ಸದಸ್ಯರ ಚರ್ಚೆಪುಟ:Arunhegde
From Wikipedia
ವಿಕಿಪೀಡಿಯಕ್ಕೆ ಸ್ವಾಗತ, ಅರುಣ್.
ನೀವು ಸುದ್ದಿ ಟೆಂಪ್ಲೇಟಿಗೆ ಆಪ್ತಮಿತ್ರದ ಸುದ್ದಿಯನ್ನು ಸೇರಿಸಿರುವುದನ್ನು ನೋಡಿದೆ. ಸ್ವಂತ ಲೇಖನವಿರುವ ಸುದ್ದಿಯನ್ನು ಸೇರಿಸುವುದು ವಿಕಿಪೀಡಿಯಾದಲ್ಲಿ ವಾಡಿಕೆ. ಅಲ್ಲದೇ ಲೇಖನಗಳವರೆಗೆ ಓದುಗರು ತಲುಪಲಿ ಎಂದೇ ಸುದ್ದಿ ಕಾಲಂ ಇರುವುದು. ವಿಶ್ವಕೋಶವು ನಿರಂತರ ಸುದ್ದಿಯ ಕೇಂದ್ರವಲ್ಲವಾದ್ದರಿಂದ ಕೇವಲ ಪ್ರಮುಖವಾದ ಸುದ್ದಿಯನ್ನು ಸೇರಿಸಲಾಗುತ್ತದೆ. ಅದೂ ಕೂಡ ಅದರ ಬಗ್ಗೆ ಒಂದು ಲೇಖನವಿದ್ದ ಪಕ್ಷದಲ್ಲಿ ಮಾತ್ರ. (ಬೇಕಿದ್ದಲ್ಲಿ ಸುದ್ದಿ ಸೇರಿಸಲು ಉತ್ಸಾಹವಿರುವವರು ಲೇಖನವೊಂದನ್ನು ಸೇರಿಸಿ ಸುದ್ದಿ ಕಾಲಂ ಸೇರುವಂತೆ ಮಾಡಬಹುದು). ಸುದ್ದಿ ಸೇರಿಸಲು ಕೆಲವು ಮಾರ್ಗದರ್ಶಿಗಳು:
- ಸುದ್ದಿ ಉದ್ದೇಶಿಸುವ ಪ್ರಮುಖ ವಸ್ತು/ವ್ಯಕ್ತಿ/ವಿಷಯಗಳ ಬಗ್ಗೆ ಕನ್ನಡ ವಿಶ್ವಕೋಶದಲ್ಲೊಂದು ಲೇಖನವಿರಬೇಕು.
- ಸುದ್ದಿ ಮಹತ್ವದ್ದಾಗಿರಬೇಕು - ಉದಾಹರಣೆಗೆ ಆಂಗ್ಲ ವಿಕಿಪೀಡಿಯ ನೋಡಿ.
- ಸುದ್ದಿ ಚುಟುಕಾಗಿರಬೇಕು - ಒಂದು ವಾಕ್ಯವಾದಲ್ಲಿ ಒಳಿತು.
- ಸಾಧ್ಯವಾದಷ್ಟು ಲೇಖನಗಳಿಗೆ ಸಂಪರ್ಕಗಳನ್ನು ಹೊಂದಿರಬೇಕು.
--ಹರಿ ಪ್ರಸಾದ್ ನಾಡಿಗ್ ೧೧:೨೫, ೮ ಜೂನ್ ೨೦೦೫ (UTC)
ಪರಿವಿಡಿ |
[ಬದಲಾಯಿಸಿ] ಆಪ್ತಮಿತ್ರ
ಪ್ರಿಯ ಅರುಣ್,
ಆಪ್ತಮಿತ್ರ ಚಿತ್ರದ ಬಗ್ಗೆ ನಿಮಗಿರುವ ಒಲವು ಅರ್ಥವಾಗುವಂತದ್ದು. ಆದರೆ ಅದು ವಿಕಿಪೀಡಿಯಾದ ಸುದ್ದಿ ಕಾಲಂನಲ್ಲಿ ಹಾಕುವುದು ವಿಕಿಪೀಡಿಯಾದ ಕಾರ್ಯನೀತಿಗಳ ಅನುವಯ ಸರಿಯಾಗಿರದು. ಚಿತ್ರ ಇನ್ನೂ ಒಂದು ವರ್ಷ ಪೂರೈಸಿಯೂ ಕೂಡ ಇಲ್ಲ. ಒಂದು ವರ್ಷ ಪೂರೈಸಿದ ನಂತರ ಸರಿಯಾದ ಶೀರ್ಷಿಕೆಯೊಂದನ್ನುಇ ನೀಡಿ ಹಾಕೋಣವಂತೆ. ಈಗ ತೆಗೆದಿರುತ್ತೇನೆ.
ಇನ್ನೊಂದು ಮಾತು. ವಿಕಿಪೀಡಿಯಾದಲ್ಲಿ POVಗಳನ್ನು ಹಾಕಬಾರದು. ಇದು ಒಂದು ವಿಶ್ವಕೋಶ. ಮಾಹಿತಿ ಮಾತ್ರ ಸಾಕು :) --ಹರಿ ಪ್ರಸಾದ್ ನಾಡಿಗ್ ೧೧:೪೩, ೮ ಜೂನ್ ೨೦೦೫ (UTC)
[ಬದಲಾಯಿಸಿ] ಸರಿ
ಹರಿಪ್ರಸಾದರವರೆ,
ನಿಮ್ಮ ಸಲಹೆಗಳನ್ನು ಒಪ್ಪುತ್ತೇನೆ. ಹೊಸದಾಗಿ ವಿಕಿಪೀಡಿಯಾಕ್ಕೆ ಬರೆಯಲು ಆರಂಭಿಸಿರುವ ನನಗೆ ಈ ವಿಚಾರಗಳು ತಿಳಿದಿರಲಿಲ್ಲ. ತಿಳಿಸಿದ್ದಕ್ಕೆ ಧನ್ಯವಾದಗಳು.
ಜೈ ಕರ್ನಾಟಕ, ಅರುಣ್,
- ಆಪ್ತಮಿತ್ರ ಹಾಗೂ ಸೌಂದರ್ಯ ಲೇಖನಗಳ ಮೇಲೆ ಬಹಳ ಒಳ್ಳೆಯ ಕೆಲಸ ಮಾಡಿದ್ದೀರಿ, ಅಭಿನಂದನೆಗಳು. ಅಲ್ಲಲ್ಲಿ ಕೆಲವು ಬದಲಾವಣೆಗಳನ್ನು ಮಾಡಿರುವೆ. ಸಾಧ್ಯವಾದಲ್ಲಿ ನೋಡಿ. ವಿಕಿಪೀಡಿಯಾ ಉಪಯೋಗಿಸುವಲ್ಲಿ ಏನೇ ತಿಳಿಯಬೇಕಿದ್ದರೂ ಮರೆಯದೆ ಮೇಯ್ಲಿಂಗ್ ಲಿಸ್ಟಿಗೆ ಸಂದೇಶ ಹಾಕಿ ಅಥವಾ [1] ಗೆ ಬರೆಯಿರಿ. ಧನ್ಯವಾದಗಳು.
- ಇನ್ನೊಂದು ವಿಷಯ... ಕನ್ನಡ ಸಿನೆಮಾ ಟೆಂಪ್ಲೇಟಿಗೆ ಚೆನ್ನಾಗಿರುವ ಒಂದು ಗ್ರಾಫಿಕ್ ಹುಡುಕುತ್ತಿರುವೆ. ಸಹಾಯ ಮಾಡುತ್ತೀರಾ? ಸಾಧ್ಯವಾದಲ್ಲಿ ಕೆಲವು ಹಳೆಯ ಸಿನೆಮಾಗಳ ಹಾಗು ಕೆಲವು ಹೊಸ ಸಿನೆಮಾಗಳ ಚಿತ್ರಗಳನ್ನು ಕಳುಹಿಸಿದರೆ (ಚಿತ್ರಗಳನ್ನು ಉಪಯೋಗಿಸಲು ಕಾಪಿರೈಟ್ ಅಡ್ಡಿ ಇರಬಾರದು), ಜಿಂಪ್ ಉಪಯೋಗಿಸಿ ಒಂದು ಗ್ರಾಫಿಕ್ ತಯಾರಿಸುವೆ. --ಹರಿ ಪ್ರಸಾದ್ ನಾಡಿಗ್ ೧೨:೨೪, ೮ ಜೂನ್ ೨೦೦೫ (UTC)
[ಬದಲಾಯಿಸಿ] ಹಾರುವ ತಟ್ಟೆಗಳು ಲೇಖನ
Cool Article. :).
Don't you think UFOs are better categorized under ವಿಸ್ಮಯಕಾರಿ ಸಂಗತಿಗಳು (which u have already done) than under ನಮ್ಮ ಸೌರಮಂಡಲ. (If they really existed) they wud surely not be a phenomena of Our Solarsystem alone. And abt the category ಖಗೋಳ. There's already a ಅಂತರಿಕ್ಷ. Probably you meant that. What dya say?
ಕ್ಷೀರ ಪಥ is Milky Way? What is ಆಕಾಶ ಗಂಗೆ. Galaxy???
btw me abt 2 finish MTech in SJCE. When did you passout???
- ನಿಜ. ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಆದರೆ ಸೇರಿಸಿರುವ ವರ್ಗ ನನಗೂ ಅಷ್ಟು ಸರಿ ಕಾಣಲಿಲ್ಲ. 'ವಿಸ್ಮಯಕಾರಿ ಸಂಗತಿಗಳು' ಚೆನ್ನಾಗಿದೆ. ಸದ್ಯಕ್ಕೆ 'Category'ಸ್ಪೆಷಲಿಸ್ಟ್ ಬಸವರಾಜ್ ರವರೇನೆ. :) --ಹರಿ ಪ್ರಸಾದ್ ನಾಡಿಗ್ ೧೦:೨೧, ೨೫ ಜೂನ್ ೨೦೦೫ (UTC)
ಹೌದು. ಇದನ್ನು ವಿಸ್ಮಯ ಕಾರೀ ಸಂಗತಿಗಳು ಮತ್ತು "ಅಂತರಿಕ್ಷ" ಗುಂಪಿಗೆ ಸೇರಿಸ ಬಹುದು. "ಅಂತರಿಕ್ಷ" ಗುಂಪಿರುವುದನ್ನು ನಾನು ಗಮನಿಸಿರಲಿಲ್ಲ. ಒಳ್ಳೆಯ ಸಲಹೆ. ಧನ್ಯವಾದಗಳು. ಆಕಾಶ ಗಂಗೆ ಎಂದರೆ ನೀವು ಹೇಳಿದಂತೆ Galaxy, ಮತ್ತು ಕ್ಷೀರ ಪಥವೆಂಬುದು ನಾವಿರುವ Galaxy ಅಂದರೆ Mily way. ನಾನು ೨೦೦೨ ರಲ್ಲಿ ನನ್ನ ಇಂಜಿನೀಯರಿಂಗನ್ನು (CS) SJCE ಯಲ್ಲಿ ಮುಗಿಸಿದ್ದೇನೆ.
- ಅರುಣ್
[ಬದಲಾಯಿಸಿ] ಕಾಸರಗೋಡು
ಕಾಸರಗೋಡಿನ ಬಗ್ಗೆ ನಿಮ್ಮ ಬಳಿಯಲ್ಲಿ ಮಾಹಿತಿ ಇದೆಯೆ? ಇದ್ದಲ್ಲಿ ಕಾಸರಗೋಡು ಲೇಖನಕ್ಕೆ ಸೇರಿಸಲಾಗುವುದಾ? --ಹರಿ ಪ್ರಸಾದ್ ನಾಡಿಗ್ ೧೬:೧೯, ೨೭ ಜೂನ್ ೨೦೦೫ (UTC)
ಸರಿ. ಕಾಸರಗೋಡಿನ ಬಗ್ಗೆ ಲೇಖನವನ್ನು ಬರೆಯುತ್ತೇನೆ.
- ಅರುಣ್
[ಬದಲಾಯಿಸಿ] "ಅಷ್ಠ " ಅಲ್ಲ "ಅಷ್ಟ"
ಹರಿಪ್ರಸಾದರವರೇ,
"ಅಷ್ಠ ಮಠಗಳು" ಲೇಖನದಲ್ಲಿ ಒಂದು ಕಾಗುಣಿತ ತಪ್ಪಾಗಿದೆ. "ಅಷ್ಟ" ಎಂದಾಗಬೇಕು. ದಯಮಾಡಿ ಇದನ್ನು ಸರಿಪಡಿಸುವಿರಾ?
- ಅರುಣ್
- ನೀವೆ ಬದಲಾಯಿಸಿಬಿಡಬಹುದಿತ್ತಲ್ಲವೇ? :) ಇದು ವಿಕಿ. ತಪ್ಪು ಕಂಡಕೂಡಲೆ ಬದಲಾಯಿಸಲು ಹಿಂಜರಿಯದಿರಿ.
- ಇನ್ನೊಂದು ವಿಷಯ. ಸಾಧ್ಯವಾದಲ್ಲಿ ಚರ್ಚೆ ಪುಟಗಳಲ್ಲಿ ಸಂದೇಶಗಳನ್ನು ಸೇರಿಸುವಾಗ ಸಹಿ ಹಾಕುವುದು ಮರೆಯಬೇಡಿ. ಸಹಿ ಹಾಕಲು --~~~~ಸೇರಿಸಿದರಾಯಿತು.
--ಹರಿ ಪ್ರಸಾದ್ ನಾಡಿಗ್ ೧೬:೧೪, ೨೮ ಜೂನ್ ೨೦೦೫ (UTC)
-
- ಲೇಖನದಲ್ಲಿ ನೀವಾಗಲೇ ತಿದ್ದಿರುವುದನ್ನು ಗಮನಿಸಿದೆ, ಧನ್ಯವಾದಗಳು. ಪುಟದ ಹೆಸರು ತಪ್ಪಾಗಿರುವ ಸನ್ನಿವೇಶಗಳಲ್ಲಿ ಸರಿಪಡಿಸಲು ಆಯಾ ಪುಟವನ್ನು ಸರಿಪಡಿಸಿದ ಹೆಸರಿನ ಪುಟಕ್ಕೆ ಸ್ಥಳಾಂತರಿಸಿದರಾಯಿತು. (ಪುಟವೊಂದನ್ನು ಸ್ಥಳಾಂತರಿಸಲು ಮೇಲೆ ಇರುವ ಸ್ಥಳಾಂತರಿಸಿ ಆಪ್ಶನ್ ನೋಡಿ). --ಹರಿ ಪ್ರಸಾದ್ ನಾಡಿಗ್ ೧೬:೩೦, ೨೮ ಜೂನ್ ೨೦೦೫ (UTC)
[ಬದಲಾಯಿಸಿ] wb ;)
welcome back! -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೨:೫೨, ೧೮ October ೨೦೦೫ (UTC)
[ಬದಲಾಯಿಸಿ] ಧನ್ಯವಾದಗಳು
ಹರಿಪ್ರಸಾದರವರೇ,
ಇಷ್ಟು ದಿನಗಳವರೆಗೆ ವಿಕಿಗಾಗಿ ಬರೆಯದೇ ಇದ್ದುದಕ್ಕಾಗಿ ಕ್ಷಮಿಸಿ. ಕಛೇರಿ ಕೆಲಸಗಳ ಮಧ್ಯೆ ಬಿಡುವೇ ಸಿಗಲಿಲ್ಲ.
-ಅರುಣ್
[ಬದಲಾಯಿಸಿ] Article request
Greetings Arunhegde!, Could you please kindly help me write a stub for this article? - It is based on the English article just several lines would be sufficient enough. Please. It does not matter if you are not a Christian. Your help would be gratefully appreciated (I do not know what the correct title for Kannada should be). -- Dave, 10 March 2006