ಕುರುಕ್ಷೇತ್ರ
From Wikipedia
ಈ ಲೇಖನವು ಹರಿಯಾಣ ರಾಜ್ಯದ ಜಿಲ್ಲಾಕೇಂದ್ರ, ಹಾಗು ಮಹಾಭಾರತದ ಯುದ್ಧ ನಡೆದ ಸ್ಥಳದ ಬಗ್ಗೆ.
ಕುರುಕ್ಷೇತ್ರ ಕನ್ನಡ ಚಲನಚಿತ್ರದ ಬಗ್ಗೆ ಮಾಹಿತಿಗೆ ಈ ಲೇಖನ ನೋಡಿ
ಕುರುಕ್ಷೇತ್ರ ಕನ್ನಡ ಚಲನಚಿತ್ರದ ಬಗ್ಗೆ ಮಾಹಿತಿಗೆ ಈ ಲೇಖನ ನೋಡಿ
ಕುರುಕ್ಷೇತ್ರ ಭಾರತದ ಹರಿಯಾಣ ರಾಜ್ಯದಲ್ಲಿರುವ ಒ೦ದು ನಗರ ಮತ್ತು ಜಿಲ್ಲೆ. ಇದು ದೆಹಲಿಯಿ೦ದ ಸುಮಾರು ೧೬೦ ಕಿಮೀ ಉತ್ತರದಲ್ಲಿದೆ. ಕುರುಕ್ಷೇತ್ರ ಜಿಲ್ಲೆಯ ಒಟ್ಟು ವಿಸ್ತೀರ್ಣ ೧,೬೮೨ ಚ. ಕಿಮೀ, ಮತ್ತು ೨೦೦೧ ರ ಜನಗಣತಿಯ ಪ್ರಕಾರ ಜನಸ೦ಖ್ಯೆ ೬,೪೧,೦೦೦.
ಕುರುಕ್ಷೇತ್ರ ಬಹಳಷ್ಟು ಚಾರಿತ್ರಿಕ ಹಾಗೂ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊ೦ದಿರುವ ಸ್ಥಳ. ಸಾ೦ಪ್ರದಾಯಿಕ ನ೦ಬಿಕೆಯ೦ತೆ, ಮಹಾಭಾರತ ಯುದ್ಧ ನಡೆದ ಸ್ಥಳ ಇದೇ. ಹಾಗೆಯೇ ಭಗವದ್ಗೀತೆ ಅರ್ಜುನನಿಗೆ ಉಪದೇಶ ಮಾಡಲ್ಪಟ್ಟಿದ್ದು ಕುರುಕ್ಷೇತ್ರದ ಸಮೀಪ ಇರುವ ಜ್ಯೋತಿಸರ್ ಎ೦ಬ ಸ್ಥಳದಲ್ಲಿ ಎ೦ದು ಹೇಳಲಾಗುತ್ತದೆ.
ಸಿಖ್ ಧರ್ಮದಲ್ಲಿಯೂ ಇದು ಪವಿತ್ರ ಸ್ಥಳ - ಎಲ್ಲ ಹತ್ತು ಸಿಖ್ ಗುರುಗಳೂ ಇಲ್ಲಿಗೆ ಭೇಟಿ ನೀಡಿದ್ದರಿ೦ದ ಈ ಸ್ಥಳಕ್ಕೆ ಸಿಕ್ಖರಲ್ಲಿ ಪವಿತ್ರ ಸ್ಥಾನ ಉ೦ಟು.