ಚನ್ನಗಿರಿ
From Wikipedia
ಚನ್ನಗಿರಿ ದಾವಣಗೆರೆ ಜಿಲ್ಲೆಯಲ್ಲಿರುವ ತಾಲೂಕು ಕೇಂದ್ರವಾಗಿರುವ ಒಂದು ಪಟ್ಟಣ. ಮಲೆನಾಡ ಸೆರಗನ್ನು ಬಳಸಿರುವ ಪುಟ್ಟ ಪಟ್ಟಣ ಚನ್ನಗಿರಿ. ಚಿನ್ನದ ಗಿರಿ ಎಂಬ ಹೆಸರು ಕಾಲಾಂತರದಲ್ಲಿ ನಿವಾಸಿಗಳ ಬಾಯಲ್ಲಿ ಚನ್ನಗಿರಿ ಎಂದಾಯಿತೆಂದು ಪ್ರತೀತಿ. ಏಳೆಂಟು ವರ್ಷಗಳ ಹಿಂದೆ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿದ್ದ್ದ ಚನ್ನಗಿರಿ ತಾಲೂಕು ಹೊಸದಾಗಿ ರಚಿಸಿದ ದಾವಣಗೆರೆ ಜಿಲ್ಲೆಯಲ್ಲಿ ಸೇರಿತು. ಆದರೂ ಶಿವಮೊಗ್ಗೆಯ ಜೊತೆ ಭಾವನಾತ್ಮಕ ನಂಟು ಕಳಚಿಲ್ಲ. ಚನ್ನಗಿರಿ ತಾಲೂಕು ಕರ್ನಾಟಕದಲ್ಲೇ ಅತಿ ಹೆಚ್ಚು ಹಳ್ಳಿಗಳನ್ನು ಹೊಂದಿದೆ.
[ಬದಲಾಯಿಸಿ] ಹವಾಗುಣ ಮತ್ತು ಭೂ ಲಕ್ಷ್ಜಣಗಳು
ಚನ್ನಗಿರಿ ಅರೆಮಲೆನಾಡು ಪ್ರದೇಶ. ಶುಷ್ಕ ಹವೆಯ ಈ ಭಾಗದ ಪ್ರಶಸ್ತ ಕೆಂಪುಮಣ್ಣು ಅಡಿಕೆ ತೋಟಕ್ಕೆ ಹೇಳಿಮಾಡಿಸಿದಂತಿದೆ. ಆದ್ದರಿಂದಲೇ ಎತ್ತ ನೋಡಿದರಲ್ಲಿ ಅಡಿಕೆ ಮರಗಳು ಕಾಣಸಿಗುತ್ತವೆ. ನೀರಿನ ಸ್ರೋತ ಮುಖ್ಯವಾಗಿ ಅಂತರ್ಜಲ. ಕೆಲವು ಕಡೆ ಭದ್ರಾ ನದಿ ಕಾಲುವೆ ನೀರುಣಿಸುತ್ತದೆ. ಬಾಳೆ, ವೀಳ್ಯದೆಲೆ ಇನ್ನಿತರ ಮುಖ್ಯ ವಾಣಿಜ್ಯ ಬೆಳೆಗಳು.
[ಬದಲಾಯಿಸಿ] ಇತಿಹಾಸ
ಇಲ್ಲಿ ಕೆಳದಿಯ ರಾಣಿ ಚೆನ್ನಮ್ಮ ಕಟ್ಟಿಸಿರುವ ಕೋಟೆಯಿದೆ.ಈ ಕೋಟೆಯಲ್ಲಿ ರಂಗನಾಥನ ದೇವಾಲಯವಿದೆ ಮತ್ತು ಪ್ರತಿ ವರ್ಷ ಇಲ್ಲಿ ರಂಗನಾಥನ ತೇರು ಉತ್ಸವ ನಡೆಯುತ್ತದೆ. ಪ್ರಶಾಂತ ವಾತಾವರಣ ಇರುವುದರಿಂದ ಹೆಚ್ಚು ಪ್ರಿಯವೆನಿಸುತ್ತದೆ. ಯುಗಾದಿಯ ಚಂದ್ರನನ್ನು ನೋಡಲು ಇಲ್ಲಿ ನೂರಾರು ಜನ ನೆರೆಯುತ್ತಾರೆ,ಆನಂದಿಸುತ್ತಾರೆ.
ಮುದ್ದೇನಹಳ್ಳಿಯ ಆಂಜನೇಯ ದೇವಾಲಯ,ಗದ್ದಿಗೆ ಮಠ ಪ್ರೇಕ್ಷಣೀಯ ಸ್ಥಳಗಳು.