ವಿಕ್ರಮಾರ್ಜುನ ವಿಜಯ
From Wikipedia
ಇದು ಕನ್ನಡದ ಆದಿಕವಿಯೆಂದು ಹೆಸರುವಾಸಿಯಾದ ಪಂಪನು ಬರೆದ ಮಹಾಭಾರತ.ಪಂಪನ ಮೊದಲ ಕೃತಿ ಆದಿಪುರಾಣ.ಎರಡನೆಯದೇ ವಿಕ್ರಮಾರ್ಜುನ ವಿಜಯ ಅಥವಾ ಪಂಪಭಾರತ.ವಿಕ್ರಮಾರ್ಜುನ ವಿಜಯ ಕೃತಿಯನ್ನು ಪಂಪನು ಆರು ತಿಂಗಳಿನಲ್ಲಿ ಬರೆದು ಮುಗಿಸಿದೆನೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ.ಈ ಕೃತಿಯಲ್ಲಿ ಲೌಕಿಕವನ್ನು ಅಂದರೆ ಲೋಕದ ವ್ಯಾಪಾರ ವ್ಯವಹಾರವನ್ನು,ನಯಗುಣ ಗರಿಮೆಗಳನ್ನು ತಿಳಿದುಕೊಳ್ಳಬಹುದೆನ್ನುತ್ತಾನೆ ಪಂಪ.
ಪಂಪಭಾರತ ಮಹಾಭಾರತದ ಕಥೆಯನ್ನು ಸಂಕ್ಷಿಪ್ತವಾಗಿ ತಿಳಿಸುತ್ತದೆ.ಈ ಕಥೆಯ ನಾಯಕ ಅರ್ಜುನ.ಇಲ್ಲಿ ಪಂಪ ತನ್ನ ಆಶ್ರಯದಾತ,ಮಿತ್ರನಾದ ಅರಿಕೇಸರಿಯನ್ನು ಅರ್ಜುನನಿಗೆ ಹೋಲಿಸಿ ಕಾವ್ಯ ರಚಿಸಿದ್ದಾನೆ.ಈ ಕೃತಿಯ ಪ್ರಕಾರ ದ್ರೌಪದಿ ವಿವಾಹವಾಗುವುದು ಅರ್ಜುನನನ್ನು ಮಾತ್ರ.ತನ್ನ ರಾಜ ಅರಿಕೇಸರಿಗೆ ಹೋಲಿಸಿ ಬರೆದ ಕಾರಣ ಪಂಪ ಮಹಾಭಾರತದ ಕಥೆಯಲ್ಲಿ ಇಂತಹ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾಗಿ ಬಂತು. ಅಸಾಧಾರಣವಾದ ಪ್ರತಿಭೆ ಹಾಗೂ ಸೌಂದರ್ಯದಿಂದ ಕೂಡಿದ ಈ ಕಾವ್ಯದ ಕೊನೆಯಲ್ಲಿ ಅರ್ಜುನನೋಡನೆ ಸಿಂಹಾಸನವನ್ನೇರುವವಳು ಸುಭದ್ರೆ!