ವೀಣಾ ಶಾಂತೇಶ್ವರ
From Wikipedia
ವೀಣಾ ಶಾಂತೇಶ್ವರ ಅವರು ೧೯೪೫ ಫೆಬ್ರುವರಿ ೨೨ ರಂದು ಧಾರವಾಡದಲ್ಲಿ ಹುಟ್ಟಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಮ್.ಏ. ಪದವಿ ಪಡೆದ ಬಳಿಕ ಹೈದರಾಬಾದನಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಇಂಗ್ಲಿಷನಿಂದ ' ಡಿಪ್ಲೋಮಾ ಇನ್ ಇಂಗ್ಲಿಷ ಲ್ಯಾಂಗ್ವೇಜ ' ಪಡೆದರು. ಇವರು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ ಅಧ್ಯಾಪಕಿಯಾಗಿದ್ದಾರೆ.
ವೀಣಾ ಅವರ ಅತಿಥಿ ಎಂಬ ಕಥೆಯು ಪುಟ್ಟಣ್ಣ ಕಣಗಾಲ್ ನಿರ್ದೇಶನದ ಕಥಾಸಂಗಮ ಚಿತ್ರದಲ್ಲಿ ಬಳಕೆಯಾಗಿದೆ.
ಇವರು ೪ ಕಥಾಸಂಕಲನಗಳನ್ನು ಬರೆದಿದ್ದಾರೆ.ಇವರ ಮೊದಲ ಕಥಾಸಂಕಲನ ಮುಳ್ಳುಗಳು. ಇವರ ಕವಲು ಕಥಾಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಕಿದ್ದು, ಹಸಿವು ಕಥಾಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ ಲಭಿಸಿದೆ. ಇವರ ಮತ್ತೊಂದು ಕಥಾಸಂಕಲನ: ಕೊನೆಯ ದಾರಿ. ಕಥೆಗಳನ್ನಲ್ಲದೆ ಗಂಡಸರು ಮೊದಲಾದ ೩ ಕಾದಂಬರಿಗಳನ್ನೂ ಸಹ ವೀಣಾ ಶಾಂತೇಶ್ವರ ಬರೆದಿದ್ದಾರೆ."ಅವಳ ಸ್ವಾತಂತ್ರ್ಯ" ಎನ್ನುವ ಇವರ ಕತೆಯು ನ್ಯೂಯಾರ್ಕಿನ ಫೆಮಿನಿಸ್ಟ್ ಪ್ರೆಸ್ ಸಂಪಾದಿಸಿದ ,'ವಿಶ್ವದ ಅತ್ಯುತ್ತಮ ಮಹಿಳಾ ಬರಹಗಾರರು' ಶ್ರೇಣಿಯಲ್ಲಿ ಪ್ರಕಟವಾಗಿದೆ.
೧೯೮೮ರಲ್ಲಿ ಇವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ದೊರೆಯಿತು.