ಗೀತಾ ಕುಲಕರ್ಣಿ
From Wikipedia
ಪರಿವಿಡಿ |
[ಬದಲಾಯಿಸಿ] ಜೀವನ
ಗೀತಾ ಕುಲಕರ್ಣಿಯವರು (೧೯೨೮-೧೯೮೬) ಕನ್ನಡದ ಪ್ರಮುಖ ಲೇಖಕಿ. ಸಾಹಿತ್ಯ ಕ್ಷೇತ್ರದಲ್ಲಿ ಗೀತಕ್ಕ ಎಂದೇ ಪರಿಚಿತರಾಗಿದ್ದರು. ಇವರ ಮೊದಲಿನ ಹೆಸರು ಅಹಲ್ಯಾ ಆಳ್ವ. ಮಂಗಳೂರು ಸಮೀಪದ ಪಾವೂರು ಇವರ ಹುಟ್ಟೂರು. ತಂದೆ ಕೆ.ಟಿ.ಆಳ್ವಾ ಪ್ರಖ್ಯಾತ ವೈದ್ಯರಾಗಿದ್ದು, ಬಾಂಬೆ ಸರ್ಜಿಕಲ್ ಕಂಪನಿಯ ಸಂಸ್ಥಾಪಕರು. ಅಹಲ್ಯಾ ಜನಿಸಿದ್ದು ಮುಂಬಯಿಯಲ್ಲಿ ಜನಿಸಿದರು. ನಾಲ್ಕು ವರ್ಷದ ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡ ಅಹಲ್ಯಾ ಅವರ ಬಾಲ್ಯ ಮಂಗಳೂರು, ಪುತ್ತೂರು, ಉಡುಪಿ ಹೀಗೆ ತಿರುಗಾಟದಲ್ಲಿಯೇ ಕಳೆಯಿತು. ಮಂಗಳೂರಿನ ಬೆಸೆಂಟ್ ನ್ಯಾಷನಲ್ ಹೈಸ್ಕೂಲ್ಹಾಗೂ ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ವಿಧ್ಯಾಭ್ಯಾಸ ಪಡೆದರು. ಮುಂದೆ ಪುತ್ತೂರಿನ ಶಿವರಾಮ ಕಾರಂತರ ಬಾಲವನದಲ್ಲಿ ಹಲವಾರು ವರ್ಷವಿದ್ದು ಜೀವನಾನುಭವಗಳಿಸಿಕೊಂಡರು. ಈ ಅವಕಾಶವನ್ನು ತಮಗೆ ದೊರಕಿದ್ದ ಪದವಿ,ಸನ್ಮಾನ ಎಂದೇ ಭಾವಿಸಿದ್ದರು.
ಆದರ್ಶವಾದಿಯಾಗಿದ್ದ ಶಿವರಾಮ ಕಾರಂತರ ಮಾರ್ಗದರ್ಶನದಲ್ಲಿ ನಡೆದ ಗೀತಾ ಅವರು ಪ್ರಗತಿಶೀಲ ಮನೋಭಾವದ ಶೇಷಗಿರಿ ಕುಲಕರ್ಣಿ ಅವರನ್ನು ಅಂತರ್ಜಾತೀಯ ವಿವಾಹವಾಗಿ ಧಾರವಾಡದಲ್ಲಿ ನೆಲಿಸಿದರು. ನಂತರ ಅಹಲ್ಯಾ ಆಳ್ವ ಅವರು ಗೀತಾ ಕುಲರ್ಣಿ ಎಂದು ಪ್ರಸಿದ್ಜರಾದರು.
[ಬದಲಾಯಿಸಿ] ಕೃತಿಗಳು
ಸಾಹಿತ್ಯದ ಎಲ್ಲಾ ಪ್ರಕಾರಗಳಿಗೂ ಗೀತಾ ಆವರ ಕಾಣಿಕೆ ಸಂದಿದೆ. ಗೀತಾ ಅವರ ಮೊದಲ ಕಥೆ ಅಂದು-ಇಂದು ದ.ಬಾ.ಕುಲಕರ್ಣಿ ಯವರ ಅರತಿಸಂಗ್ರಹದಲ್ಲಿ ಪ್ರಕಟವಾಗಿತ್ತು.
[ಬದಲಾಯಿಸಿ] ಕಾದಂಬರಿಗಳು
- ಕಂಬನಿ ಒರೆಸಿದ ಕೈ
- ನೂಲ ಏಣಿ
- ಸ್ವಪ್ನ ಮಂದಿರ
- ದೀಪ ಮಿಂಚಿತು
- ಸಂಬಂಧ
- ಶೋಭನಾ
[ಬದಲಾಯಿಸಿ] ಕಥಾ ಸಂಕಲನಗಳು
- ಸುವರ್ಣಿಯ ಗ್ರೀನ್ ರೂಮ್
- ತೇಲಿ ಹೋದ ಮೋಡ
- ಚಿಪ್ಪಿನೊಳಗಿದ್ದ ಮುತ್ತು
- ಪಾತಾಳ
- ತುಳು ಜಾನಪದ ಕಥೆಗಳು (೨ ಭಾಗಗಳು೦
[ಬದಲಾಯಿಸಿ] ಶಿಶು ಸಾಹಿತ್ಯ
- ಏಳು ಕನ್ನಿಕೆಯರು
- ಹಾರುವ ಕಂಬಳಿ
- ಅರವತ್ತ ನಾಲ್ಕು ವಿದ್ಯೆ
- ನೇಜಿ ಗುಬ್ಬಚ್ಚಿ (ಕಾದಂಬರಿ)
- ಹೂಮನೆ (ಕಾದಂಬರಿ)
[ಬದಲಾಯಿಸಿ] ನಗೆ ಬರಹ
- ಹುರಿಗಾಳು
[ಬದಲಾಯಿಸಿ] ಜೀವನ ಚರಿತ್ರೆ
- ತಿಮ್ಮಪ್ಪ ನಾಯಕ
[ಬದಲಾಯಿಸಿ] ಅನುವಾದ
- ಸರೋಜಿನಿ ನಾಯ್ಡು
- ಮಹರ್ಷಿ ಕರ್ವೆ
[ಬದಲಾಯಿಸಿ] ಪ್ರವಾಸ ಸಾಹಿತ್ಯ
- ಹಚ್ಹ್ಚ ಹಸುರಿನ ಮಲೇಷಿಯಾ
ಕೊನೆಯ ಕೆಲವು ವರ್ಷಗಳಲ್ಲಿ ಮೂತ್ರಪಿಂಡ ಕಾಯಿಲೆಯಿಂದ ನರಳುತ್ತಿದ್ದ ಗೀತಾ ಕುಲಕರ್ಣಿ ೧೯೮೬, ಮೇ,೨೫ರಂದು ನಿಧನರಾದರು.