ಹರಿಕಥಾಮೃತಸಾರ
From Wikipedia
ಹರಿಕಥಾಮೃತಸಾರ ಜಗನ್ನಾಥದಾಸರು ರಚಿಸಿರುವ ಪ್ರಸಿಧ್ಧ ಕೃತಿ. ಇದು ೩೨ ಸಂಧಿಗಳಿಂದ ಕೂಡಿದೆ. ಭಾಮಿನೀ ಷಟ್ಪದಿ ರೂಪದಲ್ಲಿ, ಛಂಧೋಬಧ್ಧವಾಗಿ ರಚಿತವಾಗಿದೆ. ಮಂಗಳಾಚರಣ ಸಂಧಿಯಿಂದ ಪ್ರಾರಂಭವಾಗಿ ಕಕ್ಷಾ ತಾರತಮ್ಯ ಸಂಧಿಗೆ ಮುಕ್ತಾಯವಾಗುತ್ತದೆ.
ಹರಿಕಥಾಮೃತಸಾರ ಕುರಿತು ಪ್ರಚಲಿತದಲ್ಲಿರುವ ಒಂದು ಕಥೆ - ಜಗನ್ನಾಥದಾಸರು ಈ ಕೃತಿ ರಚನೆಯಲ್ಲಿ ತೊಡಗಿದಾಗ, ೨೮ಸಂಧಿಗಳು ಸುಗಮವಾಗಿ ಸಾಗಿ, ನಂತರ ಮುಂದುವರಿಯದೆ ನಿಂತು ಹೋಯಿತಂತೆ. ಆಗ ಅವರ ಗುರು ಗೋಪಾಲದಾಸರಲ್ಲಿವಿಚಾರಿಸಲಾಗಿ, ಗಣಪತಿ ಸ್ತೋತ್ರವನ್ನು ಕೈಬಿಟ್ಟಿರುವುದರಿಂದ ಹೀಗಾಗಿದೆ ಎಂದು ತಿಳಿಯಿತಂತೆ. ಈ ಕಾರಣದಿಂದಾಗಿ ೨೮ನೆಯ ಸಂಧಿಯನ್ನು ವಿಘ್ನೇಶ್ವರ ಸಂಧಿಯೆಂದು ಕರೆದು ಗಣಪತಿಗೆ ಅರ್ಪಿಸಿದ ನಂತರ ಗ್ರಂಥ ಪೂರ್ಣಗೊಂಡಿತಂತೆ.