ಚನ್ನವೀರ ಕಣವಿ
From Wikipedia
ಚನ್ನವೀರ ಕಣವಿ - ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿಗಳಲ್ಲೊಬ್ಬರು.
ಪರಿವಿಡಿ |
[ಬದಲಾಯಿಸಿ] ಜೀವನ
ಚನ್ನವೀರ ಕಣವಿಯವರ ಹುಟ್ಟೂರು ಗದಗ ಜಿಲ್ಲೆಯ ಹೊಂಬಳ ಗ್ರಾಮ. ತಂದೆ ಸಕ್ಕರೆಪ್ಪ, ತಾಯಿ ಪಾರ್ವತವ್ವ. ಧಾರವಾಡದಲ್ಲಿಯೆ ಮಾಧ್ಯಮಿಕ ಹಾಗು ಕಾಲೇಜು ಶಿಕ್ಷಣ ಪೂರೈಸಿದ ಕಣವಿಯವರು ೧೯೫೨ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಮ್.ಏ. ಪದವಿ ಪಡೆದರು. ಆಗ ತಾನೆ ಆರಂಭವಾಗಿದ್ದ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದ ಕಾರ್ಯದರ್ಶಿಯಾದರು. ೧೯೫೬ರ ವೇಳೆಗೆ ಅದೇ ವಿಭಾಗದ ನಿರ್ದೇಶಕರಾದರು. ಕಣವಿಯವರ ಪತ್ನಿ ಶಾಂತಾದೇವಿಯವರು ಸಹ ಕತೆಗಾರ್ತಿಯಾಗಿದ್ದಾರೆ.
[ಬದಲಾಯಿಸಿ] ಪ್ರಶಸ್ತಿ ಪುರಸ್ಕಾರಗಳು
- ಇವರ "ಜೀವಧ್ವನಿ" ಎಂಬ ಕೃತಿಗೆ ೧೯೮೧ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.
- ೧೯೯೬ರಲ್ಲಿ ಹಾಸನದಲ್ಲಿ ನಡೆದ ಅರವತ್ತೈದನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಣವಿಯವರು ಅಧ್ಯಕ್ಷರಾಗಿದ್ದರು.
[ಬದಲಾಯಿಸಿ] ಕಣವಿ ಸಾಹಿತ್ಯ
[ಬದಲಾಯಿಸಿ] ಕಾವ್ಯಸಂಕಲನ
- ಕಾವ್ಯಾಗ್ನಿ
- ಭಾವಜೀವಿ
- ಆಕಾಶಬುಟ್ಟಿ
- ಮಧುಚಂದ್ರ
- ಮಣ್ಣಿನ ಮೆರವಣಿಗೆ
- ದೀಪಧಾರಿ
- ನೆಲ ಮುಗಿಲು
- ಎರಡು ದಡ
- ನಗರದಲ್ಲಿ ನೆರಳು
- ಜೀವಧ್ವನಿ
- ಕಾರ್ತೀಕದ ಮೋಡ
- ಜೀನಿಯಾ
- ಹೊಂಬೆಳಕು
- ಶಿಶಿರದಲ್ಲಿ ಬಂದ ಸ್ನೇಹಿತ
- ಚಿರಂತನ ದಾಹ(ಆಯ್ದ ಕವನಗಳು)
- ಹೂವು ಹೊರಳುವವು ಸೂರ್ಯನ ಕಡೆಗೆ
[ಬದಲಾಯಿಸಿ] ವಿಮರ್ಶಾಲೇಖನಗಳು ಹಾಗು ಪ್ರಬಂಧ ಸಂಕಲನಗಳು
- ಸಾಹಿತ್ಯಚಿಂತನ
- ಕಾವ್ಯಾನುಸಂಧಾನ
- ಸಮಾಹಿತ
- ಮಧುರಚೆನ್ನ
- ಸಮತೋಲನ
[ಬದಲಾಯಿಸಿ] ಮಕ್ಕಳ ಕವಿತೆ
- ಹಕ್ಕಿ ಪುಕ್ಕ
- ಚಿಣ್ಣರ ಲೋಕವ ತೆರೆಯೋಣ
[ಬದಲಾಯಿಸಿ] ಸಂಪಾದನೆ
- ಕನ್ನಡದ ಕಾಲು ಶತಮಾನ
- ಸಿದ್ಧಿ ವಿನಾಯಕ ಮೋದಕ
- ಕವಿತೆಗಳು
[ಬದಲಾಯಿಸಿ] ಸಂಪಾದನೆ (ಇತರರೊಂದಿಗೆ)
- ನವಿಲೂರು ಮನೆಯಿಂದ
- ನವ್ಯಧ್ವನಿ
- ನೈವೇದ್ಯ
- ನಮ್ಮೆಲ್ಲರ ನೆಹರೂ
- ಜೀವನ ಸಿದ್ಧಿ
- ಆಧುನಿಕ ಕನ್ನಡ ಕಾವ್ಯ
- Modern Kannada Poetry
- ಸುವರ್ಣ ಸಂಪುಟ
- ರತ್ನ ಸಂಪುಟ
- ಬಾಬಾ ಫರೀದ