ಹೃಷಿಕೇಶ್ ಮುಖರ್ಜಿ
From Wikipedia
ಹೃಷಿಕೇಶ್ ಮುಖರ್ಜಿ - ಹಿಂದಿ ಚಿತ್ರರಂಗದ ಪ್ರಮುಖ ನಿರ್ದೇಶರರಲೊಬ್ಬರು.
ಪರಿವಿಡಿ |
[ಬದಲಾಯಿಸಿ] ಚಿತ್ರ ಬದುಕು
ರಾಜೇಶ್ ಖನ್ನ ಮತ್ತು ಅಮಿತಾಭ್ ಬಚ್ಚನ್ ನಟಿಸಿದ್ದ ' ಆನಂದ್', ಅಮಿತಾಬ್, ಸಂಜೀವ್ ಕುಮಾರ್ ಮತ್ತು ಜಯಾ ಬಾದುರಿ ನಟಿಸಿದ ಅಭಿಮಾನ್ , ಅಮಿತಾಭ್, ಜಯಾ ಬಾದುರಿ ಮತ್ತು ಧರ್ಮೇಂದ್ರ ನಟಿಸಿದ `ಚುಪ್ಕೆ ಚುಪ್ಕೆ' ಹಾಗೂ ರೇಖಾ ನಟಿಸಿದ್ದ ಖೂಬ್ ಸೂರತ್ ಸೇರಿದಂತೆ ಅನೇಕ ಯಶಸ್ವಿ ಚಲನಚಿತ್ರಗಳನ್ನು ನಿರ್ದೇಶಿದ್ದಾರೆ.
ಹೃಷಿದಾ ಎಂದೇ ಚಿತ್ರರಂಗದಲ್ಲಿ ಖ್ಯಾತರಾಗಿದ್ದ ಹೃಷಿಕೇಶ್ ಮುಖರ್ಜಿ ಹುಟ್ಟಿದ್ದು ೧೯೨೨ರ ಸೆಪ್ಟೆಂಬರ್ ೩೦ರಂದು, ಕೊಲ್ಕತ್ತಾದಲ್ಲಿ. ತಮ್ಮ ಗುರು ಬಿಮಲ್ ರಾಯ್ ಅವರ ಸಹಾಯಕರಾಗುವ ಮೂಲಕ ೧೯೫೧ರಲ್ಲಿ ಚಿತ್ರಲೋಕಕ್ಕೆ ಅಡಿಯಿರಿಸಿದರು. ೧೯೫೭ರಲ್ಲಿ ನಿರ್ದೇಶಿಸಿದ ಮುಸಾಫಿರ್' ಹೃಷಿಕೇಶ್ ಅವರ ಮೊದಲ ಚಿತ್ರ.
೧೯೬೦ರಲ್ಲಿ ನಿರ್ಮಾಣಗೊಂಡ 'ಅನುರಾಧ' ಚಿತ್ರದೊಂದಿಗೆ ಮುಖರ್ಜಿ ಯಶಸ್ಸಿನ ದಾರಿ ಹಿಡಿದರು. ಕರ್ತವ್ಯವನ್ನೇ ದೇವರು ಎಂದು ಭಾವಿಸುವ ವೈದ್ಯನೊನ್ನ ತನ್ನ ಕುಟುಂಬವನ್ನೇ ಕಡೆಗಣಿಸುವ ಕತೆ 'ಅನುರಾಧ'ದಲ್ಲಿತ್ತು. ಈ ಚಿತ್ರಕ್ಕೆ ರಾಷ್ಟ್ರಪತಿಗಳ ಚಿನ್ನದ ಪದಕವೂ ಲಭಿಸಿತು.
ಆನಂತರ ಮುಖರ್ಜಿ 'ಅನುಪಮ' 'ಆಶೀರ್ವಾದ್' ಹಾಗೂ 'ಸತ್ಯಕಾಮ್' ಮುಂತಾದ ಹಲವಾರು ಉತ್ತಮ ಚಿತ್ರಗಳನ್ನು ನಿರ್ದೇಶಿಸಿದರು. ಆಕ್ಷನ್ ಹೀರೋ ಆಗಿದ್ದ ಧರ್ಮೇಂದ್ರರಿಗೆ ಸಂಪೂರ್ಣ ವಿಭಿನ್ನ ಪಾತ್ರಗಳು ಸಿಕ್ಕಿದ್ದು ಮುಖರ್ಜಿ ಅವರ ಚಿತ್ರಗಳಿಂದಲೇ. ಇವತ್ತು ಮಿಂಚುತ್ತಿರುವ ಅಮಿತಾಭ್ ಬಚ್ಚನ್ ಪ್ರಸಿದ್ಧಿ ಪಡೆದಿದ್ದು ಹೃಷಿಕೇಶ್ ಅವರ 'ಆನಂದ್' ಚಿತ್ರದ ಮೂಲಕ. ಜಯಾ ಬಚ್ಚನ್ ಬೆಳಕಿಗೆ ಬಂದದ್ದು 'ಗುಡ್ಡಿ' ಚಿತ್ರದ ಮೂಲಕ.
ಚುಪ್ಕೆ ಚುಪ್ಕೆ, ಬಾವರ್ಚಿ, ಗುಡ್ಡಿ ಹಾಗೂ ರಜನಿಗಂಧ್ ಮೊದಲಾದ ಚಿತ್ರಗಳು ಭಾರತೀಯ ಚಿತ್ರರಂಗದ ಮೈಲಿಗಲ್ಲುಗಳೆಂದು ಕರೆಸಿಕೊಳ್ಳಲ್ಪಟ್ಟಿವೆ.
[ಬದಲಾಯಿಸಿ] ಪ್ರಶಸ್ತಿಗಳು
ತಮ್ಮ ಉತ್ತಮ ನಿರ್ದೇಶನದಿಂದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಮತ್ತು ಪದ್ಮವಿಭೂಷಣ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.
[ಬದಲಾಯಿಸಿ] ನಿಧನ
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಹೃಷಿಕೇಶ ಮುಖರ್ಜಿಯವರು ಆಗಸ್ಟ್ ೨೭, ೨೦೦೬ರ ಭಾನುವಾರ ಮುಂಬಯಿಯಲ್ಲಿ ನಿಧನರಾದರು.
[ಬದಲಾಯಿಸಿ] ಹೃಷಿಕೇಶ್ ಮುಖರ್ಜಿ ನಿರ್ದೇಶನದ ಚಿತ್ರಗಳು
- ಝೂಟ್ ಬೋಲೆ ಕೌವಾ ಕಾಟೆ (೧೯೯೮)
- ತಲಾಶ್ (೧೯೯೨)
- ನಮಕಿನ್ (೧೯೮೮)
- ಲಾಠಿ (೧೯೮೮)
- ಹಮ್ ಹಿಂದೂಸ್ತಾನಿ (೧೯೮೬)
- ಝೂಟಿ (೧೯೮೫)
- ಅಚ್ಚಾ ಬುರಾ (೧೯೮೩)
- ರಂಗ್ ಬಿರಂಗಿ (೧೯೮೩)
- ಕಿಸೀ ಸೆ ನ ಕೆಹನಾ (೧೯೮೩)
- ಸದ್ಮಾ (೧೯೮೩)
- ಬೇಮಿಸಾಲ್ (೧೯೮೨)
- ನರಂ ಗರಂ (೧೯೮೧)
- ಖೂಬ್ ಸೂರತ್ (೧೯೮೦)
- ಜುರ್ಮಾನ (೧೯೭೯)
- ಗೋಲ್‍ಮಾಲ್ (೧೯೭೯)