ಎಮ್.ರಾಮಮೂರ್ತಿ
From Wikipedia
ಎಮ್.ರಾಮಮೂರ್ತಿಯವರು ವೀರಕೇಸರಿ ಸೀತಾರಾಮಶಾಸ್ತ್ರಿಗಳ ಹಿರಿಯ ಮಗ. ೧೯೫೦ರ ದಶಕದಲ್ಲಿ ಬರೆಯುತ್ತಿದ್ದ ಇವರು ಕನ್ನಡದ ಪತ್ತೇದಾರಿ ಕಾದಂಬರಿಗಳಿಗೆ ಹೊಸ ಮೆರಗು ತಂದ ಲೇಖಕರು.ಕನ್ನಡ ಚಳುವಳಿಗಳಲ್ಲಿ ಅ.ನ.ಕೃಷ್ಣರಾಯರಿಗೆ ಯಾವಾಗಲೂ ಜೊತೆ ಜೊತೆಯಾಗಿ ನಿಂತು ಹೋರಾಡಿದವರು. ತಮ್ಮ ಮನೆಯ ಮುಂದೆ ನಡೆಯುತ್ತಿದ್ದ ನಿರ್ಮಾಣ ಕಾರ್ಯದಲ್ಲಿ ಮಣ್ಣುಗುಡ್ಡೆಯಲ್ಲಿ ಸಿಲುಕಿಕೊಂಡು ದುರಂತ ಸಾವಿಗೀಡಾದರು.
ಇವರ ಕೆಲವು ಕೃತಿಗಳು:
- ಮಂಜಿನ ಗೊಂಬೆ
- ಅದೃಷ್ಟದ ಮಚ್ಚೆ
- ರಾಜದಂಡ
- ಪುನರಾಗಮನ
- ಬಯಕೆ ಈಡೇರಲಿಲ್ಲ
- ಅವನ ಪ್ರೇಯಸಿ
- ರಕ್ತ ಚುಂಬನ
- ಸಾಗರಿ
- ಪ್ರೇಮ ಮಂದಿರ
- ಕಾಲುವೆ ಮನೆ
- ಯಾರವನು?
- ಜುಲೇಖಾ
- ವಿಷಕನ್ಯೆ
- ಮುತ್ತಿನ ಬಳೆಯವಳು
- ಐದು ದಿನಗಳು
- ಮಾಟಗಾತಿ
- ಏಕಾಕಿನಿ
- ಅವಳ ಡೈರಿ
- ನೀಲ ಕಮಲ
- ಆ ಸುಂದರಿಯರು
- ಪತ್ತೆ ಮಾಡಬೇಡಿ