ್ನಾಟಕ ಇತಿಹಾಸ ಮಂಡಲದ ಸಕ್ರಿಯ ಸದಸ್ಯರಾಗಿದ್ದರು.
[ಬದಲಾಯಿಸಿ] ಪುರಸ್ಕಾರ
೧೯೬೧ರಲ್ಲಿ ಗದಗಿನಲ್ಲಿ ನಡೆದ ೪೩ನೆಯ ಕನ್ನಡ ಸಾಹಿತ್ಯ ಸಮ್ಮೇಳನಡ ಅಧ್ಯಕ್ಷರನ್ನಾಗಿ ಮಾಡಿ ನಾಡು ಕುಂದಣಗಾರರಿಗೆ ಗೌರವ ಸಲ್ಲಿಸಿತು.