ಬೆಳ್ಳಾವೆ ವೆಂಕಟನಾರಣಪ್ಪ
From Wikipedia
ರಾಜಸೇವಾಸಕ್ತ ಬೆಳ್ಳಾವೆ ವೆಂಕಟನಾರಣಪ್ಪನವರು ತುಮಕೂರು ತಾಲೂಕಿನ ಬೆಳ್ಳಾವೆಯಲ್ಲಿ ೧೮೭೧ರಲ್ಲಿ ಜನಿಸಿದರು.
ತುಮಕೂರು ಹಾಗು ಬೆಂಗಳೂರುಗಳಲ್ಲಿ ವ್ಯಾಸಂಗ ಮಾಡಿ, ಎಮ್.ಎ. ಪದವಿ ಪಡೆದ ಬಳಿಕ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಭೌತಶಾಸ್ತ್ರದ ಅಧ್ಯಾಪಕರಾದರು.
ಕನ್ನಡದ ಮೊದಲ ವಿಜ್ಞಾನ ಪತ್ರಿಕೆ “ವಿಜ್ಞಾನ”ವನ್ನು ಹೊರತಂದ ಹೆಗ್ಗಳಿಕೆ ಇವರದು. ಕನ್ನಡ ಸಾಹಿತ್ಯ ಪರಿಷತ್ತಿನ “ಪರಿಷತ್ ಪತ್ರಿಕೆ’’ಯಲ್ಲಿ ಸಹ ಇವರು ಗಣನೀಯ ಸೇವೆ ಸಲ್ಲಿಸಿದ್ದಾರೆ. ಕೆಳಕಂಡ ಪ್ರಾಚೀನ ಕೃತಿಗಳ ಸಂಪಾದನೆಯಲ್ಲಿ ಇವರು ಸಲ್ಲಿಸಿದ ಸೇವೆ ಅಪಾರ.
- ಪಂಪರಾಮಾಯಣ
- ಪಂಪಭಾರತ
- ಚಾವುಂಡರಾಯ ಪುರಾಣ
- ಸೋಮೇಶ್ವರ ಶತಕ
- ಕುಸುಮಾವಳಿ ಕಾವ್ಯ
- ಶಬ್ದಮಣಿ ದರ್ಪಣ
ಇವರು ೧೯೩೭ರಲ್ಲಿ ಜಮಖಂಡಿಯಲ್ಲಿ ಜರುಗಿದ ೨೨ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಬೆಳ್ಳಾವೆ ವೆಂಕಟನಾರಣಪ್ಪನವರು ೧೯೪೩ರಲ್ಲಿ ನಿಧನರಾದರು.