ಬಿ.ಎಲ್.ರೈಸ್
From Wikipedia
ಬಿ.ಎಲ್.ರೈಸ್ ಇವರು ೧೮೩೭ ಜುಲೈ ೧೭ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆ ಕ್ರೈಸ್ತ ಧರ್ಮಬೋಧಕರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿಯೆ ಮುಗಿಸಿದ ರೈಸ್ ಉನ್ನತ ವ್ಯಾಸಂಗಕ್ಕಾಗಿ ಲಂಡನ್ನಿಗೆ ತೆರಳಿದರು. ಮರಳಿದ ಬಳಿಕ ಬೆಂಗಳೂರಿನ ಸೆಂಟ್ರಲ್ ಹೈಸ್ಕೂಲಿನಲ್ಲಿ ಪ್ರಾಂಶುಪಾಲರಾದರು. ತರುವಾಯ ಮೈಸೂರು ಸಂಸ್ಥಾನದಲ್ಲಿ ಶಿಕ್ಷಣಾಧಿಕಾರಿಯಾಗಿ, ವಿದ್ಯಾ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ೧೮೯೦ರಲ್ಲಿ ಕೆ.ಶೇಶಾದ್ರಿ ಅಯ್ಯರರವರು ಪುರಾತತ್ವ ಇಲಾಖೆ ಪ್ರಾರಂಭಿಸಿದಾಗ, ರೈಸ್ ಅಲ್ಲಿ ತಮ್ಮ ಸೇವೆ ನೀಡಿದರು. ಪಂಪ, ನಾಗಚಂದ್ರ ಮೊದಲಾದ ಕನ್ನಡದ ಹಳೆಯ ಕವಿಗಳ ಬಗೆಗೆ ಅಮೂಲ್ಯ ಸಂಶೋಧನೆ ಮಾಡಿದರು. ಮೈಸೂರು ಗೆಜೆಟಿಯರ್, ಬಿಬ್ಲಿಯಾತಿಕಾ ಕರ್ನಾಟಕಾ ಮೊದಲಾದವು ರೈಸರ ಅಪೂರ್ವ ಕೊಡುಗೆಗಳು.ರೈಸರು ಸಂಗ್ರಹಿಸಿದ ಸುಮಾರು ೯೦೦೦ ಶಾಸನಗಳು ಎಪಿಗ್ರಾಫಿಯಾ ಕರ್ನಾಟಿಕಾದಲ್ಲಿ ದಾಖಲೆಯಾಗಿವೆ. ಭಾರತದ ಪ್ರಥಮ ಸಾಮ್ರಾಟನಾದ ಚಂದ್ರಗುಪ್ತ ಮೌರ್ಯನು ಶ್ರವಣಬೆಳಗೊಳಕ್ಕೆ ಬಂದಿದ್ದನ್ನು ಸಂಶೋಧಿಸಿದವರು ಇವರೆ!
೧೯೦೭ರಲ್ಲಿ ಇಂಗ್ಲಂಡಿಗೆ ಮರಳಿದ ಬಿ.ಎಲ್.ರೈಸ್ ೧೯೨೭ ಜುಲೈ ೧೦ರಂದು ನಿಧನರಾದರು.