ಅಲೆನ್ ಟ್ಯೂರಿಂಗ್
From Wikipedia
ಆಲನ್ ಟ್ಯುರಿಂಗ್ ೨೦ನೆ ಶತಮಾನದ ಮೊದಲ ಭಾಗದಲ್ಲಿ ಇಂಗ್ಲಾಂಡ್ ನಲ್ಲಿ ನೆಲೆಸಿದ್ದ ಗಣಿತ ಶಾಸ್ತ್ರಜ್ನ. ೧೯೦೦ ರಲ್ಲಿ ಜರ್ಮನಿಯ ಡೇವಿಡ್ ಹಿಲ್ಬರ್ಟ್ ಎಂಬಾತನ "ನಿರ್ಣಯ ಪ್ರಶ್ನೆ" (decision problem, Entscheidungsproblem) ಗೆ ಉತ್ತರ ನೀಡುವಂತೆ ೧೯೩೬ ರಲ್ಲಿ ಟ್ಯುರಿಂಗ್ ತನ್ನ "ಟ್ಯುರಿಂಗ್ ಯಂತ್ರ" ವನ್ನು ನಿರ್ಮಿಸಿದ.
ಈಗ ಟ್ಯುರಿಂಗ್ ಯಂತ್ರವನ್ನು "ಗಣೀಕೃತಗೊಳಿಸಬಲ್ಲ ಸೂತ್ರ" (computable algorithms)ಗಳ ಆಧಾರ ಎಂದು ಭಾವಿಸಲಾಗಿದೆ. ಯಾವುದೆ ಸಮಸ್ಯೆಯನ್ನು ಒಂದು ಗಣಕ ಯಂತ್ರದ ಮೂಲಕ ಬಿಡಿಸಬಹುದಾದರೆ, ಅದಕ್ಕೆ ಒಂದು ಸೂಕ್ತ ಟ್ಯುರಿಂಗ್ ಯಂತ್ರವನ್ನು ಸಹ ಸೃಷ್ಟಿಸಬಹುದು. ಟ್ಯುರಿಂಗ್ ಯಂತ್ರ ಯಾವ ಸಮಸ್ಯೆಯನ್ನು ಬಿಡಿಸಲಾಗದೊ, ಆ ಸಮಸ್ಯೆಯನ್ನು ಯಾವುದೇ ಗಣಕ ಯಂತ್ರದಿಂದ ಸಹ ಬಿಡಿಸಲು ಅಸಾಧ್ಯ. ಇಂತಹ ಸಮಸ್ಯೆ ಗಳನ್ನು "ಅನಿರ್ಣಾಯಕ ಸಮಸ್ಯೆ" (undecidable problems) ಎಂದು ಕರೆಯಲಾಗುತ್ತದೆ. ನಿಮ್ಮ ಗಣಕ ಯಂತ್ರ ಎಷ್ಟೇ ಬಲಶಾಲಿಯಾಗಿರಲಿ, ಅನಿರ್ಣಾಯಕ ಸಮಸ್ಯೆಗಳನ್ನು ಬಿಡಿಸಲು ಅಸಾಧ್ಯ.