ಬೆನಗಲ್ ರಾಮರಾವ್
From Wikipedia
ಬೆನಗಲ್ ರಾಮರಾವ್ ಇವರು ೧೮೭೬ ಎಪ್ರಿಲ್ ೩ರಂದು ಮಂಗಳೂರು ಜಿಲ್ಲೆಯ ಮುಲ್ಕಿಯಲ್ಲಿ ಜನಿಸಿದರು.
[ಬದಲಾಯಿಸಿ] ಶಿಕ್ಷಣ
ರಾಮರಾಯರು ಮುಲ್ಕಿ, ಮಂಗಳೂರು ಹಾಗು ಪುತ್ತೂರುಗಳಲ್ಲಿ ವ್ಯಾಸಂಗ ಮಾಡಿ ಬಿ.ಎ. ಪದವಿ ಪಡೆದರು. ಮದ್ರಾಸಿನ ( ಈಗಿನ ಚೆನ್ನೈ ) ಕ್ರಿಶ್ಚಿಯನ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಂತೆಯೆ, “ಆಧುನಿಕ ಕನ್ನಡದಲ್ಲಿ ನವೋದಯ” ಮಹಾಪ್ರಬಂಧ ರಚಿಸಿ ಎಂ.ಎ. ಪದವಿ ಪಡೆದರು.
ಕನ್ನಡವಲ್ಲದೆ, ಸಂಸ್ಕೃತ , ತೆಲುಗು , ಮರಾಠಿ , ಬಂಗಾಲಿ ಭಾಷೆಗಳಲ್ಲೂ ಸಹ ಪರಿಣಿತಿ ಪಡೆದಿದ್ದರು.
[ಬದಲಾಯಿಸಿ] ವೃತ್ತಿ
ಮದ್ರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಕೆಲ ಕಾಲ ಅಧ್ಯಾಪಕರಾಗಿದ್ದ ರಾಮರಾಯರು, ಆ ಮೇಲೆ ಮೈಸೂರಿನ ಸರಕಾರಿ ಟ್ರೇನಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರೆಂದು ಸೇವೆ ಸಲ್ಲಿಸಿದರು.
[ಬದಲಾಯಿಸಿ] ಸಾಹಿತ್ಯ ಸೇವೆ
ರಾಮರಾಯರು ‘ಸುವಾಸಿನಿ’ , ‘ವಾಗ್ಭೂಷಣ’ , ‘ಸಾಹಿತ್ಯ ಪತ್ರಿಕೆ’ ಇವುಗಳಿಗೆ ಸಂಪಾದಕರಾಗಿ ದುಡಿದಿದ್ದಾರೆ.
‘ತಂಜಾವೂರು ಮನೆತನದ ಕೈಫಿಯತ್’ , ‘ಹಳೆಬೀಡು ಕೈಫಿಯತ್’ ಇವು ರಾಮರಾಯ ಎರಡು ಪ್ರಮುಖ ಸಂಪಾದನೆಗಳು. ‘ಪುರಾಣನಾಮ ಚೂಡಾಮಣಿ’ ಇದು ಸುಂದರಶಾಸ್ತ್ರಿಗಳ ಜೊತೆಗೆ ರಚಿಸಿದ ಅಮೂಲ್ಯ ಕೃತಿ.
ಸಂಸ್ಕೃತದ ‘ದೂತಾಂಗದ’ ಹಾಗು ‘ಶಾಪಸಂಭ್ರಮ’ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಇವರು ೧೯೨೫ರಲ್ಲಿ ಬೆಳಗಾವಿಯಲ್ಲಿ ಜರುಗಿದ ೧೧ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.