ದ್ವಾದಶ ಜ್ಯೋತಿರ್ಲಿಂಗಗಳು
From Wikipedia
ದ್ವಾದಶ ಜ್ಯೋತಿರ್ಲಿಂಗಗಳು
ಸೌರಾಷ್ಟ್ರೇ ಸೋಮನಾಥಂ ಚ ಶ್ರೀಶೈಲೇ ಮಲ್ಲಿಕಾರ್ಜುನಮ್ | ಉಜ್ಜಯಿನ್ಯಾ ಮಹಾಕಾಲಂ ಓಂಕಾರಮಮಲೇಶ್ವಮ್ ||
ಪರಳ್ಯಾಂ ವೈದ್ಯನಾಥಂ ಚ ಡಾಕಿನ್ಯಾಂ ಭೀಮಶಂಕರಮ್| ಸೇತುಬಂಧೇತು ರಾಮೇಶಂ ನಾಗೇಶಂ ದಾರುಕಾವನೇ ||
ವಾರಣಸ್ಯಾಂತು ವಿಶ್ವೇಶಂ ತ್ರ್ಯಂಬಕಂ ಗೌತಮೀತಟೇ | ಹಿಮಾಲಯೇತು ಕೇದಾರಂ ಗೃಷ್ಣೇಶಂ ಚ ಶಿವಾಲಯೇ ||
ಏತಾನಿ ಜ್ಯೋತಿರ್ಲಿಂಗಾನಿ ಸಾಯಂ ಪ್ರಾತಃ ಪಠೇನ್ನರಃ | ಸಪ್ತಜನ್ಮ ಕೃತಂ ಪಾಪಂ ಸ್ಮರಣೇನ ವಿನಶ್ಯತಿ ||
ಹೀಗೆ ದ್ವಾದಶ ಜ್ಯೋತಿರ್ಲಿಂಗಗಳ ಮಹಿಮೆಯನ್ನು ಸಾರುವ ಸ್ತುತಿಯೊಂದಿದೆ.
ದ್ವಾದಶ ಜ್ಯೋತಿರ್ಲಿಂಗಗಳು ಇವು :
- ಸೋಮನಾಥ (ಸೌರಾಷ್ಟ್ರ, ಗುಜರಾತ್ )
- ಮಲ್ಲಿಕಾರ್ಜುನ (ಶ್ರೀಶೈಲ, ಆಂಧ್ರಪ್ರದೇಶ)
- ಮಹಾಕಾಳೇಶ್ವರ (ಉಜ್ಜಯಿನಿ, ಮಧ್ಯಪ್ರದೇಶ)
- ಓಂಕಾರೇಶ್ವರ (ಮಾಂಧಾತಗಿರಿ, ಮಧ್ಯಪ್ರದೇಶ)
- ವೈದ್ಯನಾಥೇಶ್ವರ (ಪರಳಿ, ಮಹಾರಾಷ್ಟ್ರ)
- ಭೀಮಶಂಕರ (ಪುಣೆಯ ಬಳಿ, ಮಹಾರಾಷ್ಟ್ರ)
- ರಾಮನಾಥೇಶ್ವರ (ರಾಮೇಶ್ವರ, ತಮಿಳುನಾಡು)
- ನಾಗೇಶ್ವರ (ದ್ವಾರಕೆಯ ಬಳಿ, ಗುಜರಾತ್)
- ವಿಶ್ವೇಶ್ವರ (ಕಾಶಿ, ಉತ್ತರಪ್ರದೇಶ)
- ತ್ರ್ಯಂಬಕೇಶ್ವರ (ನಾಸಿಕ್, ಮಹಾರಾಷ್ಟ್ರ)
- ಕೇದಾರೇಶ್ವರ (ಕೇದಾರ, ಉತ್ತರಾಂಚಲ)
- ಗೃಷ್ಣೇಶ್ವರ (ಎಲ್ಲೋರ, ಮಹಾರಾಷ್ಟ್ರ)
ಇನ್ನೊಂದು ಪಂಥದ ಪ್ರಕಾರ:
- ಬಿಹಾರದ ದೇವಘರ್ ನಲ್ಲಿರುವ ಬೈದ್ಯನಾಥೇಶ್ವರ ಹಾಗೂ
- ಮಹಾರಾಷ್ಟ್ರದ ಔಂಧಾನಾಗನಾಥ ಕ್ಶೇತ್ರದಲ್ಲಿರುವ ನಾಗೇಶ್ವರ ನಿಜವಾದ ಜ್ಯೋತಿರ್ಲಿಂಗಗಳೆಂದು ಪರಿಗಣಿಸಲ್ಪಡುತ್ತವೆ.