ದುರ್ಗಸಿಂಹ
From Wikipedia
ದುರ್ಗಸಿಂಹ ಹಳಗನ್ನಡದ ಪ್ರಮುಖ ಕವಿಗಳಲ್ಲೊಬ್ಬನು. ಈತನ ಕಾಲ ಸುಮಾರು ಕ್ರಿ.ಶ.೧೦೩೦ ಎಂದು ಸಾಹಿತ್ಯ ಚರಿತ್ರಕಾರರ ಅಭಿಪ್ರಾಯವಾಗಿದೆ. ಕರ್ಣಾಟ ಪಂಚತಂತ್ರ - ದುರ್ಗಸಿಂಹ ರಚಿಸಿದ ಮಹತ್ವಪೂರ್ಣ ಚಂಪೂ ಕಾವ್ಯ. ಪಂಚತಂತ್ರವನ್ನು ವಿಷ್ಣುಶರ್ಮ ಸಂಸ್ಕೃತದಲ್ಲಿ ರಚಿಸಿದನೆಂಬ ವಿಷಯ ಸಾಮಾನ್ಯವಾಗಿ ಪ್ರಚಲಿತದಲ್ಲಿದೆ. ಆದರೆ ತನಗೆ ಸ್ಪೂರ್ತಿಯಾಗಿದ್ದದ್ದು "ವಸುಭಾಗಭಟ್ಟ" ಸಂಸ್ಕೃತದಲ್ಲಿ ರಚಿಸಿದ ಪಂಚತಂತ್ರ ಎಂದು ದುರ್ಗಸಿಂಹ ಹೇಳಿಕೊಂಡಿದ್ದಾನೆ.
[ಬದಲಾಯಿಸಿ] ಕೃತಿಗಳು
- ಕರ್ಣಾಟ ಪಂಚತಂತ್ರ