ರಾ.ಹ.ದೇಶಪಾಂಡೆ
From Wikipedia
ರಾ.ಹ.ದೇಶಪಾಂಡೆ ಎಂದೇ ಪ್ರಸಿದ್ಧರಾದ ರಾಮಚಂದ್ರ ಹಣಮಂತರಾವ ದೇಶಪಾಂಡೆ ಇವರು ಧಾರವಾಡಕ್ಕೆ ಸಮೀಪದಲ್ಲಿರುವ ನರೇಂದ್ರ ಗ್ರಾಮದಲ್ಲಿ ೧೮೬೧ರಲ್ಲಿ ಜನಿಸಿದರು.
ಮೊದಲಲ್ಲಿ ಶಿಕ್ಷಕ ವೃತ್ತಿಯಲ್ಲಿದ್ದ ದೇಶಪಾಂಡೆಯವರು ಆನಂತರ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿದರು. ದೇಶಪಾಂಡೆಯವರು ಸುಮಾರು ಮೂವತ್ತು ಕೃತಿಗಳನ್ನು ರಚಿಸಿದ್ದಾರೆ. ಇವು ಹೆಚ್ಚಾಗಿ ಕರ್ನಾಟಕದ ಹಾಗು ಭಾರತದ ಇತಿಹಾಸಕ್ಕೆ ಸಂಬಂಧಪಟ್ಟಿವೆ.
ರಾ.ಹ.ದೇಶಪಾಂಡೆಯವರು ‘ಕನ್ನಡದ ಕಟ್ಟಾಳು’ ಎಂದೇ ಹೆಸರು ಪಡೆದಿದ್ದರು. ಕನ್ನಡಕ್ಕೆ ಇವರು ಸಲ್ಲಿಸಿದ ಅತಿ ಮಹತ್ವದ ಸೇವೆ ಎಂದರೆ ‘ಕರ್ನಾಟಕ ವಿದ್ಯಾವರ್ಧಕ ಸಂಘ’ದ ಸ್ಥಾಪನೆ. ದೇಶಪಾಂಡೆಯವರು ಈ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಯಾಗಿದ್ದರು.
ಇವರ ಕೆಲವು ಕೃತಿಗಳು:
- ಅಕಬರ ಚರಿತ್ರೆ
- ಮೊಗಲ ಬಾದಶಾಹಿ ಪೂರ್ವಾರ್ಧ
- ಛತ್ರಪತಿ ಶಿವಾಜಿ ಮಹಾರಾಜ
- ಕರ್ನಾಟಕ ಸಾಮ್ರಾಜ್ಯ (೧,೨)
ರಾ.ಹ.ದೇಶಪಾಂಡೆಯವರು ೧೯೩೦ರಲ್ಲಿ ನಿಧನರಾದರು.