ರಂಗನಾಥ ದಿವಾಕರ
From Wikipedia
ರಂಗನಾಥ ರಾಮಚಂದ್ರ ದಿವಾಕರ ಇವರು ೧೮೯೪ ಸಪ್ಟಂಬರ ೩೦ ರಂದು ಧಾರವಾಡದಲ್ಲಿ ಜನಿಸಿದರು. ತಂದೆ ರಾಮಚಂದ್ರ, ತಾಯಿ ಸೀತಾಬಾಯಿ. ಇವರು ಬೆಳಗಾವಿ, ಪುಣೆ, ಮುಂಬಯಿಯಲ್ಲಿ ಶಿಕ್ಷಣ ಪಡೆದು ಎಮ್.ಏ. ಪದವಿಧರರಾದರು.
ಗಾಂಧೀಜಿ, ತಿಲಕ, ಅರವಿಂದರಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ಅಪ್ಪಟ ಗಾಂಧಿವಾದಿಯಾಗಿ ಜೀವನದುದ್ದಕ್ಕು ಬದುಕಿದರು. ಸೆರೆಮನೆಯಲ್ಲಿಯ ಇವರ ಅನುಭವಗಳು “ ಸೆರೆಯ ಮರೆಯಲ್ಲಿ” ಕೃತಿಯಲ್ಲಿ ವ್ಯಕ್ತವಾಗಿವೆ. ಭಾರತ ಸ್ವತಂತ್ರವಾದ ಬಳಿಕ ಕೇಂದ್ರ ಸರಕಾರದ ಸುದ್ದಿ ಶಾಖೆ ಮಂತ್ರಿಯಾಗಿ, ಬಿಹಾರದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು. ೧೯೩೮ರಲ್ಲಿ ಬಳ್ಳಾರಿಯಲ್ಲಿ ಜರುಗಿದ ೨೩ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿದ್ದರು. ‘ ಸಂಯುಕ್ತ ಕರ್ನಾಟಕ’ , ‘ ಕರ್ಮವೀರ’ , ‘ ಕಸ್ತೂರಿ’ ಪತ್ರಿಕೆಗಳಿಗೆ ಸಂಪಾದಕರಾಗಿದ್ದರು. ‘ ಲೋಕಶಿಕ್ಷಣ ಟ್ರಸ್ಟ’ ನ ಅಧ್ಯಕ್ಷರಾಗಿದ್ದರು.
ರಂಗನಾಥ ದಿವಾಕರ ಅವರ ಕನ್ನಡ ಸಾಹಿತ್ಯರಚನೆ:
ಸೆರೆಯ ಮರೆಯಲ್ಲಿ, ಮಹಾತ್ಮರ ಮನೋರಂಗ, ವಚನಶಾಸ್ತ್ರ ರಹಸ್ಯ, ಹರಿಭಕ್ತಿಸುಧೆ, ಉಪನಿಷತ್ ಪ್ರಕಾಶ, ಉಪನಿಷತ್ ಕಥಾವಲಿ, ಗೀತೆಯ ಗುಟ್ಟು, ಕರ್ಮಯೋಗ, ೧೮೫೭ರ ಸ್ವಾತಂತ್ರ್ಯ ಸಂಗ್ರಾಮ
ರಂಗನಾಥ ದಿವಾಕರರ ಆಂಗ್ಲ ಗ್ರಂಥಗಳು:
ಸತ್ಯಾಗ್ರಹ, ಗ್ಲಿಂಪ್ಸಸ್ ಆಫ್ ಗಾಂಧೀಜಿ, ಉಪನಿಷತ್ ಇನ್ ಸ್ಟೊರೀಜ್ ಎಂಡ್ ಡೈಲಾಗ್, ಮಹಾಯೋಗಿ, ಭಗವಾನ್ ಬುದ್ಧ, ಕರ್ನಾಟಕ ಥ್ರೂ ಏಜಿಸ್(ಸಂಪಾದಿತ)
ರಂಗನಾಥ ದಿವಾಕರ ಅವರು ಬಿಹಾರ ರಾಜ್ಯದ ರಾಜ್ಯಪಾಲರಾಗಿದ್ದರು.