ಹರ್ಮನ್ ಮೊಗ್ಲಿಂಗ
From Wikipedia
ಹರ್ಮನ್ ಮೊಗ್ಲಿಂಗ ಇವರು ಕ್ರಿ.ಶ. ೧೮೧೧ರ ಸುಮಾರಿಗೆ ಬ್ರಿಟನ್‍ದಲ್ಲಿ ಜನಿಸಿದರು. ಕ್ರಿಶ್ಚಿಯನ್ ಧರ್ಮೋಪದೇಶಕರಾಗಿ ಭಾರತಕ್ಕೆ ಬಂದರು. ಕ್ರಿ.ಶ. ೧೮೪೩ರಲ್ಲಿ ಮಂಗಳೂರಿನಿಂದ ‘ಮಂಗಳೂರು ಸಮಾಚಾರ’ ಎನ್ನುವ ಪತ್ರಿಕೆಯನ್ನು ಹಾಗು ಕ್ರಿ.ಶ.೧೮೪೪ರಲ್ಲಿ ಬಳ್ಳಾರಿಯಿಂದ ‘ಕನ್ನಡ ಸುವಾರ್ತಿಕ’ ಎನ್ನುವ ಪತ್ರಿಕೆಗಳನ್ನು ಹೊರಡಿಸಿದರು. ಇವರಿಗೆ ಕನ್ನಡದ ಮೊದಲ ಪತ್ರಕರ್ತ ಎನ್ನಬಹುದು. ಈ ಪತ್ರಿಕೆಗಳ ಮುದ್ರಣಕ್ಕೆ ಕಲ್ಲಚ್ಚಿನ ಉಪಕರಣಗಳನ್ನು ಉಪಯೋಗಿಸಲಾಗಿತ್ತು.
ಜೈಮಿನಿ ಭಾರತ, ಬಸವ ಪುರಾಣ, ದಾಸರ ಪದಗಳು,ತೊರವೆ ರಾಮಾಯಣ ಹಾಗು ಕನ್ನಡ ಗಾದೆಗಳನ್ನು ಪ್ರಥಮತಃ ಸಂಪಾದಿಸಿ ಪ್ರಕಟಿಸಿದ ಕೀರ್ತಿ ಇವರದು.
ಇದಲ್ಲದೆ ‘ಜಾತಿ ವಿಚಾರಣೆ’, ‘ದೇವ ವಿಚಾರಣೆ’ ಹಾಗು ‘ಬೈಬಲ್ಲಿನ ಕೆಲ ಕತೆಗಳು’ ಈ ಕೃತಿಗಳನ್ನು ರಚಿಸಿದ್ದಾರೆ.
ಹರ್ಮನ್ ಮೋಗ್ಲಿಂಗ ೧೮೮೧ರಲ್ಲಿ ನಿಧನರಾದರು.