ತಿರುಮಲೆ ತಾತಾಚಾರ್ಯ ಶರ್ಮ
From Wikipedia
ತಿರುಮಲೆ ತಾತಾಚಾರ್ಯ ಶರ್ಮರು ೧೮೯೭ ರಲ್ಲಿ ಚಿಕ್ಕಬಳ್ಳಾಪುರದಲ್ಲಿ ಜನಿಸಿದರು. ತಂದೆ ಶ್ರೀನಿವಾಸ ತಾತಾಚಾರ್ಯ, ತಾಯಿ ಜಾನಕಿ. ಇವರ ಹುಟ್ಟು ಹೆಸರು ಲಕ್ಷ್ಮೀಕುಮಾರ ತಾತಾಚಾರ್ಯ. ಶರ್ಮರು ೧೯೧೯ರಲ್ಲಿ ಸರಕಾರದ ಶಾಸನ ಇಲಾಖೆಯಲ್ಲಿ ತೆಲುಗು, ಕನ್ನಡ ಸಹಾಯಕರಾಗಿ ಕೆಲಸಕ್ಕೆ ಸೇರಿಕೊಂಡರು. ತಮ್ಮ ಶಾಸನಗಳ ಅಧ್ಯಯನದ ಫಲವಾಗಿ ಶಾಸನಗಳಲ್ಲಿ ಕಂಡುಬರುವ ಕವಿಗಳು ಎನ್ನುವ ಗ್ರಂಥವನ್ನು ರಚಿಸಿದ್ದಾರೆ.
ಮಹಾತ್ಮಾ ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟಕ್ಕೆ ಕೊಟ್ಟ ಕರೆಯಿಂದ ಪ್ರಭಾವಿತರಾದ ಶರ್ಮರು ೧೯೨೩ ರಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿದರು. ಗಾಂಧೀಜಿಯವರ ಸಲಹೆಯಂತೆ ತುಮಕೂರಿನಿಂದ ಪ್ರಕಟವಾಗುತ್ತಿದ್ದ ಮೈಸೂರು ಕ್ರಾನಿಕಲ್ ಪತ್ರಿಕೆಯನ್ನು ವಹಿಸಿಕೊಂಡು ವಿಶ್ವಕರ್ನಾಟಕ ಎಂಬ ಹೆಸರಿನಿಂದ ವಾರಪತ್ರಿಕೆಯನ್ನಾಗಿ ಹೊರಡಿಸುತ್ತಿದ್ದರು. ೧೯೩೪ ರ ವೇಳೆಗೆ ಅದನ್ನು ದಿನಪತ್ರಿಕೆಯನ್ನಾಗಿ ಮಾಡಿದರು.
[ಬದಲಾಯಿಸಿ] ಶರ್ಮರ ಸಾಹಿತ್ಯ
- ಕರ್ನಾಟಕದಲ್ಲಿ ಸ್ವಾತಂತ್ರ್ಯ ಸಂಗ್ರಾಮ
- ಹೈದರನಾಮೆ
- ವಿಚಾರ ಕರ್ನಾಟಕ
- ವಿಕ್ರಾಂತ ಭಾರತ
- ಜೂಲಿಯಸ್ ಸೀಜರ
- ಇಂದಿರಾ ಗಾಂಧಿ
- ಮೋಕ್ಷಗುಂಡಂ ವಿಶ್ವೇಶ್ವರಯ್ಯ
- ಕರ್ಮಫಲ
- ರಾಮರಾಯನ ಬಖೈರು
ಶರ್ಮರ ಹೆಂಡತಿ ತಿರುಮಲೆ ರಾಜಮ್ಮ( ಭಾರತಿ) ಸಹ ಉತ್ತಮ ಲೇಖಕಿಯಾಗಿದ್ದರು.
ಶರ್ಮರು ಕಾಸರಗೋಡಿನಲ್ಲಿ ನಡೆದ ೩೧ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.