ತಿರುಕ
From Wikipedia
"ತಿರುಕ" ಕಾವ್ಯನಾಮದ ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳು ಒಬ್ಬ ಮಹಾಸಾಧಕರು,ತಪಸ್ವಿಗಳು,ಯೋಗಾಚಾರ್ಯರು,ಮತ್ತು ಮಹಾಸಂಘಟಕರು, ಮೇಲಾಗಿ ಆಯುರ್ವೇದದಲ್ಲಿ ಪರಿಣಿತರು. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನಲ್ಲಿರುವ ಈ ಕಗ್ಗ ಹಳ್ಳಿಗೆ- ಮಲ್ಲಾಡಿಹಳ್ಳಿಗೆ, ಅವರು ಬಂದದ್ದು, ಅಲ್ಲಿನ ಜನರ ಸುಯೋಗವೇ ಸರಿ. ತಮ್ಮ ಗುರುಗಳಾದ ಶಿವಾನಂದರ ಪ್ರೇರಣೆಯಂತೆ, ಕರ್ನಾಟಕದ ಮೂಲೆ ಮೂಲೆಗಳಿಗೂ ಹೋಗಿ, ದಲಿತರ, ಬಡವರ, ಅಸಹಾಯರನ್ನು ಉದ್ಧರಿಸುವ ಕೆಲಸವನ್ನು ಒಂದು 'ಪರಮಾತ್ಮನ ಪೂಜೆ' ಎಂದು ಸ್ವೀಕರಿಸಿ, ಸುಮಾರು ೪೫-೫೦ ಹಳ್ಳಿಗಳಿಗೆ ಭೇಟಿಕೊಟ್ಟು, ಅಲ್ಲಿ ಯೋಗ ಶಿಬಿರಗಳನ್ನು, ಆರೋಗ್ಯಕೇಂದ್ರಗಳನ್ನು, ಊರಿನ ನೈರ್ಮಲ್ಯೀಕರಣವನ್ನು ಕೈಗೆ ತೆಗೆದುಕೊಂಡು ಗ್ರಾಮದ ಜನರಿಗೆ ತಿಳುವಳಿಕೆಯನ್ನು ಕೊಡುವುದರ ಮೂಲಕ, ಅಲ್ಲಿನ ಸರ್ವತೊಮುಖ ಪ್ರಗತಿಗೆ ಕಾರಣರಾದರು. ೧೯೪೩ ರಲ್ಲಿ ಮಲ್ಲಾಡಿಹಳ್ಳಿಯ ಪ್ರಜೆಗಳ ಬೇಡಿಕೆಯನ್ನು ಪರಿಗಣಿಸಿ ಅಲ್ಲಿ ಬಂದವರು ತಮ್ಮ ಜೀವಿತದ ಉಳಿದ ೫೦ ವರ್ಷಕ್ಕೂ ಹೆಚ್ಚು ಸಮಯವನ್ನು ಅಲ್ಲಿಯ ಏಳಿಗೆಗೆ ಮುಡುಪಾಗಿಟ್ಟರು. ಮೂಲತಃ ಅವರ ತಂದೆಯವರು, ಕೇರಳದ ಅನಂತ ಪದ್ಮನಾಭ ನಂಬೂದರಿಯವರು, ತಾಯಿ, ಪದ್ಮಾಂಬಾಳ್; ತಂದೆಯವರು ಅಲ್ಲಿನ ಸುತ್ತುಮುತ್ತಲಿನ ಜನಕ್ಕೆ ತಮ್ಮ ಜೋತಿಷ್ಯ ವಿದ್ಯೆಯಿಂದ ಸಲಹೆ ಸಮಾಧಾನ ಹೇಳುತ್ತಿದ್ದರು. ಮಹಾಪಂಡಿತರು. ಪದ್ಮಾಂಬಳ್,ಅವರ ತಾಯಿ ಮಹಾಸಾದ್ವ್ಹಿ.ಅವರಿಗೆ ಜನಿಸಿದ ಮಗುವಿನ ಹೆಸರು ಕುಮಾರ ಸ್ವಾಮಿ ಎಂದು. ಆದರೆ ಹುಟ್ಟಿದಾಗಲೇ ಅವರು 'ಬಾಲರೋಗ'ಕ್ಕೆ ತುತ್ತಾಗಿ ಸುಮಾರು ೧೫ ವರ್ಷ, ಯಾವ ಭಾವನೆಯನ್ನೂ ಅನುಭವಿಸದ ಒಂದು ಮಾಂಸದ ಮುದ್ದೆಯಂತಿದ್ದ ಆ ಪ್ರಜ್ಞಾಶೂನ್ಯ ಮಗುವನ್ನು ಮಾತೆ, ಮೂಕಾಂಬಿಕ ದೇವಿಯ ದೇವಸ್ಥಾನಕ್ಕೆ ಕರೆದೊಯ್ಯುತ್ತಾರೆ. ಬಾಲಕನ ಈ ಸ್ಥಿತಿಯನ್ನು ನೋಡಲಾರದೆ ತಾಯಿ, 'ಬಾರಕೂರು' ಎಂಬ ಹಳ್ಳಿಯಲ್ಲಿ (ದ.ಕರ್ನಾಟಕ)ಮರಣಹೊಂದುತ್ತಾರೆ. ನಂಬೂದರಿಯವರು ಆ ಬಾಲಕನನ್ನು ತಮ್ಮ ಗೆಳೆಯರಾದ ಶ್ರಿ ನರಸಿಂಹಯ್ಯ, ಮತ್ತು ಅವರ ಪತ್ನಿಯವರಾದ ಶ್ರೀಮತಿ.ಪುಥಲೀಬಾಯಿಯವರಿಗೆ ಒಪ್ಪಿಸಿ, ತಾವು ತಪಸ್ಸಿಗಾಗಿ ಹಿಮಾಲಯಕ್ಕೆ ಹೋಗುತ್ತಾರೆ. ಪುಥಲೀಬಾಯಿಯವರು ಕುಮಾರ ಸ್ವಾಮಿಯ ಪಾಲನೆಪೋಷಣೆಯಲ್ಲಿ ತಮ್ಮ ಸರ್ವಸ್ವವನ್ನೂ ತ್ಯಾಗಮಾಡಿ ತಮ್ಮ ಮಾತೃಪ್ರೇಮದ ಅಮೃತದಿಂದ ಅವನಲ್ಲಿ ಗಮನಾರ್ಹ ಬದಲಾವಣೆಯನ್ನು ತರುತ್ತಾರೆ.ಅದೇ ಸಮಯಕ್ಕೆ ಮಂತ್ರಾಲಯದ ಅಂದಿನ ಮಠಾಧಿಪತಿಗಳು ಈ ಬಾಲಕನಿಗೆ ಆಶೀರ್ವದಿಸಿ ಅನುಗ್ರಹಿಸಿದಮೇಲೆ, ದಿನ ಕ್ರಮೇಣ ಅದ್ಭುತ ಬದಲಾವಣೆಯಾಗಿ ಹುಡುಗನು ಎಲ್ಲರನ್ನೂ ನೋಡಿ ನಗುವುದು, ಗಮನಿಸುವುದು, ಪ್ರತಿಕ್ರಯಿಸುವುದು, ಇವನ್ನು ಮಾಡಿ, ಕೆಲವೇ ತಿಂಗಳುಗಳಲ್ಲಿ ಎಲ್ಲರಂತಾಗಿದ್ದನ್ನು ನೋಡಿ, ಈ ಸಾಕುತಂದೆತಾಯಿಗಳು ಸಂತೋಷ ಪಡುತ್ತಾರೆ. ಮುಂದೆ ಆ ಬಾಲಕನ ಹೆಸರನ್ನು ರಾಘವೇಂದ್ರ,ಎಂದು ಯತಿಗಳು ಕರೆದರು.
ತನ್ನಂತರ ಇವರು ಯೋಗಾಸನ, ಪ್ರಾಣಾಯಾಮಗಳಲ್ಲಿ ಸಿದ್ಧಿಯನ್ನು ಪಡೆದು ಹಲವರಿಗೆ ತಮ್ಮ ಮಲ್ಲಾಡಿಹಳ್ಳಿ ಆಶ್ರಮದಿಂದ ಈ ವಿದ್ಯೆಯನ್ನು ಬೋಧಿಸಿದವರು.
ಇವರು ಸುಮಾರು ೬೦ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕೆಲವು ಇಂತಿವೆ:
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕಾದಂಬರಿ
- ತ್ಯಾಗಜೀವಿ
- ಕೊನೆಯ ಗುಟುಕು
[ಬದಲಾಯಿಸಿ] ಇತರ
- ಷಟ್ಕರ್ಮ ವಿಧಿ
- ಹಣ್ಣು ಕಾಯಿ
- ಅಂತರ್ವಾಣಿ
- ದೇಹಸ್ವಾಸ್ಥ್ಯಕ್ಕಾಗಿ ಯೋಗಾಸನಗಳು
- ಸ್ವಯಂವೈದ್ಯಾ ವೈದ್ಯಶಾಸ್ತ್ರ