ಡಿ.ಎಲ್.ನರಸಿಂಹಾಚಾರ್
From Wikipedia
ಡಿ.ಎಲ್.ನರಸಿಂಹಾಚಾರ್ (ದೊಡ್ಡಬೆಲೆ ಲಕ್ಷ್ಮೀನರಸಿಂಹಾಚಾರ್ಯ ) ಇವರು ೧೯೦೬ರಲ್ಲಿ ಚಿಕ್ಕನಾಯ್ಕನಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ಶ್ಯಾಮಯ್ಯಂಗಾರ್. ೧೯೨೯ರಲ್ಲಿ ಎಂ.ಎ. (ಕನ್ನಡ)ದಲ್ಲಿ ಚಿನ್ನದ ಪದಕ ಪಡೆದರು. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದರು. ಕನ್ನಡವಲ್ಲದೆ ತಮಿಳು, ತೆಲುಗು, ಸಂಸ್ಕೃತ ಹಾಗು ಇಂಗ್ಲಿಷ್ ಭಾಷೆಗಳಲ್ಲಿ ಅಪಾರ ಪ್ರಭುತ್ವ ಪಡೆದಿದ್ದು ‘ಚಲಿಸುವ ವಿಶ್ವಕೋಶ’ ಎಂದು ಕರೆಯಿಸಿಕೊಳ್ಳುತ್ತಿದ್ದರು.
[ಬದಲಾಯಿಸಿ] ಕೃತಿಗಳು
- ಕನ್ನಡ ಕಾವ್ಯಾಂಜಲಿ
- ಕನ್ನಡ ಗ್ರಂಥ ಸಂಪಾದನೆ
- ಗೋವಿನ ಹಾಡುಗಳು
- ಪಂಪಭಾರತ ದೀಪಿಕೆ
- ಪಂಪರಾಮಾಯಣ ಸಂಗ್ರಹ
- ಭೀಷ್ಮಪರ್ವ
- ವಡ್ಡಾರಾಧನೆ
- ಶಬ್ದವಿಹಾರ
- ಸಕಲವೇದ್ಯ ಕಾವ್ಯ ಸಂಹಿತಾರ್ಣವ
- ಸಿದ್ಧರಾಮಚರಿತೆಯ ಸಂಗ್ರಹ
- ಹಂಪೆಯ ಹರಿಹರ
[ಬದಲಾಯಿಸಿ] ಪುರಸ್ಕಾರ
- ೧೯೫೯ರಲ್ಲಿ ಬೀದರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
- ೧೯೬೭ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಇವರನ್ನು ಗೌರವಿಸಿದೆ.
- ೧೯೭೦ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಇವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದೆ.