ಶ್ರೀಕೃಷ್ಣ ಆಲನಹಳ್ಳಿ
From Wikipedia
ಶ್ರೀಕೃಷ್ಣ ಆಲನಹಳ್ಳಿ ಇವರು ೧೯೪೭ ಏಪ್ರಿಲ್ ೩ರಂದು ಮೈಸೂರು ಜಿಲ್ಲೆಯ ಆಲನಹಳ್ಳಿಯಲ್ಲಿ ಜನಿಸಿದರು. ಇವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು.
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕವನ ಸಂಕಲನ
- ಮಣ್ಣಿನ ಹಾಡು
- ಕಾಡುಗಿಡದ ಹಾಡು ಪಾಡು
- ಡೋಗ್ರಾ ಪಹಾರಿ ಪ್ರೇಮಗೀತೆಗಳು
[ಬದಲಾಯಿಸಿ] ಕಥಾಸಂಕಲನ
- ತಪ್ತ
- ಫೀನಿಕ್ಸ
[ಬದಲಾಯಿಸಿ] ಕಾದಂಬರಿ
- ಭುಜಂಗಯ್ಯನ ದಶಾವತಾರ
- ಕಾಡು
- ಪರಸಂಗದ ಗೆಂಡೆ ತಿಮ್ಮ
[ಬದಲಾಯಿಸಿ] ಸಂಪಾದನೆ
- ಗ್ರಾಮಾಯಣ ಸಮೀಕ್ಷೆ
- ಅವಲೋಕನ
- ಅಂತಃಕರಣ
[ಬದಲಾಯಿಸಿ] ಚಿತ್ರೀಕರಣ
- ಶ್ರೀಕೃಷ್ಣ ಆಲನಹಳ್ಳಿಯವರ ‘ಕಾಡು’ ಕಾದಂಬರಿ ಚಲನಚಿತ್ರವಾಗಿದೆ. ಈ ಚಿತ್ರದಲ್ಲಿ ಹಿಂದಿ ಚಲನಚಿತ್ರಗಳ ಖ್ಯಾತ ನಟ ಅಮರೀಶ ಪುರಿ ಮುಖ್ಯ ಪಾತ್ರದಲ್ಲಿ ಅಭಿಮಯಿಸಿದ್ದಾರೆ. ಗಿರೀಶ ಕಾರ್ನಾಡ ಚಲನಚಿತ್ರದ ನಿರ್ದೇಶಕರು.
- ‘ಪರಸಂಗದ ಗೆಂಡೆ ತಿಮ್ಮ’ ಈ ಚಲನಚಿತ್ರದಲ್ಲಿ ಕನ್ನಡಚಿತ್ರರಂಗದ ಚರಿತ್ರನಟ ಲೋಕೇಶ ಮುಖ್ಯ ಪಾತ್ರದಲ್ಲಿದ್ದಾರೆ. ‘ರಾ.ಶಿ.ಸಹೋದರರು’ ಈ ಚಿತ್ರದ ನಿರ್ಮಾಪಕರು.
- ಭುಜಂಗಯ್ಯನ ದಶಾವತಾರ ಕಾದಂಬರಿಯು ಚಲನಚಿತ್ರವಾಗಿದೆ. ಗಿರಿಜಾ ಲೋಕೇಶ್ ಈ ಚಿತ್ರದ ನಿರ್ಮಾಪಕರಾಗಿದ್ದರೆ, ಲೋಕೇಶ ಚಿತ್ರವನ್ನು ನಿರ್ದೇಶಿಸಿ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದಾರೆ.
[ಬದಲಾಯಿಸಿ] ಪುರಸ್ಕಾರ
- ‘ಕಾಡು’ ಕಾದಂಬರಿಗೆ ರಾಜ್ಯ ಪ್ರಶಸ್ತಿ ದೊರೆತಿದೆ
- ‘ಮಣ್ಣಿನ ಹಾಡು’ ಕವಿತಾಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆತಿದೆ.