ಕೊಪ್ಪ
From Wikipedia
ಕೊಪ್ಪ ಪಟ್ಟಣ ಚಿಕ್ಕಮಗಳೂರು ಜಿಲ್ಲೆಯ ಒಂದು ತಾಲೂಕು ಕೇಂದ್ರ. ಹಿಂದೆ "ತಪ್ಪು ಮಾಡಿದವರನ್ನು ಕೊಪ್ಪಕ್ಕೆ ಹಾಕು" ಎಂಬ ಪ್ರತೀತಿಗೆ ತಕ್ಕ ಹಾಗೆ ಮಲೇರಿಯಾದ ಬೀಡಾಗಿ, ಸೌಕರ್ಯಗಳಿಲ್ಲದ ಕೊಂಪೆಯಾಗಿತ್ತು ಎಂದು ಹೇಳುತ್ತಾರೆ. ಆದರೆ ಇಂದಿನ ಕೊಪ್ಪಕ್ಕೂ ಆಗಿನ ಪ್ರತೀತಿಗೂ ಸಂಬಂಧವೇ ಇಲ್ಲವೆನ್ನುವಷ್ಡರಮಟ್ಟಿಗೆ ಅಭಿವೃದ್ಧಿಯಾಗಿದೆ. ಶಾಲಾ ಕಾಲೇಜುಗಳು, ಆಯುರ್ವೇದ ಕಾಲೇಜು, ಆಸ್ಪತ್ರೆ, ಇತ್ಯಾದಿ ಇತ್ಯಾದಿ ಎಲ್ಲಾ ನಾಗರಿಕ ಸೌಲಭ್ಯಗಳನ್ನೂ ಹೊಂದಿದೆ. ಮಲೆನಾಡಿನ ಮಧ್ಯದ , ಪ್ರಕೃತಿ ಸೌಂದರ್ಯ ಯಥೇಚ್ಛವಾಗಿರುವ ಈ ಊರಿಗೆ "ಕರ್ನಾಟಕದ ಕಾಶ್ಮೀರ" ಎಂದೂ ಅನ್ನುವುದುಂಟು.
ಕಾರ್ಮಿಕರೇ ಒಂದುಗೂಡಿ ಸಹಕಾರಿ ಪದ್ಧತಿಯಲ್ಲಿ ಸಾರಿಗೆ ಬಸ್ಸುಗಳನ್ನು "ಸಹಕಾರ ಸಾರಿಗೆ" ಎಂಬ ಹೆಸರಿನಲ್ಲಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಅಪರೂಪದ ಪ್ರಯತ್ನ ಈ ಊರಿನಲ್ಲಿ ನೋಡಸಿಗುತ್ತದೆ.
[ಬದಲಾಯಿಸಿ] ಪ್ರೇಕ್ಷಣೀಯ ಸ್ಥಳಗಳು
- ಶ್ರೀ ಆದಿಶಂಕರಾಚಾರ್ಯ ಲಕ್ಷ್ಮೀ ನರಸಿಂಹ ಪೀಠ ಹರಿಹರಪುರ
- ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಮೇಗೂರು
- ಉತ್ತಮೇಶ್ವರ
- ಕುವೆಂಪು ಜನ್ಮಸ್ಥಳ, ಹಿರೇಕೊಡಿಗೆ
- ಕೋಟೇಗುಡ್ಡ
- ಕಮಂಡಲ ಗಣಪತಿ ದೇವಸ್ಥಾನ
- ಅನ್ನಪೂರ್ಣೇಶ್ವರಿ ದೇವಸ್ಥಾನ, ಹೊರನಾಡು