ಗೌರೀಶ ಕಾಯ್ಕಿಣಿ
From Wikipedia
ಗೌರೀಶ ಕಾಯ್ಕಿಣಿಯವರು ೧೯೧೨ ಸಪ್ಟಂಬರ ೧೨ರಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದರು.
ಪರಿವಿಡಿ |
[ಬದಲಾಯಿಸಿ] ಶಿಕ್ಷಣ
ಗೌರೀಶ ಕಾಯ್ಕಿಣಿಯವರ ಪ್ರಾಥಮಿಕ ಶಿಕ್ಷಣ ಗೋಕರ್ಣದಲ್ಲಿಯೇ ನಡೆಯಿತು. ಮೆಟ್ರಿಕ್ಯುಲೇಶನ್ ಪರಿಕ್ಷೆಯನ್ನು ಕುಮಟಾದ ಗಿಬ್ ಹಾಯ್‍ಸ್ಕೂಲಿನಿಂದ ಉತ್ತೀರ್ಣರಾಗಿ , ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಕಲಾವಿಭಾಗದಲ್ಲಿ ಪ್ರಥಮ ವರ್ಷವನ್ನು ಅಭ್ಯಸಿಸಿದರು. ಆಬಳಿಕ ಎಸ್.ಟಿ.ಸಿ. ಪರೀಕ್ಷೆಯಲ್ಲಿ, ಆ ಕಾಲದ ಮುಂಬಯಿ ಪ್ರಾಂತಕ್ಕೆ ಸರ್ವಪ್ರಥಮರಾಗಿ ತೇರ್ಗಡೆಯಾದರು. ಗೌರೀಶ ಕಾಯ್ಕಿಣಿಯವರು ಹಿಂದಿಯಲ್ಲಿ ವಿಶಾರದರೂ ಆಗಿದ್ದಾರೆ.
[ಬದಲಾಯಿಸಿ] ವೃತ್ತಿ
ಗೌರೀಶ ಕಾಯ್ಕಿಣಿಯವರು ೧೯೩೭ರಲ್ಲಿ ಮಾಧ್ಯಮಿಕ ಶಾಲಾ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿ ೧೯೭೬ರಲ್ಲಿ ನಿವೃತ್ತರಾದರು.
[ಬದಲಾಯಿಸಿ] ಕೌಟಂಬಿಕ ಜೀವನ
ಗೌರೀಶ ಕಾಯ್ಕಿಣಿಯವರ ವಿವಾಹ ೧೯೫೩ರಲ್ಲಿ ಶಾಂತಾ ಅವರ ಜೊತೆಗೆ ನೆರವೇರಿತು. ಇವರದು ಅಂತರ್ಜಾತೀಯ ವಿವಾಹ. ೧೯೫೪ರಲ್ಲಿ ಇವರ ಮಗ , ಈಗ ಪ್ರಸಿದ್ಧ ಸಾಹಿತಿಯಾಗಿರುವ ಜಯಂತ ಜನಿಸಿದರು.
[ಬದಲಾಯಿಸಿ] ಸಾಹಿತ್ಯ
ಗೌರೀಶ ಕಾಯ್ಕಿಣಿಯವರ ಲೇಖನ ವ್ಯವಸಾಯ ೧೯೩೦ರಿಂದಲೇ ಪ್ರಾರಂಭವಾಯಿತು. ಕನ್ನಡ ಹಾಗು ಮರಾಠಿ ಭಕ್ತಿಗೀತೆಗಳ ಸಂಕಲನವಾದ "ಶಾಂಡಿಲ್ಯ ಪ್ರೇಮಸುಧಾ" ಇವರ ಮೊದಲ ಕವನಸಂಕಲನ.
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕಾವ್ಯ
- ಶಾಂಡಿಲ್ಯ ಪ್ರೇಮಸುಧಾ
- ಗಂಡು ಹೆಣ್ಣು
- ಪ್ರೀತಿ
[ಬದಲಾಯಿಸಿ] ನಾಟಕ
- ಒಲವಿನ ಒಗಟು
- ಕ್ರೌಂಚಧ್ವನಿ (ಗೀತರೂಪಕಗಳು)
[ಬದಲಾಯಿಸಿ] ರೇಡಿಯೊ ನಾಟಕ
- ಕರ್ಣಾಮೃತ
- ಆಕಾಶ ನಾಟಕಗಳು
[ಬದಲಾಯಿಸಿ] ಕಥಾಸಂಕಲನ
- ವಿಶ್ವದ ಆಖ್ಯಾಯಿಕೆಗಳು
[ಬದಲಾಯಿಸಿ] ಪ್ರವಾಸ ಸಾಹಿತ್ಯ
- ದೇವತಾತ್ಮ (ಹಿಮಾಲಯ ಪ್ರವಾಸವರ್ಣನೆ)
[ಬದಲಾಯಿಸಿ] ವ್ಯಕ್ತಿಚಿತ್ರಣ
- ಪಶ್ಚಿಮದ ಪ್ರತಿಭೆ -ಭಾಗ-೧
- ಪಶ್ಚಿಮದ ಪ್ರತಿಭೆ -ಭಾಗ-೨,
- ಸತ್ಯಾರ್ಥಿ
- ಭಾರತೀಯ ವಿಜ್ಞಾನಿಗಳು, ಭಾಗ-೧
- ಭಾರತೀಯ ವಿಜ್ಞಾನಿಗಳು, ಭಾಗ-೨
- ಕೇಶವಸುತ
- ನಾನಾಲಾಲ
- ಶ್ಯಾಮರಾವ ವಿಠ್ಠಲ ಕಾಯ್ಕಿಣಿ
- ಥಾಮಸ್ ಎಡಿಸನ್
- ಪಾಂಡೇಶ್ವರ ಗಣಪತಿರಾವ
- ಗ್ರೀಕ ದಾರ್ಶನಿಕರು
[ಬದಲಾಯಿಸಿ] ಪರಿಚಯ ಲೇಖನ
- ಗೋಕರ್ಣದ ಕಥೆ (ಪರಿಚಯ )
- ಕರ್ನಾಟಕದ ಸಿಂಡ್ರೆಲ್ಲಾ (ಉತ್ತರ ಕನ್ನಡದ ಜನ ಜಾತಿ ಪರಿಚಯ)
[ಬದಲಾಯಿಸಿ] ಸಾಹಿತ್ಯ ಸಮೀಕ್ಷೆ
- ಪ್ರಜ್ಞಾನೇತ್ರದ ಬೆಳಕಿನಲ್ಲಿ (ಶಂ.ಬಾ.ಜೋಶಿ ಕೃತಿಗಳ ಸಮೀಕ್ಷೆ)
- ಕಣವಿ ಕಾವ್ಯದೃಷ್ಟಿ (ಚನ್ನವೀರ ಕಣವಿಯವರ ಕಾವ್ಯ ಸಮೀಕ್ಷೆ)
- ಕಂಪಿನ ಕರೆ (ಬೇಂದ್ರೆ ಕಾವ್ಯಸಮೀಕ್ಷೆ)
- ದಿನಕರ ದೇಸಾಯಿಯವರ ಕಾವ್ಯ
- ವಾಲ್ಮೀಕಿ ತೂಕಡಿಸಿದಾಗ (ವಿಚಾರ ವಿಮರ್ಶೆ)
- ನವ್ಯದ ನಾಲ್ಕು ನಾಯಕರು (ಕವಿ ಕಾವ್ಯ ಪರಿಚಯ)
- ಮಾನವ್ಯ ಕವಿ (ಬಿ.ಎ.ಸನದಿಯವರ ಕಾವ್ಯ ಸಮೀಕ್ಷೆ)
- ಉತ್ತರಣ (ವಿಷ್ಣು ನಾಯ್ಕರ ಕಾವ್ಯ ಸಮೀಕ್ಷೆ)
[ಬದಲಾಯಿಸಿ] ವೈಚಾರಿಕ
- ಮನೋವಿಜ್ಞಾನದ ರೂಪರೇಖೆಗಳು
- ಮಾರ್ಕ್ಸವಾದ
- ಬಾಳಿನ ಗುಟ್ಟು
- ವಿಚಾರವಾದ
- ಸ್ವಾತಂತ್ರ್ಯೋತ್ತರ ವಿಚಾರ ಸಾಹಿತ್ಯ
- ಸಂಪ್ರದಾಯ ಮತ್ತು ಸಣ್ಣ ಕುಟುಂಬ
- ಕಟಾಕ್ಷ (ವೈಚಾರಿಕ ಲೇಖನಗಳ ಸಂಕಲನ)
- ನವಮಾನವತಾವಾದ
- ನಾಸ್ತಿಕನು ಮತ್ತು ದೇವರು
- ಆರ್ಕೆಸ್ಟ್ರಾ ಮತ್ತು ತಂಬೂರಿ
- ಲೋಕಾಯತ (ಚಾರ್ವಾಕ ದರ್ಶನ)
[ಬದಲಾಯಿಸಿ] ಅನುವಾದ
- ಭಾರತೀಯ ತತ್ವಜ್ಞಾನದ ಇತಿಹಾಸ (ಮೂಲ:ಮರಾಠಿ)
- ಪಂಜಾಬಿ ಕತೆಗಳು
- ಬಿಳಿಯ ಕೊಕ್ಕರೆ
- ಮಣ್ಣಿನ ಮನುಷ್ಯ
- ಮಲೆನಾಡಿಗರು
- ಬರ್ಲಿನ್ ಬಂದಿತು ಗಂಗೆಯ ತಡಿಗೆ
- ವ್ಯಾಸಪರ್ವ (ಮೂಲ ಮರಾಠಿ:ದುರ್ಗಾ ಭಾಗವತ)
[ಬದಲಾಯಿಸಿ] ಇಂಗ್ಲಿಷ್ ಕೃತಿಗಳು
- ಶ್ಯಾಮರಾವ ವಿಠ್ಠಲ ಕಾಯ್ಕಿಣಿ
[ಬದಲಾಯಿಸಿ] ಕೊಂಕಣಿ ಕೃತಿಗಳು
- ಮೀನಾಕ್ಷಿ (ಕವನ ಸಂಕಲನ)
[ಬದಲಾಯಿಸಿ] ಮರಾಠಿ ಕೃತಿಗಳು
- ಕನ್ನಡ ಸಾಹಿತ್ಯಾಚಾ ಇತಿಹಾಸ (ಕನ್ನಡ ಮೂಲ: ರಂ.ಶ್ರೀ.ಮುಗಳಿಯವರ ಕನ್ನಡ ಸಾಹಿತ್ಯ ಚರಿತ್ರೆ)
- ಭಗವಾನ ನಿತ್ಯಾನಂದ (ಕನ್ನಡ ಮೂಲ: ರಮೇಶ ನಾಡಕರ್ಣಿ)
- ಮಾಝೀ ರಸಯಾತ್ರಾ (ಕನ್ನಡ ಮೂಲ: ಮಲ್ಲಿಕಾರ್ಜುನ ಮನಸೂರರ ಆತ್ಮಚರಿತ್ರೆ)
- ಅಗ್ನಿವರ್ಣ (ಕನ್ನಡ ಮೂಲ: ರಂ.ಶ್ರೀ.ಮುಗಳಿ)
[ಬದಲಾಯಿಸಿ] ಸಮಗ್ರ
- ಸಮಗ್ರ ಸಂಪುಟ ಭಾಗ-೧
- ಸಮಗ್ರ ಸಂಪುಟ ಭಾಗ-೨
- ಸಮಗ್ರ ಸಂಪುಟ ಭಾಗ-೩
- ಸಮಗ್ರ ಸಂಪುಟ ಭಾಗ-೪
- ಸಮಗ್ರ ಸಂಪುಟ ಭಾಗ-೫
- ಸಮಗ್ರ ಸಂಪುಟ ಭಾಗ-೬
- ಸಮಗ್ರ ಸಂಪುಟ ಭಾಗ-೭
- ಸಮಗ್ರ ಸಂಪುಟ ಭಾಗ-೮
ಇವಲ್ಲದೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಸಾವಿರಾರು ಬಿಡಿ ಬರಹಗಳು ಹಾಗು ಅಂಕಣಗಳು ಪ್ರಕಟವಾಗಿವೆ.
[ಬದಲಾಯಿಸಿ] ಸಾಮಾಜಿಕ
ಗೌರೀಶ ಕಾಯ್ಕಿಣಿಯವರು ಅನೇಕ ಸಾಮಾಜಿಕ ಹಾಗು ಸಾಂಸ್ಕೃತಿಕ ಹೊಣೆಗಾರಿಕೆಗಳನ್ನು ಹೊತ್ತುಕೊಂಡಿದ್ದರು:
- ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಸಂಗ ವಿಸ್ತರಣ ವಿಭಾಗದ ಸಲಹಾ ಸಮಿತಿ ಸದಸ್ಯರಾಗಿದ್ದರು.
- ಧಾರವಾಡದ ಆಕಾಶವಾಣಿ ನಿಲಯದ ಸಲಹಾ ಸಮಿತಿ ಸದಸ್ಯರಾಗಿದ್ದರು.
- ಉತ್ತರ ಕನ್ನಡ ಜಿಲ್ಲಾ ಲೇಖಕ, ಪ್ರಕಾಶಕ ಹಾಗು ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದರು
[ಬದಲಾಯಿಸಿ] ಪತ್ರಿಕೋದ್ಯಮ
ಗೌರೀಶ ಕಾಯ್ಕಿಣಿಯವರು ನಾಗರಿಕ ಹಾಗು ಬೆಳಕು ಪತ್ರಿಕೆಗಳ ಸಂಪಾದಕ ಮಂಡಲಿಯ ಸದಸ್ಯರಾಗಿದ್ದರು
[ಬದಲಾಯಿಸಿ] ಗೌರವ , ಸನ್ಮಾನ
ಗೌರೀಶ ಕಾಯ್ಕಿಣಿಯವರಿಗೆ ಸಂದ ಪ್ರಶಸ್ತಿಗಳು ಅನೇಕ:
- ಆದರ್ಶ ಶಿಕ್ಷಕ ರಾಜ್ಯ ಪ್ರಶಸ್ತಿ (೧೯೭೩)
- ಕನ್ನಡ ಸಾಹಿತ್ಯ ಪರಿಷತ್ತಿನವಜ್ರಮಹೋತ್ಸವ ಗೌರವ ಪ್ರಶಸ್ತಿ (೧೯೭೭)
- ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (೧೯೮೦)
- ವರ್ಧಮಾನ ಪ್ರಶಸ್ತಿ (೧೯೯೨)
- ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ (೧೯೯೩)
- ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ (೧೯೯೩)
- ನವಮಾನವತಾವಾದ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೯೫)
- ಮಂಗಳೂರಿನ ಸಂದೇಶ ಪ್ರಶಸ್ತಿ (೧೯೯೬)
- ಮೀನಾಕ್ಷಿ ಕೊಂಕಣಿ ಕವನ ಸಂಕಲನಕ್ಕೆ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೯೬)
- ಬೆಂಗಳೂರಿನ ಶಂಬಾ ವಿಚಾರವೇದಿಕೆಯ ಸಂಶೋಧನ ಪ್ರಶಸ್ತಿ (೧೯೯೭)