ನರಕ
From Wikipedia
ಹಿಂದೂ ಧರ್ಮದ ಪ್ರಕಾರ ಕೆಟ್ಟ ಕೆಲಸಗಳನ್ನು, ಕೊಲೆ,ಸುಲಿಗೆ,ಕಳ್ಳತನ ಮುಂತಾದ ಪಾಪಗಳನ್ನು ಮಾಡಿದವರು ತಮ್ಮ ಪುನರ್ಜನ್ಮವನ್ನು ಎತ್ತುವ ಮುನ್ನ ತಾತ್ಕಾಲಿಕವಾಗಿ ನರಕ ಲೋಕದಲ್ಲಿದ್ದು ಶಿಕ್ಷೆ ಅನುಭವಿಸುತ್ತಾರೆ. ಪುಣ್ಯ ಮಾಡಿದವರಿಗೆ ಸ್ವರ್ಗ ಇರುವಂತೆಯೇ, ಪಾಪಿಗಳಿಗೆ ನರಕ. ನರಕಕ್ಕೆ ಯಜಮಾನ ಯಮ. ಚಿತ್ರಗುಪ್ತರು ಇವನ ಅನುಯಾಯಿಗಳು.
ತಪ್ಪು ಮಾಡಿದ ಜೀವ ಇಲ್ಲಿ ಹಲವಾರು ರೀತಿಯಿಂದ ಶಿಕ್ಷೆ ಅನುಭವಿಸುತ್ತದೆ. ಈ ಶಿಕ್ಷೆಗಳ ವಿವರವನ್ನು ಹಿಂದೂ ಪುರಾಣಗಳಲ್ಲೊಂದಾದ ಗರುಡ ಪುರಾಣ ದಲ್ಲಿ ವಿವರವಾಗಿ ವಿವರಿಸಲಾಗಿದೆ.ಮನುಷ್ಯರು ಸಾಯುವ ಮೊದಲು , ಮುಂದೆ ತಮಗೆ ಕಾದಿರುವ ನರಕದ ಭಯದಿಂದಲಾದರೂ, ಕೆಟ್ಟ ಕೆಲಸಗಳನ್ನು ಬಿಟ್ಟು ಸತ್ಕರ್ಮಗಳಲ್ಲಿ ತೊಡಗಲಿ ಎಂಬುದು ಈ ಪುರಾಣಗಳ ಉದ್ದೇಶವಾಗಿದೆ.