Wikipedia:ವಿಶೇಷ ಬರಹ/ಸಂಚಿಕೆ - ೩೦
From Wikipedia
ಜಾರ್ಜ್ ವಾಷಿಂಗ್ಟನ್ (ಫೆಬ್ರುವರಿ ೨೨, ೧೭೩೨ — ಡಿಸೆಂಬರ್ ೧೪, ೧೭೯೯) ಅಮೇರಿಕದ ಕ್ರಾಂತಿಕಾರಿ ಯುದ್ಧದಲ್ಲಿ ಬ್ರಿಟನ್ನಿನ ವಿರುದ್ಧ ವಿಜಯಿಯಾದ ಖಂಡದ ಸೈನ್ಯದ ಸೇನಾಧಿಪತಿಯಾಗಿದ್ದು, ಯುದ್ಧದ ಪರಿಣಾಮವಾಗಿ ಸ್ಥಾಪಿತವಾದ ಅಮೇರಿಕ ಸಂಯುಕ್ತ ಸಂಸ್ಥಾನದ ಪ್ರಥಮ ರಾಷ್ಟ್ರಪತಿಯಾಗಿ ಚುನಾಯಿತರಾದವರು. ಅಮೇರಿಕ ದೇಶದ ಸ್ಥಾಪನೆಯಲ್ಲಿ ಇವರ ಪ್ರಮುಖ ಪಾತ್ರವಿದ್ದಿದ್ದರಿಂದ ಇವರನ್ನು ಅಮೇರಿಕದ ರಾಷ್ಟ್ರಪಿತ ಎಂದು ಕರೆಯಲಾಗುತ್ತದೆ.
ವರ್ಜೀನಿಯ ರಾಜ್ಯದಲ್ಲಿ ಹುಟ್ಟಿದ ಇವರು ಫ್ರೆಂಚ್ ಮತ್ತು ಇಂಡಿಯನ್ ಯುದ್ಧದಲ್ಲಿ ಬ್ರಿಟಿಷ್ ಸೈನ್ಯದಲ್ಲಿ ಮೊದಲು ತಮ್ಮ ಶೌರ್ಯವನ್ನು ಪ್ರದರ್ಶಿಸಿದರು. ಈ ಅನುಭವ ಮುಂದಿನ ಕ್ರಾಂತಿಕಾರಿ ಯುದ್ಧದಲ್ಲಿ ಉಪಯುಕ್ತವಾಯಿತು. ಯುದ್ಧದ ನಂತರ ದೇಶದ ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ನಂತರದ ಎರಡು ಅವಧಿಗಳಲ್ಲೂ ಅವಿರೋಧವಾಗಿ ರಾಷ್ಟ್ರಪತಿಯಾಗಿ ಆಯ್ಕೆಯಾದರು. ಇವರು ಎರಡು ಅವಧಿಗಳ ನಂತರ ಸ್ವತಃ ನಿವೃತ್ತರಾಗಿದ್ದರಿಂದ ಅಮೇರಿಕದ ರಾಷ್ಟ್ರಪತಿಗಳು ಗರಿಷ್ಟ ಎರಡು ಅವಧಿಗಳಷ್ಟು ಮಾತ್ರ ಅಧಿಕಾರ ವಹಿಸಬಹುದೆಂಬ ವಾಡಿಕೆ ಪ್ರಾರಂಭವಾಯಿತು.