ಮೈಸೂರು ಮಲ್ಲಿಗೆ
From Wikipedia
೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ ಮೈಸೂರು ಮಲ್ಲಿಗೆ ಬಗ್ಗೆ ಮಾಹಿತಿಗೆ ಈ ಲೇಖನ ನೋಡಿ
ಈ ಲೇಖನವನ್ನು ಪರಿಷ್ಕರಣೆಗೆ ಹಾಕಲಾಗಿದೆ. ಲೇಖನವನ್ನು 'ವಿಕಿ' ಲೇಖನಗಳಂತೆ ಶುದ್ಧೀಕರಿಸಿದ ನಂತರ ಈ ಸಂದೇಶವನ್ನು ತೆಗೆದುಹಾಕಿ. To meet Wikipedia's quality standards, this article or section may require cleanup. |
ಶ್ರೀ ಕೆ.ಎಸ್.ನರಸಿಂಹಸ್ವಾಮಿ ಕನ್ನಡದ ಅದ್ವೀತಿಯ ಪ್ರೇಮಕವಿ. ಅವರ ಮೈಸೂರು ಮಲ್ಲಿಗಯಂತೂ ಕನ್ನಡ ಪ್ರೇಮಕಾವ್ಯದ ಜಯಬೇರಿ. ಇದನ್ನು ಬರೆದು ಬೆಳಕು ಹರಿಯುವುದರ ಓಳಗೆ ಈ ಕವಿ ನಾಡಿನ ತುಂಬಾ ಹೆಸರಾಗಿ ಬಿಟ್ಟರು. ಪ್ರೇಮಜೀವನದ ಸಾರ್ಥಕ ಮುಹೂರ್ತಗಳ ಸುಂದರ ಚಿತ್ರಗಳನ್ನು ನೀಡಿ ಕನ್ನಡ ಸಾಹಿತ್ಯ/ಕಾವ್ಯ ಪ್ರಪಂಚದಲ್ಲಿ ಶಾಶ್ವತ ಸ್ಥಾನ ಸಂಪಾದಿಸಬಿಟ್ಟರು. ಜೀವ ಜಾಲಕೆಲ್ಲಾ ಮರಳು ಹಿಡಿಸುವ ಪ್ರೀತಿಯ ಮಾಯೇಯೆ ಇಲ್ಲಿನ ಕವಿತೆಗಳ ವಸ್ತು. ಹಾಗೆಂದೇ ಇವು ಹೋಸ ದಂಪತಿಗಳ ಪಿಷು-ಮಾತಿನಷ್ಟೇ ಸವಿಯಾಗಿದೆ. ಮೈಸೂರು ಮಲ್ಲಿಗೆಯ ಲಾವಣ್ಯ ಅಪ್ಸರೆಯ ಚೆಲುವಿನಂತೆ. ಇದು ಈ ಮಣ್ಣು ನಲದಿಂದ ಬರಲು ಸಾಧ್ಯವೇ ಎಂದು ವರಕವಿ ಭೇಂದ್ರೆಯಂತವರೇ ಆಶ್ಛರ್ಯಪಟ್ಟಿದ್ದಾರೆ. ಕಸ್ತೂರಿಯ ನೆಲದಲ್ಲಿ ಕಾಮನಬಿಲ್ಲನು ಬಿಟ್ಟಿ ಬೆಳದ ಹೂದೋಟ ಇದು ಎಂದು ಪ್ರಾಙನರು ಪ್ರಶಂಸಿದ್ದಾರೆ. ಬಳೆಗಾರ ಚ್ಚೆನ್ನಯ್ಯಾ , ಓಂದಿರುಳು ಕನಸಿನಲಿ , ರಾಯರು ಬಂದರು ಮಾವನ ಮನೆಗೆ ಕಾವ್ಯ ರಸಿಕರ ಹೈದಯಕ್ಕೇ ಲಗ್ಗೆಹಾಕಿದ ಕವಿತೆಗಳು. ಈ ಕವಿ ಮೋದಲ ಇನ್ನಿಂಗಸ್ನಲ್ಲಿಯೇ ಹೋಡೆದ ಸಿಕ್ಸರ್ಗಳು. ಪುಸ್ತಕನೋಡದೆ ಕವಿಯಾರೆಂದು ತಿಳಯದೆ ಬಾಯಿಂದ ಬಯಿಗೆ ಇವು ಹರಿದು ಬಂದ್ದದೂ ಇದೆ. ಈ ಕವಿತೆಗಳಲ್ಲಿ ಕಾಣಿಸಿಕೋಂಡಿರುವ ದಂಪತಿಗಳು ಮುಪ್ಪು ಸಾವಿಲ್ಲದ ಗಂಧರ್ವರಾಗಿದ್ದಾರೆ, ನಾಡಿನ ಜನಕ್ಕೆ ತಮ್ಮ ಯೌವನದ ಪ್ರತಿನಿತಿಗಳಾಗಿದ್ದಾರೆ.
ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು ಚೆಂದ ನಿನಗಾವುದೆಂದು ನಮ್ಮೂರು ಹೋನ್ನೂರೋ ನಿಮ್ಮೂರು ನವಿಲೂರೋ ಚೆಂದ ನಿನಗಾವುದೆಂದು
ನಮ್ಮೂರು ಚೆಂದವೋ ನಿಮ್ಮೂರು ಚೆಂದವೋ ಎಂದೆನ್ನ ಕೇಳಲೇಕೆ ಎನ್ನರಸ ಸುಮ್ಮನ್ನಿರಿ ಎಂದಳಾಕೆ
ತೌರೂರ ದಾರಿಯಲಿ ತೆಂಗುಗಳು ತಲೆದೂಗಿ ಬಾಳೆಗಳು ತೋಳಲೇಕೆ ಮಲ್ಲಿಗೆಯ ಮೋಗ್ಗುಗಳು ಮುಳ್ಲ ಬೇಲಿಯನಾವರಿಸಿ ಬಳುಕಿತರೆ ಕೆಂಪ ಸೂಸಿ
ನಗುನಗುತ ನಮ್ಮೂರ ಹೆಣ್ಣುಗಳು ಬರುತಿರಲು ನಿಮ್ಮೂರ ಸಂತೆಗಾಗಿ ನಮ್ಮೂರಿಗಿಂತಲು ಹೋನ್ನೂರೆ ಸುಖವೆಂದು ನಿಲ್ಲಿಸಿತು ಪ್ರೇಮ ಕೂಗಿ
ನಿಮ್ಮೂರ ಬಂಡೆಯಲಿ ನಮ್ಮೂರ ಬಿಟ್ಟಾಗ ಓಡಿದುದು ದಾರಿ ಬೇಗ ಪುಟ್ಟ ಕಂದನ ಕೇಕೆ ತೋಟ್ಟಿಲನು ತುಂಬಿತ್ತು ನಿಮ್ಮೂರ ಸೇರಿದಾಗ
ಊರ ಬೇಲಿಗೆ ಬಂದು ನೀವು ನಮ್ಮನು ಕಂಡು ಕುಶಲವನು ಕೇಳಿದಾಗ ತುಟಿಯಲೇನೋ ನಿಂದು ಕಣ್ಣಲೆನೋ ಬಂದು ಕೆನ್ನೆ ಕೆಂಪಾಯಿತಾಗ