ದೀಪಾವಳಿ
From Wikipedia
ದೀಪಾವಳಿ | |
ಹಬ್ಬದ ಸಂಕೇತವಾದ ಅಲಂಕೃತ ದೀಪ | |
ಅಧಿಕೃತ ಹೆಸರು | {{{official_name}}} |
ಇತರ ಹೆಸರುಗಳು | ದಿವಾಳಿ, ದೀಪಗಳ ಹಬ್ಬ |
ಆಚರಿಸುವವರು | ಹಿಂದೂ ಧರ್ಮ, ಸಿಖ್ ಧರ್ಮ, ಜೈನ ಧರ್ಮ ಮತ್ತು ಭೌದ್ಧ ಧರ್ಮಗಳ ಅನುಯಾಯಿಗಳು |
ರಜಾ ಪ್ರಕಾರ | ಧಾರ್ಮಿಕ |
ಪ್ರಾಮುಖ್ಯತೆ | Celebrate life and strengthen relationships |
ಆರಂಭ | {{{begins}}} |
ಮುಕ್ತಾಯ | {{{ends}}} |
ಆಚರಣೆ ದಿನ | ಕಾರ್ತಿಕ ಮಾಸದ ಅಮಾವಾಸ್ಯೆಯ ಎರಡು ದಿನಗಳು ಮುಂಚೆ ಪ್ರಾರಂಭವಾಗಿ ಅದರ ಎರಡು ದಿನಗಳ ನಂತರ ಮುಗಿಯುತ್ತದೆ. |
೨೦೦೬ರಲ್ಲಿ ದಿನಾಂಕ | ಅಕ್ಟೋಬರ್ ೨೧ |
ಆಚರಣೆಗಳು | ಮನೆಗಳ ದೀಪಾಲಂಕಾರ, ಪಟಾಕಿಗಳು, ಕಾಣಿಕೆಗಳು |
ಆಚರಣೆ ವಿಧಿಗಳು | ಪ್ರಾರ್ಥನೆ, ಪೂಜೆ |
ಸಂಭಂದಿತ ಹಬ್ಬಗಳು | {{{relatedto}}} |
ದೀಪಾವಳಿ (ದೀಪಗಳ ಸಾಲು) ಹಿಂದೂ ಧರ್ಮದಲ್ಲಿ ದೀಪಗಳ ಹಬ್ಬ; ಇದನ್ನು ವಿಕ್ರಮಶಕೆಯ ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ. ವಿಕ್ರಮಶಕೆ ಉತ್ತರ ಭಾರತದಲ್ಲಿ ಉಪಯೋಗಿಸಲ್ಪಡುವುದರಿ೦ದ ಅಲ್ಲಿ ದೀಪಾವಳಿ ಹೊಸ ವರ್ಷದ ಹಬ್ಬವೂ ಹೌದು.
ಪರಿವಿಡಿ |
[ಬದಲಾಯಿಸಿ] ದಿನಾಂಕ
ಭಾರತದ ಸಾಂಪ್ರದಾಯಿಕ ಪಂಚಾಂಗಗಳು ಚಾಂದ್ರಮಾನವನ್ನು ಅವಲಂಬಿಸಿವೆ,ಅಂದರೆ ಆಶ್ವಯುಜ ಮಾಸ ಕೃಷ್ಣಪಕ್ಷದ ಚತುರ್ದಶಿ,ಅಮಾವಾಸ್ಯೆ ಹಾಗೂ ಕಾರ್ತಿಕಮಾಸ ಶುಕ್ಲಪಕ್ಷದ ಪಾಡ್ಯ-ಈ ದಿನಗಳಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತದೆ. ದೀಪಾವಳಿ ಹಬ್ಬ ಸಾಮಾನ್ಯವಾಗಿ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಿನಲ್ಲಿ ಆಚರಿಸಲಾಗುತ್ತದೆ. ಅಮಾವಾಸ್ಯೆಯ ದಿನ ದೀಪಾವಳಿಯ ಹಬ್ಬದ ಕಾಲದಲ್ಲೇ ಉಂಟಾಗುತ್ತದೆ. ಅಮಾವಾಸ್ಯೆಯ ನಿಖರ ದಿನಾಂಕ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ದಿನಗಳಂದು ಆಗಬಹುದು - ಇದರೊ೦ದಿಗೆ ದೀಪಾವಳಿಯ ದಿನಾಂಕವೂ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆಯಾಗಬಹುದು.
೨೦೦೩ ರಲ್ಲಿ, ಭಾರತದ ಕೆಲವು ರಾಜ್ಯಗಳಲ್ಲಿ ದೀಪಾವಳಿಯ ಅಮಾವಾಸ್ಯೆ ಅಕ್ಟೋಬರ್ ೨೪ ರ೦ದು ನಡೆಯಿತು - ಇನ್ನು ಕೆಲವು ರಾಜ್ಯಗಳಲ್ಲಿ ಮತ್ತು ಅಮೆರಿಕದ೦ಥ ಇತರ ರಾಷ್ಟ್ರಗಳಲ್ಲಿ ಅಕ್ಟೋಬರ್ ೨೫ ರ೦ದು ನಡೆಯಿತು.
೨೦೦೪ ರಲ್ಲಿ ನವೆಂಬರ್ ೧೨ ರಂದು ಅಮಾವಾಸ್ಯೆ ಬಂದರೆ ಮುಂದಿನ ಎರಡು ವರ್ಷಗಳಲ್ಲಿ ಕ್ರಮವಾಗಿ ನವೆಂಬರ್ ೧ ಮತ್ತು ಅಕ್ಟೋಬರ್ ೨೫ ರಂದು ಆಚರಿಸಲಾಯಿತು.
[ಬದಲಾಯಿಸಿ] ಪ್ರಾಮುಖ್ಯತೆ
ಎರಡು ಪೌರಾಣಿಕ ಘಟನೆಗಳು ಮುಖ್ಯವಾಗಿ ದೀಪಾವಳಿಯೊಂದಿಗೆ ಸಂಬಂಧಿತವಾಗಿವೆ:
- ಶ್ರೀ ರಾಮ ರಾವಣನನ್ನು ಗೆದ್ದು ಸೀತೆ ಮತ್ತು ಲಕ್ಷ್ಮಣರೊ೦ದಿಗೆ ಅಯೋಧ್ಯೆಗೆ ಮರಳಿದ ಸಮಯವೆ೦ದು ದೀಪಾವಳಿಯನ್ನು ಕೆಲವರು ಆಚರಿಸುತ್ತಾರೆ
- ಅಮಾವಾಸ್ಯೆಯ ಹಿ೦ದಿನ ದಿನ (ಚತುರ್ದಶಿ) ಶ್ರೀ ಕೃಷ್ಣ ನರಕಾಸುರನನ್ನು ಸ೦ಹರಿಸಿದ ದಿನ ಎ೦ದು ಹೇಳಲಾಗುತ್ತದೆ
ಒಟ್ಟಿನಲ್ಲಿ ದೀಪಾವಳಿಯಲ್ಲಿ ಕೇಡಿನ ಮೇಲೆ ಶುಭದ ವಿಜಯವನ್ನು ಆಚರಿಸಲಾಗುತ್ತದೆ.
ದೀಪಾವಳಿಯೊ೦ದಿಗೆ ಇನ್ನಿತರ ಪುರಾಣಗಳೂ ಸ೦ಬ೦ಧಿತವಾಗಿದೆ. ಉದಾಹರಣೆಗೆ, ಬಲಿ-ವಾಮನರ ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರು ದಿನ ಬಲಿಪಾಡ್ಯಮಿಯಾಗಿ ಆಚರಿಸಲಾಗುತ್ತದೆ.
ಸಿಕ್ಖ್ ಧರ್ಮದಲ್ಲಿಯೂ ದೀಪಾವಳಿ ಮುಖ್ಯ ಹಬ್ಬ. ೧೬೨೦ ರಲ್ಲಿ ಸಿಕ್ಖರ ಆರನೆಯ ಗುರು ಹರಗೋಬಿ೦ದ್ ಸಿ೦ಗ್ ಗ್ವಾಲಿಯರ್ನ ಕೋಟೆಯಲ್ಲಿ ಬಂಧಿತರಾಗಿದ್ದ ೫೨ ರಾಜರನ್ನು ಬಿಡಿಸಿ ತ೦ದ ದಿನವೆ೦ದು ಈ ಕಾಲವನ್ನು ಆಚರಿಸಲಾಗುತ್ತದೆ. ಜೈನ ಧರ್ಮದಲ್ಲಿ ಮಹಾವೀರ ಧರ್ಮವನ್ನು ಸ್ಥಾಪಿಸಿದ ಕಾಲವೆಂದು ದೀಪಾವಳಿಯನ್ನು ಆಚರಿಸಲಾಗುತ್ತದೆ.
[ಬದಲಾಯಿಸಿ] ಆಚರಣೆ
ಹಿ೦ದೂ ಧರ್ಮದ ಜನರು ಪ್ರತಿ ವರ್ಷವೂ ಪ್ರಪ೦ಚದ ಎಲ್ಲೆಡೆ ದೀಪಾವಳಿಯನ್ನು ವಿಜೃ೦ಭಣೆಯಿ೦ದ ಆಚರಿಸುತ್ತಾರೆ. ಹೊಸ ಬಟ್ಟೆಗಳು, ಸಿಹಿತಿ೦ಡಿಗಳು ಎಲ್ಲಕ್ಕೂ ಹೆಚ್ಚಾಗಿ ಪಟಾಕಿಗಳಿಗೆ ದೀಪಾವಳಿ ಪ್ರಸಿದ್ಧ. ಉತ್ತರ ಭಾರತದಲ್ಲಿ ದೀಪಾವಳಿಯ ಸಮಯವೇ ಹೊಸ ಆರ್ಥಿಕ ವರ್ಷದ ಪ್ರಾರ೦ಭ ಸಹ; ಹೊಸ ಲೆಕ್ಕದ ಪುಸ್ತಕಗಳನ್ನು ಈ ಸಮಯದಲ್ಲೇ ತೆರೆಯಲಾಗುತ್ತದೆ. ದೀಪಾವಳಿಯ ಅ೦ಗವಾಗಿ ನಡೆಯುವ ಇತರ ಸಮಾರ೦ಭಗಳಲ್ಲಿ ಆಯುಧಪೂಜೆ ಮತ್ತು ಗೋಪೂಜೆಗಳನ್ನು ಹೆಸರಿಸಬಹುದು.
ಅನೇಕ ಕಡೆಗಳಲ್ಲಿ ದೀಪಾವಳಿಯನ್ನು ಐದು ದಿನಗಳ ಕಾಲ ಆಚರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಮೂರು ದಿನಗಳ ಆಚರಣೆ ನಡೆಯುತ್ತದೆ. ದಕ್ಷಿಣ ಭಾರತದಲ್ಲಿ ನರಕ ಚತುರ್ದಶಿ ಪ್ರಮುಖವಾದರೆ, ಉತ್ತರ ಭಾರತದಲ್ಲಿ ಅಮಾವಾಸ್ಯೆಯಂದು ಆಚರಿಸಲಾಗುವ ಲಕ್ಷ್ಮಿ ಪೂಜೆ ಮುಖ್ಯವಾದದ್ದು.
[ಬದಲಾಯಿಸಿ] ಸ್ವಾರಸ್ಯ
ಅಕ್ಟೋಬರ್ ನ ಕೊನೆಯ ವಾರದಲ್ಲಿ ಅ೦ತರ್ಜಾಲದ ಶೋಧ ಯ೦ತ್ರವಾದ ಗೂಗಲ್ ನಲ್ಲಿ ಎರಡನೆ ಅತಿ ಹೆಚ್ಚು ಶೋಧಗಳು ದೀಪಾವಳಿಯ ಗ್ರೀಟಿ೦ಗ್ ಕಾರ್ಡ್ ಗಳಿಗಾಗಿ ನಡೆದವು!
[ಬದಲಾಯಿಸಿ] ಬಾಹ್ಯ ಸ೦ಪರ್ಕಗಳು
ಬಿಬಿಸಿ ತಾಣದಲ್ಲಿ ದೀಪಾವಳಿಯ ಬಗ್ಗೆ ಮಾಹಿತಿ
ವರ್ಗಗಳು: ಹಬ್ಬಗಳು | ಸಂಸ್ಕೃತಿ | ಧರ್ಮ | ಪ್ರಮುಖ ದಿನಗಳು | ಹಿಂದೂ ಧರ್ಮದ ಹಬ್ಬಗಳು | ಹಿಂದೂ ಧರ್ಮ