ಪ್ರಜಾಮತ
From Wikipedia
೧೯೩೧ರಲ್ಲಿ ಆರಂಭವಾದ ಕನ್ನಡ ವಾರಪತ್ರಿಕೆ ಪ್ರಜಾಮತ ಬಹಳ ಜನಪ್ರಿಯವಾಗಿತ್ತು. ಆಗ ಬಿ.ಎನ್.ಗುಪ್ತರು ಅದರ ಮಾಲೀಕ ಹಾಗೂ ಸಂಪಾದಕರಾಗಿದ್ದರು. ಮೈಸೂರು ಸರ್ಕಾರ ಅದರ ಪ್ರಕಟಣೆಯನ್ನು ನಿಲ್ಲಿಸಿದ್ದಾಗ ಹುಬ್ಬಳ್ಳಿಯಿಂದ ಪ್ರಕಟವಾಗುತ್ತಿತ್ತು. ಅದರ ಪ್ರತಿಗಳ ಮಾರಾಟವನ್ನು ನಿಲ್ಲಿಸಿದ್ದಾಗ,ಪ್ರಜಾಮಿತ್ರ ಎಂಬ ಹೆಸರಿನಿಂದ ಮಾರಾಟವಾಗುತ್ತಿತ್ತು. ಪ್ರಜಾಮತದ ತೆಲುಗು ಆವೃತ್ತಿಯನ್ನೂ ಪ್ರಾರಂಭಿಸಲಾಗಿತ್ತು. ಶ್ರೀನಿವಾಸಯ್ಯ, ಎಮ್.ಎಸ್.ಗುರುಪಾದಸ್ವಾಮಿ, ಟಿ.ಸಿದ್ದಪ್ಪ, ಎಚ್.ವಿ.ನಾಗರಾಜ್‌ರವರು ಕೆಲಕಾಲ ಇದರ ಸಂಪಾದಕರುಗಳಾಗಿದ್ದರು.
ಅನೇಕ ಸಾಹಿತಿಗಳ ಜನಪ್ರಿಯ ಕಾದಂಬರಿಗಳು ಪ್ರಜಾಮತ ವಾರಪತ್ರಿಕೆಯಲ್ಲಿ ಧಾರಾವಾಹಿಗಳಾಗಿ ಪ್ರಕಟವಾಗಿವೆ.