ವಿಕಿಪೀಡಿಯ:ಕಾರ್ಯನೀತಿ
From Wikipedia
ಪ್ರತಿಯೊಂದು ವಿಕಿಪೀಡಿಯಾಗೂ ಒಂದೊಂದು ತನ್ನದೇ ಆದ ಕಾರ್ಯನೀತಿ ಇರುವಂತೆ, ಕನ್ನಡ ವಿಕಿಪೀಡಿಯಾಕ್ಕೂ ಒಂದು ಕಾರ್ಯನೀತಿ (Policy) ಹೊರತರುವುದಕ್ಕೆ ಕೆಲಸಮಾಡುತ್ತಿದ್ದೇವೆ. ಈ ಪುಟ ಇನ್ನೂ ರೂಪುಗೊಳ್ಳುತ್ತಿರುವುದರಿಂದ ದಯಮಾಡಿ ಇಲ್ಲಿರುವಷ್ಟನ್ನೇ ಕಾರ್ಯನೀತಿಯೆಂದು ಭಾವಿಸಿ ಮುಂದುವರೆಯದಿರಿ. ವಿಕಿಪೀಡಿಯಾದಲ್ಲಿ ನಿರ್ವಹಿಸಬೇಕಾದ ಯಾವುದಾದರೂ ಕಾರ್ಯ ಅಥವಾ ಉನ್ನತ ಬದಲಾವಣೆಗಳನ್ನು ಮಾಡುವಾಗ ಸಂಶಯಗಳು ಮೂಡಿ ಬಂದಲ್ಲಿ ದಯಮಾಡಿ ಈ ಅಂಚೆಪೆಟ್ಟಿಗೆಗೆ ನಿಮ್ಮ ಸಂದೇಶ ರವಾನಿಸಿ. ಧನ್ಯವಾದಗಳು
ಸೂಚನೆ: ಸದಸ್ಯರು ಕಾರ್ಯನೀತಿಯನ್ನು ಚರ್ಚೆ ಮಾಡಲು ಅಥವಾ ಕಾರ್ಯನೀತಿಗೆ ಸೇರ್ಪಡೆ, ಬದಲಾವಣೆಗಳನ್ನು ಮಾಡಲು ಮೇಲಿನ ಅಂಚೆ ಪೆಟ್ಟಿಗೆಯನ್ನೇ ಬಳಸಬಹುದು. ಕಾರ್ಯನೀತಿ ರೂಪುಗೊಳ್ಳುತ್ತಿರುವುದರಿಂದ ನಿಮ್ಮೆಲ್ಲರ ಅಭಿಪ್ರಾಯ ಹಾಗೂ ಇದನ್ನು ರೂಪಿಸುವುದರಲ್ಲಿ ನಿಮ್ಮ ಸಹಾಯ ಅತ್ಯಗತ್ಯ.
[ಬದಲಾಯಿಸಿ] ಪ್ರಮುಖ ಕಾರ್ಯನೀತಿಗಳು
[ಬದಲಾಯಿಸಿ] ತಾಂತ್ರಿಕ ಶಬ್ಧ ಪ್ರಯೋಗ
- ತಾಂತ್ರಿಕ ಶಬ್ಧ ಪ್ರಯೋಗ ಮಾಡುವಾಗ ಆಂಗ್ಲ ಪದಗಳನ್ನೇ ಬಳಸತಕ್ಕದ್ದು. ಈ ಕ್ರಮ ಆಂಗ್ಲ ಹಾಗೂ ಕನ್ನಡ ಪದಗಳ ಮಿಶ್ರಣಗಳನ್ನೊಳಗೊಂಡ ತಾಂತ್ರಿಕಪದಗುಚ್ಛಗಳಿಂದಾಗುವ ವಿಡಂಬನೆಯನ್ನು ದೂರ ಮಾಡುವ ಉದ್ದೇಶದಿಂದ ಮುಂದಿಡಲಾಗಿದೆ. ಇನ್ನಷ್ಟು ಮಾಹಿತಿಗೆ ಈ ಉಲ್ಲೇಖವನ್ನು ಓದಿ.
[ಬದಲಾಯಿಸಿ] ಶೀರ್ಷಿಕೆ
- ಶೀರ್ಷಿಕೆಗಳನ್ನು ಆಂಗ್ಲದಲ್ಲಾಗಲಿ, ಹಳೆಯ ಎನ್ಕೋಡಿಂಗ್ ಬಳಸಿ (ಉದಾ: ಬರಹ, ನುಡಿ) ಸೇರಿಸಕೂಡದು.
- ವ್ಯಕ್ತಿಯೊಬ್ಬರ ಹೆಸರನ್ನು ಸೂಚಿಸುವ ಪುಟಕ್ಕೆ ಶೀರ್ಷಿಕೆ ಸಂಯೋಜಿಸುವಾಗ ಈ ಕೆಳಗಿನ ಉದಾಹರಣೆಯಂತೆ ಬಳಸಿ:
ಎಸ್. ಎಲ್. ಭೈರಪ್ಪ
(ಇನಿಷಿಯಲ್ಸ್‍ಗಳ ಮಧ್ಯೆ ಒಂದೊಂದು ಸ್ಪೇಸ್, ಇನಿಷಿಯಲ್ಸ್ ಮತ್ತು ಹೆಸರಿನ ಮಧ್ಯೆಯೂ ಸ್ಪೇಸ್ ಹಾಗು ಇನಿಷಿಯಲ್ಸ್ ಆದನಂತರ ಭಿಂದುಗಳು)