Static Wikipedia February 2008 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu

Web Analytics
Cookie Policy Terms and Conditions ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ - Wikipedia

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ

From Wikipedia

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಭಾರತದ ಉಪಖಂಡದ ಮೇಲೆ ಬ್ರಿಟಿಷ್ ಆಕ್ರಮಣದ ವಿರುದ್ಧ ನಡೆದ ಶಸ್ತ್ರಸಜ್ಜಿತ ಬಂಡಾಯ. ಇದನ್ನು ವಿವಿಧ ರೀತಿಯಾಗಿ ಸಿಪಾಯಿ ದಂಗೆ ಮತ್ತು ೧೮೫೭ರ ಭಾರತೀಯ ದಂಗೆ ಎಂದೂ ಕರೆಯಲಾಗುತ್ತದೆ. ಈ ಸಂಗ್ರಾಮದ ಪರಿಣಾಮವಾಗಿ ಭಾರತದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆ ಕೊನೆಗೊಂಡು ಬ್ರಿಟಿಷ್ ಸರ್ಕಾರದ ನೇರ ಆಳ್ವಿಕೆ ಆರಂಭವಾಯಿತು.

ಪರಿವಿಡಿ

[ಬದಲಾಯಿಸಿ] ಕಾರಣಗಳು

ಈ ಬಂಡಾಯ ಆರಂಭವಾಗಲು ಹಲವಾರು ಕಾರಣಗಳನ್ನು ಹುಡುಕಬಹುದು.

  • ಭಾರತೀಯರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವ ವದಂತಿ
  • ಲಾರ್ಡ್ ಡಾಲ್‌ಹೌಸಿಯ "ರದ್ದತಿಯ ಸಿದ್ಧಾಂತ" (ಡಾಕ್ಟ್ರಿನ್ ಆಫ್ ಲ್ಯಾಪ್ಸ್) ದ ಪ್ರಕಾರ ಉತ್ತರಾಧಿಕಾರಿಗಳಿಲ್ಲದ ಕಾರಣ ಝಾನ್ಸಿ, ಅವಧ, ಸತಾರಾ, ನಾಗ್ಪುರ, ಮತ್ತು ಸಂಭಲ್ಪುರ ರಾಜ್ಯಗಳನ್ನು ಬ್ರಿಟಿಷ್ ಆಳ್ವಿಕೆಗೆ ವಶಪಡಿಸಿಕೊಳ್ಳಲಾಯಿತು. ನಾಗ್ಪುರ ರಾಜಮನೆತನದ ಒಡವೆಗಳನ್ನು ಸಾರ್ವಜನಿಕವಾಗಿ ಹರಾಜು ಹಾಕಲಾಯಿತು.
  • ಹಿಂದೂ ಮತ್ತು ಮುಸ್ಲಿಂ ಧರ್ಮದ ಅನೇಕ ನಂಬಿಕೆ-ಆಚಾರಗಳನ್ನು (ಸತಿ, ಬಾಲ್ಯ ವಿವಾಹ) ಬ್ರಿಟಿಷರು ’ಅನಾಗರಿಕ’ ಎಂಬ ಕಾರಣವೊಡ್ಡಿ ನಿಷೇಧಿಸಿದರು. ಇದು ಅನೇಕರ ಆಕ್ರೋಶಕ್ಕೆ ಕಾರಣವಾಯಿತು.
  • ಬ್ರಿಟಿಷರ ನ್ಯಾಯಪದ್ಧತಿ ಮೂಲಭೂತವಾಗಿ ಭಾರತೀಯರ ವಿರುದ್ಧವಾಗಿಯೇ ಇತ್ತು.
  • ಭಾರತೀಯರ ಮೇಲೆ ವಿಧಿಸಲಾಗಿದ್ದ ಕಟ್ಟಲಾಗದ ತೆರಿಗೆ. ಇದರ ಕಾರಣವಾಗಿ ರೈತರು ಆಹಾರ ಧಾನ್ಯಗಳನ್ನು ಬಿಟ್ಟು ವಾಣಿಜ್ಯ ಬೆಳೆಗಳನ್ನು ಬೆಳೆಯುವಂತಾಗಿ, ಆಹಾರ ಧಾನ್ಯಗಳ ಬೆಲೆಯೇರಿಕೆ ಉಂಟಾಯಿತು.
  • ಈಸ್ಟ್ ಇಂಡಿಯಾ ಕಂಪನಿಯು ಲೆಕ್ಕವಿಲ್ಲದಷ್ಟು ಚಿನ್ನ, ಬೆಳ್ಳಿ, ಒಡವೆಗಳು, ರೇಷ್ಮೆ, ಮತ್ತು ಹತ್ತಿಯನ್ನು ಬ್ರಿಟನ್ನಿಗೆ ಪ್ರತಿ ವರ್ಷವೂ ರಫ್ತು ಮಾಡುತ್ತಿತ್ತು. ಇದರ ಮೇಲೆ ವಿಧಿಸಲಾಗುತ್ತಿದ್ದ ತೆರಿಗೆಯಿಂದ ದುಡಿದ ಐಶ್ವರ್ಯವೇ ಕೈಗಾರಿಕಾ ಕ್ರಾಂತಿಯಲ್ಲಿ ಬ್ರಿಟನ್ ಮುಂಚೂಣಿಯಲ್ಲಿರಲು ಕಾರಣವಾಗಿದ್ದಿತು.
  • ಬ್ರಿಟಿಷರ ಉತ್ಪನ್ನಗಳನ್ನು ಅತಿ ಕಡಿಮೆ ಬೆಲೆಯಲ್ಲಿ ಭಾರತದಲ್ಲಿ ಮಾರಾಟ ಮಾಡಿ ಪ್ರಾದೇಶಿಕ ಕುಶಲಕರ್ಮಿಗಳು ನಿರುದ್ಯೋಗಿಗಳಾಗಬೇಕಾಯಿತು.
  • ಬ್ರಿಟಿಷ್ ಸೈನ್ಯದಲ್ಲಿದ್ದ ಭಾರತೀಯ ಸಿಪಾಯಿಗಳಿಗೆ ಹೊಸ "ಎನ್‌ಫೀಲ್ಡ್" ಬಂದೂಕುಗಳನ್ನು ಉಪಯೋಗಿಸುವಂತೆ ಸೂಚಿಸಲಾಯಿತು. ಇದರಲ್ಲಿ ಬಳಸಲಾಗುತ್ತಿದ್ದ ಕಾಡತೂಸುಗಳನ್ನು (ಹಿಂದೂಗಳಿಗೆ ಪವಿತ್ರವಾದ) ಹಸು ಮತ್ತು (ಮುಸ್ಲಿಮರಿಗೆ ನಿಷಿದ್ಧವಾದ) ಹಂದಿಯ ಕೊಬ್ಬಿನಿಂದ ತಯಾರು ಮಾಡಲಾಗಿದೆಯೆಂಬ ವದಂತಿ ಹರಡಿತು.

[ಬದಲಾಯಿಸಿ] ಸಂಗ್ರಾಮದ ಆರಂಭ

೨೬ ಫೆಬ್ರವರಿ ೧೮೫೭ರಂದು ೧೯ನೇ ಬಂಗಾಳ ಸ್ಥಳೀಯ ಕಾಲಾಳು ಸೈನಿಕರು ಹೊಸ ಕಾಡತೂಸುಗಳ ಬಗ್ಗೆ ತಿಳಿದು ಅವುಗಳನ್ನು ಉಪಯೋಗಿಸಲು ನಿರಾಕರಿಸಿದರು. ಸೈನ್ಯದ ಕರ್ನಲ್ ಇದನ್ನು ತಿಳಿದು ಆವೇಶಗೊಂಡರೂ, ಕೊನೆಗೆ ಸೈನಿಕರ ಒತ್ತಾಯಕ್ಕೆ ಮಣಿದು ಮರು ದಿನದ ತಾಲೀಮನ್ನು ರದ್ದು ಮಾಡಬೇಕಾಯಿತು.

[ಬದಲಾಯಿಸಿ] ಮಂಗಲ ಪಾಂಡೆ

ಕಲ್ಕತ್ತದ ಸಮೀಪ ಬಾರಕ್‌ಪುರದಲ್ಲಿ ೨೯ ಮಾರ್ಚ್ ೧೮೫೭ರಂದು ೩೪ನೇ ಬಂಗಾಳ ಸ್ಥಳೀಯ ಕಾಲಾಳು ಸೈನ್ಯದ ಮಂಗಲ ಪಾಂಡೆ ಎಂಬ ಸಿಪಾಯಿಯು ದಳದ ನಾಯಕ ಲೆ. ಬಾಗ್ ನನ್ನು ಗುಂಡಿಕ್ಕಿದ ನಂತರ ಖಡ್ಗದಿಂದ ಇರಿದನು. ಇದನ್ನರಿತ ಜನರಲ್, ಜಮಾದಾರ ಈಶ್ವರೀ ಪ್ರಸಾದರಿಗೆ ಮಂಗಲ ಪಾಂಡೆಯನ್ನು ಬಂಧಿಸಲು ಸೂಚಿಸಿದನು. ಆದರೆ ಜಮಾದಾರನು ನಿರಾಕರಿಸಿದನು. ಇದರ ಬಳಿಕ ಸೈನ್ಯದ ಎಲ್ಲ ಸಿಪಾಯಿಗಳೂ ಜನರಲ್ ಆಜ್ಞೆಯನ್ನು ಪಾಲಿಸಲು ನಿರಾಕರಿಸಿದರು (ಶೇಖ್ ಪಲ್ಟು ಎಂಬ ಸಿಪಾಯಿಯನ್ನು ಹೊರತುಪಡಿಸಿ.). ತನ್ನ ಪದಾತಿಗಳನ್ನು ದಂಗೆಯೇಳಲು ಹುರಿದುಂಬಿಸಲು ವಿಫಲನಾದ ಕಾರಣ ಮಂಗಲ ಪಾಂಡೆ ಬಂದೂಕನ್ನು ತನ್ನ ಕುತ್ತಿಗೆಗೆ ತೋರಿಸಿ ಕಾಲಿನಿಂದ ಅದರ ಕುದುರೆಯನ್ನು ಎಳೆದನು. ಆದರೆ ಇದರ ನಂತರ ಬದುಕಿದ ಅವನನ್ನು ಕೋರ್ಟ್ ಮಾರ್ಷಲ್ ಮಾಡಿ ಏಪ್ರಿಲ್ ೭ರಂದು ಗಲ್ಲಿಗೇರಿಸಲಾಯಿತು. ನಂತರ ಜಮಾದಾರ ಈಶ್ವರೀ ಪ್ರಸಾದನನ್ನೂ ಗಲ್ಲಿಗೇರಿಸಲಾಯಿತು. ಇಡೀ ಕಾಲಾಳು ಸೈನ್ಯವನ್ನು ಬರಖಾಸ್ತುಗೊಳಿಸಿ, ಅವರ ಸಮವಸ್ತ್ರವನ್ನು ಕಿತ್ತು ಹಾಕಲಾಯಿತು. ಶೇಖ್ ಪಲ್ಟುನನ್ನು ಜಮಾದಾರನನ್ನಾಗಿ ಬಡ್ತಿ ನೀಡಲಾಯಿತು. ಇದರಿಂದ ಅವಮಾನಿತರಾದ ಮಾಜಿ ಸಿಪಾಯಿಗಳು ಸೂಕ್ತ ರೀತಿಯಾಗಿ ಈ ಸೇಡನ್ನು ತೀರಿಸಲು ಕಾಯುತ್ತಿದ್ದರು.

[ಬದಲಾಯಿಸಿ] ಮೀರಟ್‌ನಲ್ಲಿ ೩ನೇ ಲಘು ಅಶ್ವ ದಳ

ಮೇ ೯ರಂದು ೩ನೇ ಬಂಗಾಳ ಲಘು ಅಶ್ವ ದಳದ ೮೫ ಸೈನಿಕರು ಹೊಸ ಕಾಡತೂಸುಗಳನ್ನು ಬಳಸಕು ನಿರಾಕರಿಸಿದ ಕಾರಣ ಅವರನ್ನು ಬಂಧಿಸಿ, ಸಾರ್ವಜನಿಕವಾಗಿ ಸಮವಸ್ತ್ರವನ್ನು ಕಿತ್ತು ಹಾಕಿ, ೧೦ ವರ್ಷ ಕಾರಾಗೃಹ ವಾಸ ಮತ್ತು ಕಠಿಣ ಸಜೆಯನ್ನು ವಿಧಿಸಲಾಯಿತು. ಬಂಧಿತ ಸೈನಿಕರನ್ನು ಕಾರಾಗೃಹಕ್ಕೆ ಕೊಂಡೊಯ್ಯುತ್ತಿರುವಾಗ ಅವರನ್ನು ವಿವಿಧ ರೀತಿಯಾಗಿ ಅವಮಾನಿಸಿ ಹೀಯಾಳಿಸಲಾಯಿತು. ಸೈನಿಕರನ್ನು ಹೀಗೆ ನಡೆಸಿಕೊಂಡ ರೀತಿಯೇ ಇತರ ಸಿಪಾಯಿಗಳು ದಂಗೆಯೇಳಲು ಕಾರಣವಾಯಿತು.

ಮೀರಟ್‌ನಲ್ಲಿ ತಾಲೀಮು ನಡೆಸಿದ ೧೧ನೇ ಮತ್ತು ೨೦ನೇ ಕಾಲಾಳುಗಳು ಆಜ್ಞೆಯನ್ನು ಉಲ್ಲಂಘಿಸಿ ಐರೋಪ್ಯ ದಂಡು ಪ್ರದೇಶದ ಮೇಲೆ ದಾಳಿ ಮಾಡಿ ಕೈಗೆ ಸಿಕ್ಕ್ಸ್ ಎಲ್ಲ ಐರೋಪ್ಯರನ್ನು ಕೊಂದು ಹಾಕಿ ಅವರ ಮನೆಗಳನ್ನು ಸುಟ್ಟರು. ಆದರೆ ಕೆಲವು ಮೂಲಗಳ ಪ್ರಕಾರ ಸಿಪಾಯಿಗಳು ತಮ್ಮ ಹಿರಿಯ ಸೈನ್ಯಾಧಿಕಾರಿಗಳನ್ನು ಸುರಕ್ಷಿತ ತಾಣಗಳಿಗೆ ಸೇರಿಸಿ ದಂಗೆಯನ್ನು ಮುಂದುವರೆಸಿದರು.

[ಬದಲಾಯಿಸಿ] ಪರ ಮತ್ತು ವಿರೋಧ

ಸಂಗ್ರಾಮದ ಕಾಲದಲ್ಲಿ ಭಾರತದ ರಾಜ್ಯಗಳು
ಸಂಗ್ರಾಮದ ಕಾಲದಲ್ಲಿ ಭಾರತದ ರಾಜ್ಯಗಳು

ಬಂಡಾಯವು ಸೇನೆಯಿಂದ ಹೊರಗೆ ಚೆಲ್ಲಿತಾದರೂ, ಭಾರತದ ನಾಯಕರು ಅಪೇಕ್ಷಿಸಿದಷ್ಟು ಯಶಸ್ವಿಯಾಗಲಿಲ್ಲ. ಭಾರತದ ಪರ ಒಗ್ಗಟ್ಟಿನ ಕೊರತೆಯಿತ್ತು. ಮುಖ್ಯವಾಗಿ ಸಂಗ್ರಾಮವು ಉತ್ತರ ಮತ್ತು ಕೇಂದ್ರ ಪ್ರದೇಶಗಳಾದ ದೆಹಲಿ, ಲಖನೌ, ಕಾನ್ಪುರ, ಝಾನ್ಸಿ, ಬರೇಲಿಗಳಲ್ಲಿ ಕೇಂದ್ರೀಕೃತವಾಗಿತ್ತು.

ಬಹಳಷ್ಟು ಭಾರತೀಯರು ಬ್ರಿಟಿಷರ ಪರವಾಗಿ ನಿಂತರು. ಇದರ ಕಾರಣ ಮುಘಲರ ಮೇಲಿನ ಅಪನಂಬಿಕೆ ಮತ್ತು ಭಾರತೀಯತೆಯ ಭಾವನೆಯ ಕೊರತೆ. ಪಂಜಾಬಿನ ಮತ್ತು ವಾಯವ್ಯ ಗಡಿನಾಡಿನ ಸಿಖ್ಖರು ಮತ್ತು ಪಠಾಣರು ಬ್ರಿಟಿಷರು ದೆಹಲಿಯನ್ನು ಮರು ಕಬಳಿಸಲು ಸಹಾಯ ಮಾಡಿದರು. ನೇಪಾಳವು ಸ್ವತಂತ್ರ ರಾಜ್ಯವಾಗಿದ್ದರೂ ಕೂಡ ನೇಪಾಳಿ ಗೂರ್ಖಾಗಳು ಬ್ರಿಟಿಷರಿಗೆ ಸಹಾಯ ಮಾಡಿದರು.

ಸಣ್ಣ-ಪುಟ್ಟ ಗಲಭೆಗಳನ್ನು ಹೊರತುಪಡಿಸಿದರೆ ದಕ್ಷಿಣ ಭಾರತದ ಬಹಳಷ್ಟು ಪ್ರಾಂತ್ಯಗಳು ಸಂಗ್ರಾಮದಲ್ಲಿ ಪಾತ್ರ ವಹಿಸಲಿಲ್ಲ. ಇದಕ್ಕೆ ಕಾರಣ ಈ ಪ್ರಾಂತ್ಯಗಳು ನಿಜಾಮರ ಅಥವಾ ಮೈಸೂರು ರಾಜ್ಯದ ಆಳ್ವಿಕೆಗೆ ಒಳಪಟ್ಟಿದ್ದರು. ಇದರಿಂದ ಈ ಭಾಗದ ಜನರು ನೇರವಾಗಿ ಬ್ರಿಟಿಷ್ ಆಳ್ವಿಕೆಯಲ್ಲಿರಲಿಲ್ಲ.

[ಬದಲಾಯಿಸಿ] ಆರಂಭಿಕ ಹಂತಗಳು

ಆರಂಭದಲ್ಲಿ ಭಾರತದ ಸಿಪಾಯಿಗಳು ಕಂಪನಿಯ ಸೈನ್ಯವನ್ನು ಸೋಲಿಸಿ ಹರಿಯಾಣ, ಬಿಹಾರ, ಮತ್ತು ಕೇಂದ್ರೀಯ ಪ್ರಾಂತ್ಯಗಳ ಹಲವು ಪ್ರಮುಖ ಸ್ಥಳಗಳನ್ನು ವಶಪಡಿಸಿಕೊಂಡರು. ಆದರೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ ಬ್ರಿಟಿಷರು ದೀರ್ಘ ಹೋರಾಟ ನಡೆಸಿದರು. ದಂಗೆಯೆದ್ದ ಸಿಪಾಯಿಗಳಿಗೆ ಕೇಂದ್ರೀಕೃತ ನಾಯಕತ್ವದ ಕೊರತೆಯಿತ್ತು.

[ಬದಲಾಯಿಸಿ] ದೆಹಲಿ

ಬ್ರಿಟಿಷರು ಹಂತ-ಹಂತವಾಗಿ ಪ್ರದೇಶಗಳನ್ನು ಮರುವಶಪಡಿಸಿಕೊಂಡರು. ಯುರೋಪಿನಿಂದ ಚೀನಕ್ಕೆ ಹೋಗುತ್ತಿದ್ದ ಹಲವು ತುಕಡಿಗಳನ್ನು ಭಾರತಕ್ಕೆ ಕಳುಹಿಸಲಾಯಿತು. ದಂಗೆಯೆದ್ದ ಸಿಪಾಯಿಗಳನ್ನು ಎರಡು ತಿಂಗಳು ಸತತವಾಗಿ ದೆಹಲಿಯನ್ನು ದಾಳಿ ಮಾಡಲಾಯಿತು. ಆಗ ಸಿಖ್ಖರ ಮತ್ತು ಪಠಾಣರ ಬೆಂಬಲದಿಂದ ಅಂತಿಮವಾಗಿ ದೆಹಲಿಯನ್ನು ಮರುವಶಪಡಿಸಿಕೊಳ್ಳಲಾಯಿತು.

ಇದರ ನಂತರ ನಿಧಾನವಾಗಿ ಸತತ ದಾಳಿಗಳ ಪರಿಣಾಮವಾಗಿ ಕಾನ್ಪುರ ಮತ್ತು ಲಖನೌ ಪ್ರಾಂತ್ಯಗಳನ್ನು ಮರುವಶಪಡಿಸಿಕೊಳ್ಳಲಾಯಿತು.

Static Wikipedia 2008 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -

Static Wikipedia 2007 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -

Static Wikipedia 2006 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu