ನಾಡಿಗೇರ ಕೃಷ್ಣರಾವ್
From Wikipedia
ನಾಡಿಗೇರ ಕೃಷ್ಣರಾವ್ ಇವರು ೧೯೦೮ ಮಾರ್ಚ್ ೨೫ರಂದು ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಜನಿಸಿದರು. ಇವರ ತಾಯಿ ಕಾಮಾಕ್ಷಮ್ಮ ; ತಂದೆ ದತ್ತಾತ್ರೇಯ. ಫಿಫ್ತ್ ಫಾರಂ ನಂತರ ಓದಿಗೆ ಶರಣು ಹೊಡೆದು, ಜವಳಿ ಅಂಗಡಿ ಗುಮಾಸ್ತ, ಹೋಟೆಲ್‌ನಲ್ಲಿ ದಿನಗೂಲಿ.. ಹೀಗೆ ಏನೇನೋ ಆಗಿ ಕಡೆಗೆ ಬಂದು ಸೇರಿದ್ದು ಪತ್ರಿಕೋದ್ಯಮಕ್ಕೆ. ನಾಡಿಗೇರ ಕೃಷ್ಣರಾಯರು ‘ಲೋಕಮತ’, ‘ಸಂಯುಕ್ತ ಕರ್ನಾಟಕ’, ‘ಕಥಾಂಜಲಿ’, ‘ಪ್ರಜಾಮತ’ ,ದೇಶಬಂಧು ಮುಂತಾದ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ‘ಗೇಡಿನಾರ’ ಕಾವ್ಯನಾಮದಲ್ಲಿ ಸಾಹಿತ್ಯರಚನೆ ಮಾಡಿದ್ದಾರೆ.ಇವರು ರಚಿಸಿದ ಕೃತಿಗಳ ಸಂಖ್ಯೆ ಸುಮಾರು ೬೫ಕ್ಕೂ ಹೆಚ್ಚು.ಇವರ ಬರಹಗಳಲ್ಲಿ ಇವರೇ ನಾಯಕರು.ಇವರ ಶ್ರೀಮತಿ ಮತ್ತು ಮಕ್ಕಳೇ ಇತರ ಪಾತ್ರಧಾರಿಗಳು.
.
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಹಾಸ್ಯಸಂಕಲನ
- ಅಡ್ಡಾದಿಡ್ಡಿ
- ಏನೋ ಆಯಿತು
- ಕಸದ ಬುಟ್ಟಿ
- ಕೇಡಿಗನ ಕಿಡಿಗಳು
- ತಲೆಹರಟೆ
- ನಾಡಿಗೇರರ ನಗೆಮಿಂಚುಗಳು
- ನಾಡಿಗೇರರ ಬರಹಗಳು
- ನಾಮಕರಣ
- ನೈಲಾನ್ ಹುಡುಗಿ
- ಬೇಸ್ತು
- ಮೆಲ್ಲೋಗರ
- ಮೈಕಾಸುರನ ಹಾವಳಿ
- ರಾಯಭೇರಿ
- ಸ್ವಾರಸ್ಯ ಪ್ರಸಂಗ
- ಹರಕು-ಮುರುಕು
- ಹೇಗಿದ್ದರೂ ಕಷ್ಟ
[ಬದಲಾಯಿಸಿ] ಕಾದಂಬರಿ
- ಅದಲು ಬದಲು
- ಇಬ್ಬರು ಸುಂದರಿಯರು
- ಎದಿರೇಟು
- ಕನಸಿನ ರಾಣಿ
- ಕಮಲೆಯ ಕನಸು
- ಗಗನ ಚಂದಿರ
- ಗಾನನಂದಿನಿ
- ಗುಲಾಮ
- ತುಳಸಮ್ಮನ ಸಂಸಾರ
- ನರಕದಲ್ಲಿ ಸ್ವರ್ಗ
- ನಾಲ್ಕು ಸುಂದರಿಯರು
- ನೀಲವೇಣಿ
- ಪ್ರಿಯಸಖಿ
- ಪ್ರೇಮಮಂಟಪ
- ಪ್ರೇಮವಂಚಿತ
- ಬೆಂಕಿಯ ಹೂವು
- ಮೂರಕ್ಕೆ ಮುಕ್ತಿ
- ಮೂವರು ಗೆಳತಿಯರು
- ರಾಜಕಾರಣಿ
- ಶಿಲಾಬಾಲಿಕೆ
- ಸುಜಾತಾ
- ಸೆರಗಿನಲ್ಲಿ ಬಿದ್ದ ಹೆಣ್ಣು
[ಬದಲಾಯಿಸಿ] ಹಾಸ್ಯ ನಾಟಕ
- ಪುಢಾರಿ ಪುಟ್ಟಯ್ಯ
[ಬದಲಾಯಿಸಿ] ಕ್ಷೇತ್ರ ಪರಿಚಯ
- ಶ್ರೀ ಹರಿಹರ ಕ್ಷೇತ್ರ
[ಬದಲಾಯಿಸಿ] ಸಿನಿಮಾ ನಂಟು
೧೯೫೪ರಲ್ಲಿ ಸಿ.ವಿ.ರಾಜು ನಿರ್ಮಿಸಿದ ನಟಶೇಖರ ಚಿತ್ರಕ್ಕೆ ಸಂಭಾಷಣೆ ಮತ್ತು ೧೫ ಹಾಡುಗಳನ್ನು ಬರೆದರು.ಇದೇ ನಿರ್ಮಾಪಕರ ಭಕ್ತ ಮಲ್ಲಿಕಾರ್ಜುನ ಚಿತ್ರಕ್ಕೆ ೮ ಹಾದುಗಳನ್ನು ಬರೆದರು.
[ಬದಲಾಯಿಸಿ] ವೈಶಿಷ್ಟ್ಯ
ಕನ್ನಡದ ಕಟ್ಟಾಳು ಅ.ನ.ಕೃಷ್ಣರಾಯರು ನಾಡಿಗೇರರ ಸಾಧನೆಯನ್ನು ಈ ರೀತಿಯಾಗಿ ವರ್ಣಿಸಿದ್ದಾರೆ:
ಪತ್ರಿಕೋದ್ಯಮಿಯಾಗಿಯಾಗಿ ಕಟ್ಟಿದನು ಗೆಜ್ಜೆ
ಕಾದಂಬರಿಗಳನು ಬರೆದು ಹಾಕಿದನು ಹೆಜ್ಜೆ
ನಗೆಹರಟೆಗಳ ರಚಿಸಿ ಬಾರಿಸಿದ ಡೋಲು
ಇವನ ಜೀವನ ಹಿರಿದು -- ಇವಗಿಲ್ಲ ಸೋಲು