ಎಚ್.ವಿ.ಸಾವಿತ್ರಮ್ಮ
From Wikipedia
ಎಚ್.ವಿ.ಸಾವಿತ್ರಮ್ಮನವರು ೧೯೧೩ ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದ ಬಿ.ಏ.ಪರೀಕ್ಷೆಯಲ್ಲಿ ಮೂರು ಚಿನ್ನದ ಪದಕಗಳನ್ನು ಹಾಗು ಎರಡು ಬಹುಮಾನಗಳನ್ನು ಪಡೆದ ಹೆಗ್ಗಳಿಕೆ ಇವರದು.
ರವೀಂದ್ರನಾಥ ಠಾಕೂರರ ಕತೆಗಳನ್ನು ಚಿನ್ನದ ದೋಣಿ ಎಂದು, ಕಾದಂಬರಿಯನ್ನು ನೌಕಾಘಾತ ಎಂದು, ಭವಾನಿ ಭಟ್ಟಾಚಾರ್ಯರ ಕೃತಿಯನ್ನು ಹಸಿವೊ ಹಸಿವು ಎಂದು ಭಾಷಾಂತರಿಸಿದ್ದಾರೆ. ಅದರಂತೆ ಚೆಕಾಫ್‍ನ ನಾಟಕವನ್ನು ಮದುವಣಗಿತ್ತಿ ಎಂದು ಅನುವಾದಿಸಿದ್ದಾರೆ. ಅಲ್ಲದೆ ಮಹಾತ್ಮಾ ಗಾಂಧಿ: ಜಗತ್ತಿಗೆ ಅವರ ಸಂದೇಶ ಸಹ ಇವರ ಒಂದು ಅನುವಾದಗ್ರಂಥ. ಮರುಮದುವೆ, ನಿರಾಶ್ರಿತೆ, ಲಕ್ಷ್ಮೀ ಇವು ಇವರ ಕಥಾಸಂಕಲನಗಳು. ಬಿಸಿಲುಗುದರೆ ಒಂದು ನೀಳ್ಗತೆ. ಎಚ್.ವಿ.ನಂಜುಂಡಯ್ಯ (ಜೀವನ ಮತ್ತು ಕಾರ್ಯ) ಇವರು ಬರೆದ ಜೀವನಚರಿತ್ರೆ. ಸೀತೆ, ರಾಮ,ರಾವಣ ಹಾಗು ವಿರಕ್ತೆ ಇವು ಇವರ ಕಾದಂಬರಿಗಳು.