ಮುದವೀಡು ಕೃಷ್ಣರಾಯರು
From Wikipedia
ಮುದವೀಡು ಕೃಷ್ಣರಾಯರು ಬಾಗಲಕೋಟೆಯಲ್ಲಿ ಜನಿಸಿದರು. ಧಾರವಾಡದಲ್ಲಿ ಮ್ಯಾಟ್ರಿಕ್ ವರೆಗೆ ಓದಿ, ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು. ನೆಹರೂ, ರಾಜಾಜಿ ಮೊದಲಾದ ಅನೇಕ ರಾಷ್ಟ್ರೀಯ ನಾಯಕರ ಸಭಾ ಭಾಷಣಗಳನ್ನು ವೇದಿಕೆಯ ಮೇಲೆ ಕನ್ನಡಕ್ಕೆ ಅನುವಾದಿಸಿ ಹೇಳುವದರಲ್ಲಿ ಕೌಶಲ್ಯ ತೋರಿದವರು. ಕರ್ನಾಟಕ ಏಕೀಕರಣಕ್ಕಾಗಿ ದುಡಿದವರು.
ಮುದವೀಡು ಕೃಷ್ಣರಾಯರು‘ ಕರ್ನಾಟಕ ವೃತ್ತ’ , ‘ ಧನಂಜಯ’ ಪತ್ರಿಕೆಗಳ ಸಂಪಾದಕರಾಗಿ ಸೇವೆ ಸಲ್ಲಿಸಿದರು. ‘ ಕಲೋತ್ತೇಜಕ ಕರ್ನಾಟಕ ಮಂಡಳಿ’ ಯನ್ನು ಸ್ಥಾಪಿಸಿ ನಾಟಕಗಳನ್ನು ಬರೆದು ಆಡಿಸಿದರು; ಸ್ವತಃ ನಟಿಸಿದರು.
ಬೆಳಗಾವಿಯಲ್ಲಿ ೧೯೩೯ರಲ್ಲಿ ಜರುಗಿದ ೨೪ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಮುದವೀಡು ಕೃಷ್ಣರಾಯರು ರಚಿಸಿದ ಕಾದಂಬರಿಗಳು: ಚಿತ್ತೂರು ಮುತ್ತಿಗೆ, ರಾಮರಾಜ್ಯ ವಿಯೋಗ, ಪ್ರೇಮಭಂಗ