ನಾಗವರ್ಮ
From Wikipedia
ನಾಗವರ್ಮನು ವೆಂಗಿವಿಷಯದ ವೆಂಗಿಪಳು ಗ್ರಾಮದವನು. ತಂದೆ ವೆಣ್ಣಮಯ್ಯ , ತಾಯಿ ಪೋಳಕಬ್ಬೆ. ಚಂದ್ರನೆಂಬ ರಾಜನ ಆಸ್ಥಾನದಲ್ಲಿ ಈ ಕವಿ ಇದ್ದನು. ಈತನ ಕಾಲ ೧೦ನೆಯ ಶತಮಾನದ ಉತ್ತರಭಾಗ ಅಥವಾ ೧೧ನೆಯ ಶತಮಾನದ ಪೂರ್ವಭಾಗ.ರನ್ನಕವಿಯ ಸಮಕಾಲೀನ.ಇವನ ಕೃತಿಗಳು ೨.
[ಬದಲಾಯಿಸಿ] ಕೃತಿಗಳು
೧.ಛಂದೋಂಬುಧಿ ಛಂದಸ್ಸಿಗೆ ಸಂಬಂಧಪಟ್ಟ ಕೃತಿ.ಆರಂಭದ ಐದು ಅಧ್ಯಾಯಗಳಲ್ಲಿ ಅಕ್ಷರ,ಮಾತ್ರಾ,ಅಂಶವೃತ್ತಗಳನ್ನು ವಿವರಿಸಿ ಕೊನೆಯ ಅಧ್ಯಾಯದಲ್ಲಿ ೬ ಪ್ರತ್ಯಯಗಳನ್ನು ವಿವರಿಸುತ್ತಾನೆ.ಕನ್ನಡಕ್ಕೆ ವಿಶಿಷ್ಟವಾದ ಷಟ್ಪದಿ, ತ್ರಿಪದಿ, ಗೀತಿಕೆ, ಛಂದೋವತಂಸ, ಅಕ್ಕರ ಮೊದಲಾದ ಅಂಶವೃತ್ತಗಳ ವಿವರಣೆ ಐದನೆಯ ಅಧ್ಯಾಯದಲ್ಲಿ ದೊರೆಯುತ್ತದೆ.
೨.ಸಂಸ್ಕೃತದಲ್ಲಿ ಬಾಣಭಟ್ಟ ಹಾಗು ಆತನ ಮಗ ಭೂಷಣಭಟ್ಟರಿಂದ ರಚಿತವಾದ "ಕಾದಂಬರಿ"ಯನ್ನು ಆಧರಿಸಿ ಕರ್ಣಾಟಕ ಕಾದಂಬರಿಯನ್ನು ನಾಗವರ್ಮನು ರಚಿಸಿದನು.ಚಂಪೂರೂಪದ ಈ ಕೃತಿ ಸಂಸ್ಕೃತದ ಅನುವಾದವಾದರೂ,ಸ್ವತಂತ್ರಕೃತಿ ಎನ್ನಬಹುದಾದ ಶ್ರೇಷ್ಠ ಗ್ರಂಥ.